ETV Bharat / state

ಆನ್​ಲೈನ್ ಮೂಲಕ ಪೋಕರ್ ಗೇಮ್‌ ಆಡುತ್ತಿದ್ದ ಆರೋಪಿಗಳ ಬಂಧನ - ಪೋಕರ್ ಆಡುತ್ತಿದ್ದ ಆರೋಪಿಗಳು ಅಂದರ್​

ಆನ್​ಲೈನ್ ಮೂಲಕ ಪೋಕರ್ ಗೇಮ್ ಆಟದಲ್ಲಿ ತೊಡಗಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.

CCB police arrested 3 persons
ಆನ್​ಲೈನ್ ಮೂಲಕ ಪೋಕರ್ ಆಡುತ್ತಿದ್ದ ಆರೋಪಿಗಳು ಅಂದರ್​
author img

By

Published : Apr 30, 2020, 2:47 PM IST

ಬೆಂಗಳೂರು: ಲಾಕೌಡೌನ್ ಹಿನ್ನೆಲೆಯಲ್ಲಿ ಸಿಲಿಕಾನ್​ ಸಿಟಿಯಲ್ಲಿ ಪರವಾನಗಿ ಇಲ್ಲದೆ ಆನ್‌ಲೈನ್‌ ಗೇಮ್ ಆಡುವವರ ಹಾವಳಿ ದಿನೇ ದಿನೇ ಹೆಚ್ಚುತ್ತಿದೆ. ಸಿಸಿಬಿ ಪೊಲೀಸರು ಈ ಆಟದಲ್ಲಿ ತೊಡಗಿದ್ದ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

CCB police arrested 3 persons
ಹೆಚ್ಚುವರಿ‌ ಆಯುಕ್ತ ಸಂದೀಪ್ ಪಾಟೀಲ್ ಟ್ವೀಟ್

ಮುನಿರಾಜ್, ಶಂಕರಪ್ಪ, ಮಹಮ್ಮದ್ ಜಾಬೀರ್ ಬಂಧಿತ ಆರೋಪಿಗಳು. ನಗರದ ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಬಳಿ ಆರೋಪಿಗಳು, ಮೊಬೈಲ್ ಫೋನ್​ನಲ್ಲಿ ವಾಟ್ಸ್‌ ಆ್ಯಪ್ ಗ್ರೂಪ್ ಮಾಡಿಕೊಂಡು ಜೂಜಾಟ ಆಡುವ ಪಂಟರ್​ಗಳಿಂದ ಹಣ ಕಟ್ಟಿಸಿಕೊಂಡು ಲೈಸೆನ್ಸ್ ಇಲ್ಲದೇ ಪೋಕರ್ ಗೇಮ್ ಆಟವಾಡುತ್ತಿದ್ದರು. ಈ ಬಗ್ಗೆ ಮಾಹಿತಿ ತಿಳಿದು ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ದಾಳಿ ಮಾಡಿ ಆರೋಪಿಗಳನ್ನ ಬಂಧಿಸಲಾಗಿದ್ದು ಮೊಬೈಲ್, ಹಣ ವಶಪಡಿಸಿಕೊಳ್ಳಲಾಗಿದೆ.

ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಮತ್ತೋರ್ವ ಕಿಂಗ್ ಪಿನ್ ಕಿಶೋರ್ ಎಂಬಾತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಈ‌ ಕುರಿತು ಹೆಚ್ಚುವರಿ‌ ಆಯುಕ್ತ ಸಂದೀಪ್ ಪಾಟೀಲ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.