ETV Bharat / state

ದರೋಡೆಗೆ ಹೊಂಚು ಹಾಕಿದ್ದ ನಾಲ್ವರು ಖದೀಮರ ಹೆಡೆಮುರಿ ಕಟ್ಟಿದ ಸಿಸಿಬಿ - robbers in Banglore

ನಿನ್ನೆ ರಾತ್ರಿ ಹನುಮಂತಪ್ಪ ಲೇಔಟ್ ಬಳಿ ನಾಲ್ವರು ದರೋಡೆಕೋರರು ದಾರಿಹೋಕರಿಗೆ ಮಾರಕಾಸ್ತ್ರ ತೋರಿಸಿ, ಅವರ ಬಳಿಯಿದ್ದ ಹಣ, ಚಿನ್ನಾಭರಣಗಳನ್ನು ದೋಚಲು ಯತ್ನಿಸುತ್ತಿದ್ದ ವೇಳೆ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ದರೋಡೆಕೋರರು
author img

By

Published : Sep 1, 2019, 4:47 PM IST

ಬೆಂಗಳೂರು : ದರೋಡೆ ಮಾಡಲು ಹೊಂಚು ಹಾಕಿದ್ದ ನಾಲ್ವರು ಖದೀಮರ ಹೆಡೆಮುರಿ ಕಟ್ಟುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.

ನಿನ್ನೆ ರಾತ್ರಿ ಹನುಮಂತಪ್ಪ ಲೇಔಟ್ ಬಳಿ ನಾಲ್ವರು ದರೋಡೆಕೋರರು ದಾರಿಹೋಕರಿಗೆ ಮಾರಕಾಸ್ತ್ರ ತೋರಿಸಿ, ಅವರ ಬಳಿಯಿದ್ದ ಹಣ, ಚಿನ್ನಾಭರಣಗಳನ್ನು ದೋಚಲು ಯತ್ನಿಸುತ್ತಿದ್ದ ವೇಳೆ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿಸಿಬಿ ಸಂಘಟಿತ ಅಪರಾಧ ದಳದ ಎಸಿಪಿ ನಾಗರಾಜ್ ನೇತೃತ್ವದ ತಂಡ, ಮಾರಕಾಸ್ತ್ರಗಳ ಸಮೇತ ದರೋಡೆಕೋರರನ್ನು ವಶಕ್ಕೆ ಪಡೆದಿದ್ದಾರೆ.

ಜಗದೀಶ್, ಸತ್ಯರಾಜ್, ರವಿಕಿರಣ್ ಹಾಗೂ ನಿಖಿಲ್ ಬಂಧಿತ ದರೋಡೆಕೋರರು. ಒಂದು ಲಾಂಗ್, ಕತ್ತಿ, ಖಾರದಪುಡಿ ಪೊಟ್ಟಣಗಳನ್ನು ಈ ಖತರ್ನಾಕ್​ ದರೋಡೆಕೋರರಿಂದ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ಪೈಕಿ ಜಗ್ಗದೀಶ್ ಅಲಿಯಾಸ್ ಉಲ್ಲಾಳ ಜಗ್ಗನ ಮೇಲೆ ಅತ್ಯಾಚಾರ ಹಾಗೂ ಕೊಲೆ ಯತ್ನ ಕೇಸ್​, ಸತ್ಯರಾಜ್ ಮೇಲೆ ಕೊಲೆ ಪ್ರಕರಣ, ಕಿರಣ್ ಮೇಲೆ ದರೋಡೆ ಯತ್ನದ ಪ್ರಕರಣಗಳು ದಾಖಲಾಗಿವೆ.

Intro:Body:ದರೋಡೆಗೆ ಹೊಂಚು ಹಾಕುತ್ತಿದ್ದ ನಾಲ್ವರು ದರೋಡೆಕೋರರ ಬಂಧನ
ಬೆಂಗಳೂರು: ಹೊಂಚು ಹಾಕಿ ದರೋಡೆಗೆ ಸಂಚು ರೂಪಿಸಿ ಮಾರಕಾಸ್ತ್ರಗಳಿಂದ ಅಮಾಯಕರಿಗೆ ಹಲ್ಲೆ ಮಾಡಲು ಮುಂದಾಗಿದ್ದ ಅಡ್ಡೆ ಮೇಲೆ ದಾಳಿ ನಡೆಸಿದ ಸಿಸಿಬಿ ಈ ಸಂಬಂಧ ನಾಲ್ವರು ದರೋಡೆಕೋರರನ್ನು ಬಂಧಿಸಿದ್ದಾರೆ.
ಜಗದೀಶ್, ಸತ್ಯರಾಜ್, ರವಿಕಿರಣ್ ಹಾಗೂ ನಿಖಿಲ್ ಬಂಧಿತ ದರೋಡೆಕೋರರು. ಸಿಸಿಬಿ ಸಂಘಟಿತ ಅಪರಾಧ ದಳದ ಎಸಿಪಿ ನಾಗರಾಜ್ ನೇತೃತ್ವದ ತಂಡ ಆ.31ರ ರಾತ್ರಿ ಜ್ಱ.. ನಾಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ಹನುಮಕ್ಕ ಹನುಮಂತಪ್ಪ ಲೇಔಟ್ ಬಳಿ ದಾರಿಯಲ್ಲಿ ಹೋಗುವ ಸಾರ್ವಜನಿಕರಿಗೆ ಮಾರಕಾಸ್ತ್ರ ತೋರಿಸಿ ಪ್ರತಿರೋಧ ವ್ಯಕ್ತಪಡಿಸಿದರೆ ಹಲ್ಲೆಗೂ ಮುಂದಾಗಿದ್ದರು. ಈ ವೇಳೆ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಆರೋಪಿಗಳನ್ನು ಅರೆಸ್ಟ್ ಮಾಡಿ ಅವರಿಂದ ಒಂದು ಲಾಂಗ್, ಕತ್ತಿ, ಖಾರದಪುಡಿ ಪಟ್ಟಣ ಜಪ್ತಿ ಮಾಡಿಕೊಂಡಿದ್ದಾರೆ.
ಆರೋಪಿಗಳ ಪೈಕಿ ಜಗ್ಗದೀಶ್ ಆಲಿಯಾಸ್ ಉಲ್ಲಾಳ ಜಗ್ಗನ ಮೇಲೆ ಅತ್ಯಾಚಾರ ಹಾಗೂ ಕೊಲೆ ಯತ್ನ , ಸತ್ಯರಾಜ್ ಮೇಲೆ ಕೊಲೆ ಪ್ರಕರಣ, ಕಿರಣ್ ದರೋಡೆ ಯತ್ನ ಪ್ರಕರಣ ದಾಖಲಾಗಿವೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.