ಬೆಂಗಳೂರು: ಮನೆಯಲ್ಲಿ ರಹಸ್ಯವಾಗಿ ಚಿನ್ನ ಇಟ್ಟಿರುವ ಶಂಕೆ ಮೇರೆಗೆ ಅಟ್ಟಿಕಾ ಗೋಲ್ಡ್ ಕಂಪೆನಿ ಮಾಲೀಕನ ಮನೆ ಮೇಲೆ ಸಿಸಿಬಿ ದಾಳಿ ನಡೆಸಿದೆ.
ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಅಟ್ಟಿಕಾ ಕಂಪೆನಿಯ ಮಾಲೀಕ ಬಾಬು ತಮ್ಮ ಮನೆಯನ್ನು ರಿನೋವೇಷನ್ ಮಾಡಿಸುತ್ತಿದ್ದರು. ಮನೆಯ ಗೋಡೆಗಳಲ್ಲಿ ಅಕ್ರಮ ಚಿನ್ನ ಇಟ್ಟಿರುವ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳು, ಗೋಡೆಯೊಳಗೆ ನಿರ್ಮಿಸಿದ್ದ ರಹಸ್ಯ ಬಾಕ್ಸ್ ಒಡೆದು ಶೋಧ ಕಾರ್ಯನಡೆಸುತ್ತಿದ್ದಾರೆ.
ದಾಳಿ ವೇಳೆ ರಹಸ್ಯ ಸ್ಥಳಗಳು ಮಾತ್ರ ಪತ್ತೆಯಾಗಿವೆಯೇ ಹೊರತು ಚಿನ್ನಾಭರಣ ಪತ್ತೆಯಾಗಿಲ್ಲ ಎಂದು ಸಿಸಿಬಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.