ಬೆಂಗಳೂರು: ಸಿಸಿಬಿ ಅಧಿಕಾರಿಗಳು ಸಿಗರೇಟು ಡೀಲರ್ಗಳಿಂದ ಹಣ ಸುಲಿಗೆ ಮಾಡಿರುವ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಪೊಲೀಸ್ ಅಧಿಕಾರಿಗಳ ವಿರುದ್ಧ ಈಗಾಗಲೇ ಎಫ್ಐಆರ್ ದಾಖಲಾಗಿದ್ದು, ಇವರ ಜೊತೆ ಮತ್ತಿಬ್ಬರ ಹೆಸರುಗಳನ್ನು ಎಫ್ಐಆರ್ನಲ್ಲಿ ನಮೂದಿಸಲಾಗಿದೆ ಎಂದು ತಿಳಿದು ಬಂದಿದೆ.
![FIR Copy](https://etvbharatimages.akamaized.net/etvbharat/prod-images/7348617_thum.jpg)
ಬಳ್ಳಾರಿ ಮೂಲದ ಬಾಬು ರಾಜೇಂದ್ರ ಪ್ರಸಾದ್ ನಾಲ್ಕನೇ ಆರೋಪಿಯಾಗಿದ್ದು, ಈತನೇ ಹಗರಣದಲ್ಲಿ ಭಾಗಿಯಾದ ಪೊಲೀಸರಿಗೆ ಡೀಲ್ ತಂದಿದ್ದ ಎನ್ನುವ ವಿಚಾರ ತನಿಖೆ ವೇಳೆ ಬಯಲಾಗಿದೆ. ಈತ ಓರ್ವ ಪ್ರಭಾವಿ ಸಚಿವರ ಜೊತೆ ಸಂಪರ್ಕ ಹೊಂದಿದ್ದಾನೆ ಎನ್ನಲಾಗುತ್ತಿದೆ.
ಆರೋಪಿ ರಾಜೇಂದ್ರ ಪ್ರಸಾದ್ ಸೂಚನೆ ಮೇರೆಗೆ ಸಿಸಿಬಿಯ ಎಸಿಪಿ, ಇಬ್ಬರು ಇನ್ಸ್ಪೆಕ್ಟರ್ಗಳು ಸಿಗರೇಟು ವಿತರಕರು ಹಾಗೂ ಮಾಸ್ಕ್ ತಯಾರಿ ಮಾಡುತ್ತಿದ್ದ ಕಂಪನಿ ಮಾಲೀಕರಿಂದ ಲಂಚ ಪಡೆದು ಅವರವರೇ ಹಂಚಿಕೊಳ್ಳುವ ಮಾತುಕತೆ ನಡೆದಿತ್ತಂತೆ. ಆದರೆ ಅಷ್ಟರಲ್ಲೇ ಆರೋಪಿಗಳು ಎಸಿಬಿ ಬಲೆಗೆ ಬಿದ್ದಿದ್ದಾರೆ.
ಸಿಸಿಬಿಯಲ್ಲಿ ಎಸಿಪಿಯಾಗಿದ್ದ ಪ್ರಭುಶಂಕರ್, ಇನ್ಸ್ಪೆಕ್ಟರ್ಗಳಾದ ಅಜಯ್ ಹಾಗೂ ನಿರಂಜನ್ ಅಧಿಕಾರ ದುರುಪಯೋಗ ಮಾಡಿಕೊಂಡು ಕೋಟಿಗಟ್ಟಲೆ ಹಣ ಲಂಚ ಪಡೆದ ಆರೋಪದಡಿ ಅಮಾನತು ಆಗಿದ್ದಾರೆ. ಮತ್ತೊಂದೆಡೆ ಎಸಿಬಿಯಲ್ಲಿ ಕೂಡ ಎಫ್ಐಆರ್ ದಾಖಲಾಗಿರುವ ಕಾರಣ ಇಂದು ಅಧಿಕಾರಿಗಳು ತನಿಖೆಗೆ ಹಾಜರಾಗುವುದು ಅನಿವಾರ್ಯವಾಗಿದೆ.