ETV Bharat / state

ಮಾರಕಾಸ್ತ್ರ ಹಿಡಿದು ದರೋಡೆಗೆ ಸಜ್ಜಾಗಿದ್ದವರ ಪ್ಲಾನ್ ವಿಫಲಗೊಳಿಸಿದ ಸಿಸಿಬಿ - Conspiracy theft

ಆರೋಪಿಗಳು ನಗರದ ಹಲವೆಡೆ ಕೊಲೆ ಹಾಗೂ ದರೋಡೆ ಯತ್ನ ಪ್ರಕರಣಗಳಲ್ಲಿ ಪಾಲ್ಗೊಂಡಿದ್ದು, ಈ ಸಂಬಂಧ ವಿವಿಧ ಠಣೆಗಳಲ್ಲಿ ಪ್ರರಕಣ ದಾಖಲಾಗಿವೆ..

ಸಿಸಿಬಿ
ಸಿಸಿಬಿ
author img

By

Published : Dec 4, 2020, 4:00 PM IST

ಬೆಂಗಳೂರು : ರಾತ್ರಿ ವೇಳೆ ಒಂಟಿಯಾಗಿ ಸಂಚರಿಸುವವರನ್ನು ಗುರಿಯಾಗಿಸಿಕೊಂಡು ಹಲ್ಲೆ ನಡೆಸಿ ಅವರಿಂದ ಹಣ, ಚಿನ್ನಾಭರಣ ದೋಚಲು ಸಂಚು ರೂಪಿಸಿದ್ದ ದರೋಡೆಕೋರರನ್ನು ಸಿಸಿಬಿಯ ಸಂಘಟಿತ ಅಪರಾಧ ದಳ ಪೊಲೀಸರು ಬಂಧಿಸಿದ್ದಾರೆ‌‌.

ಸಂತೋಷ್, ಮಂಜುನಾಥ, ವಿನಯ್ ಕುಮಾರ್ ಎಂಬುವರೇ ಬಂಧಿತ ಆರೋಪಿಗಳು. ಇವರೆಲ್ಲರೂ ನಗರದ ಹಲವೆಡೆ ಕೊಲೆ ಹಾಗೂ ದರೋಡೆ ಯತ್ನ ಪ್ರಕರಣಗಳಲ್ಲಿ ಪಾಲ್ಗೊಂಡಿದ್ದು ಈ ಸಂಬಂಧ ವಿವಿಧ ಠಣೆಗಳಲ್ಲಿ ಪ್ರರಕಣ ದಾಖಲಾಗಿವೆ.

ಇದನ್ನೂ ಓದಿ.. ಚಿರತೆ ಚರ್ಮ ಮಾರಾಟಕ್ಕೆ ಯತ್ನ: ಆರೋಪಿ ಬಂಧನ

ಗುರುವಾರ ರಾತ್ರಿ ಸಂಪಂಗಿ ರಾಮನಗರ ಠಾಣಾ ವ್ಯಾಪ್ತಿಯ ಜನನಿಬಿಡ ರಸ್ತೆಯೊಂದರಲ್ಲಿ ನಿಂತು, ದಾರಿಯಲ್ಲಿ ಒಂಟಿಯಾಗಿ ಓಡಾಡುವ ಸಾರ್ವಜನಿಕರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಅವರಿಂದ ನಗದು-ಚಿನ್ನಾಭರಣಗಳನ್ನು ದೋಚಲು ಆರೋಪಿಗಳು ಸಜ್ಜಾಗಿದ್ದರು. ಈ ಕುರಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಆರೋಪಿಗಳ ಪ್ಲಾನ್‌ ವಿಫಲಗೊಳಿಸಿ ಬಂಧಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.