ಬೆಂಗಳೂರು: ರಾಜ್ಯಾದ್ಯಂತ ಕೊರೊನಾ ಭೀತಿ ಹೆಚ್ಚಾಗುತ್ತಿದ್ದು, ಇದನ್ನು ದುರುಪಯೋಗ ಮಾಡಿಕೊಂಡ ಕೆಲಕಿಡಿಗೇಡಿಗಳು ನಕಲಿ ಸ್ಯಾನಿಟೈಸರ್ ಹಾಗೂ ಹ್ಯಾಂಡ್ ರಬ್ಗಳನ್ನು ಸಿದ್ದಪಡಿಸುತ್ತಿದ್ದ ಜಾಲವನ್ನು ಭೇದಿಸುವಲ್ಲಿ ಸಿಸಿಬಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ರಾಜು, ಚಂದನ್ ಬಂಧಿತ ಆರೋಪಿಗಳು. ಇವರು ಜ್ಯೋತಿ ಕೆಮಿಕಲ್ಸ್ ಗೋಡನ್ ಹಾಗೂ ಸ್ವಾತಿ ಗೋಡನ್ನಲ್ಲಿ ನಕಲಿ ಹ್ಯಾಂಡ್ ಸ್ಯಾನಿಟೈಸರ್ ಹಾಗೂ ಹ್ಯಾಂಡ್ ರಬ್ಗಳನ್ನು ಸಿದ್ಧಪಡಿಸಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದರು. ಈ ಮಾಹಿತಿ ತಿಳಿದು ದಾಳಿ ನಡೆಸಿದ ಸಿಸಿಬಿ ಪೊಲೀಸರು, ಮಾರಾಟಕ್ಕೆ ಇಟ್ಟಿದ್ದಂತಹ 8500 ಬಾಟಲ್ಗಳು, ಖಾಲಿ ಪ್ಲಾಸ್ಟಿಕ್ ಬಾಟಲ್ಗಳು, ಒಟ್ಟು 4500 ನ 35 ಲೀಟರ್ನ ಐಸೊಪ್ರೊಪಿಲ್ ಆಲ್ಕೋಹಾಲ್( isopropyl alcohol ) 8 ಕ್ಯಾನ್ಗಳು ಸೇರಿದಂತೆ ಒಟ್ಟು 280 ಲೀಟರ್ 4500 ಸ್ಟಿಕರ್ ವಶಪಡಿಸಿದ್ದಾರೆ.
ಯಾವ ರೀತಿ ತಯಾರಿಸುತ್ತಿದ್ದರು:
ಆರೋಪಿತರು 50 ಲೀಟರ್ ಐಸೊಪ್ರೊಪಿಲ್ ಆಲ್ಕೋಹಾಲ್( isopropyl alcohol) ಗೆ 15-20 ಎಂಎಲ್ ಒಂದೂವರೆ ಸ್ಪೂನ್ನಷ್ಟು ಬ್ರಿಲಿಂಯೆನ್ಟ್ ಬ್ಲೂ ಕಲರ್ ಹಾಗೂ 10.15 ಎಂಎಲ್ ಒಂದು ಸ್ಪೂನ್ ನಷ್ಟು ಪರ್ಮಿಮ್ ಮಿಶ್ರಣ ಮಾಡಿ 50 ಲೀಟರ್ ಹ್ಯಾಂಡ್ ಸ್ಯಾನಿಟೈಸರ್ ಹಾಗೂ ಹ್ಯಾಂಡ್ ರಬ್ ತಯಾರಿಸುತ್ತಿದ್ದರು.
100 ಎಂಎಲ್ ಗೆ -170 ರೂ,
200ಎಂಎಲ್ಗೆ- 325ರೂ
500ಎಂಎಲ್ಗೆ- 620ರೂ ದರ ನಿಗದಿ ಮಾಡಿ ಪ್ಲಾಸ್ಟಿಕ್ ಬಾಟಲ್ಗಳಲ್ಲಿ ತುಂಬಿಸಿ ಕಂಪೆನಿಯ ಸ್ಟಿಕರ್ಗಳನ್ನು ಹಾಕಿ ಮಾರಟ ಮಾಡುತ್ತಿದ್ದರು. ಆರೋಪಿಗಳ ವಿರುದ್ಧ ಚಾಮರಾಜಪೇಟೆ ಪೊಲೀಸ್ ಠಾಣೆ ಹಾಗೂ ವಿ.ವಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.