ಬೆಂಗಳೂರು: ಆಕ್ರಮವಾಗಿ ಹೆಚ್ಚು ಬಡ್ಡಿ ವಸೂಲಿ ಮಾಡುತ್ತಿದ್ದ ನಗರದ ಏಳು ಫೈನಾನ್ಸ್ ಕಚೇರಿಗಳ ಸಿಸಿಬಿ ದಾಳಿ ನಡೆಸಿ ಏಳು ಮಂದಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದೆ.
ದಾಳಿ ವೇಳೆ 9 ಲಕ್ಷ ನಗದು , 500ಕ್ಕೂ ಚೆಕ್ಗಳು ಮತ್ತು ಲೀಸ್ ಅಗ್ರಿಮೆಂಟ್ ಸೇರಿದಂತೆ ಮಹತ್ವದ ದಾಖಲಾತಿಗಳನ್ನು ಜಪ್ತಿ ಮಾಡಿದೆ. ಸಿಸಿಬಿ ಡಿಸಿಪಿ ಗಿರೀಶ್ ನೇತೃತ್ವದಲ್ಲಿ ದಾಳಿಗಿಳಿದ ತಂಡ ನಗರದಲ್ಲಿ ಅಕ್ರಮವಾಗಿ ಫೈನಾನ್ಸ್ ನಡೆಸುತ್ತಿದ್ದ ಕಚೇರಿಗಳ ಮೇಲೆ ದಾಳಿ ನಡೆಸಿತು. ಬಂಧಿತ ಏಳು ಮಂದಿ ಆರೋಪಿಗಳು ಸಾರ್ವಜನಿಕರೊಂದಿಗೆ ಮೀಟರ್ ಬಡ್ಡಿ ವ್ಯವಹಾರ ಮಾಡುತ್ತಿದ್ದರು ಎನ್ನಲಾಗಿದೆ.
ವ್ಯವಹಾರ ನಡೆಸಲು ಯಾವುದೇ ಪ್ರಾಧಿಕಾರದಿಂದ ನೋಂದಣಿ ಮಾಡಿಕೊಂಡಿಲ್ಲ. ಕೊಡುವ ಸಾಲಕ್ಕೆ ಮೀಟರ್ ಬಡ್ಡಿ ಹಾಕಿ ವ್ಯಾಪಾರಿಗಳಿಗೆ ಸಾಲ ನೀಡುತ್ತಿದ್ದರು. ಭದ್ರತೆಗಾಗಿ ಹತ್ತು ಚೆಕ್ಗಳನ್ನು ತೆಗೆದಿರಿಸಿಕೊಳ್ಳುತ್ತಿದ್ದರು. ಒಂದು ವೇಳೆ ಸಾಲ ವಾಪಸ್ ನೀಡದಿದ್ದಲ್ಲಿ ಮನೆ ಬಳಿ ಹೋಗಿ ಗಲಾಟೆ ಮಾಡಿ ಸಾಲ ವಸೂಲಿ ಮಾಡುತ್ತಿದ್ದರು ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.