ETV Bharat / state

ಡ್ರಗ್ಸ್​​ ಪ್ರಕರಣ: ಕಾಸ್ಟ್ಯೂಮ್ ಡಿಸೈನರ್ ರಮೇಶ್ ದಂಬೆಲ್​ಗೆ ಸಿಸಿಬಿ ನೋಟಿಸ್​​ - Costume Designer Ramesh Dambel

ಸ್ಯಾಂಡಲ್​ವುಡ್​ಗೆ​ ಡ್ರಗ್ಸ್ ಮಾಫಿಯಾ​ ನಂಟು ಆರೋಪ ಪ್ರಕರಣ ದಿನದಿಂದ ದಿನಕ್ಕೆ ಕುತೂಹಲ ಕೆರಳಿಸುತ್ತಿದ್ದು, ಸದ್ಯ ಕಾಸ್ಟ್ಯೂಮ್ ಡಿಸೈನರ್ ರಮೇಶ್ ದಂಬೆಲ್ ಎಂಬುವವರಿಗೆ ಇಂದು ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನೋಟಿಸ್ ಜಾರಿ ಮಾಡಿದೆ.

CCB Notice to Costume Designer Ramesh Dambel
ಡ್ರಗ್ಸ್​​ ಜಾಲ: ಕಾಸ್ಟ್ಯೂಮ್ ಡಿಸೈನರ್ ರಮೇಶ್ ದಂಬೆಲ್​ಗೆ ಸಿಸಿಬಿ ನೋಟಿಸ್​​
author img

By

Published : Sep 26, 2020, 11:24 AM IST

Updated : Sep 26, 2020, 11:56 AM IST

ಬೆಂಗಳೂರು: ಸ್ಯಾಂಡಲ್​​ವುಡ್​ಗೆ ಡ್ರಗ್ಸ್​ ಮಾಫಿಯಾ ಲಿಂಕ್ ಆರೋಪ ಪ್ರಕರಣ ಸಂಬಂಧ ಕಾಸ್ಟ್ಯೂಮ್ ಡಿಸೈನರ್ ರಮೇಶ್ ದಂಬೆಲ್ ಎಂಬುವವರಿಗೆ ಇಂದು ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನೋಟಿಸ್ ಜಾರಿ ಮಾಡಿದೆ.

ನೋಟಿಸ್​​ ಜಾರಿ ಹಿನ್ನೆಲೆಯಲ್ಲ ರಮೇಶ್ ದೆಂಬಲ್ ಜೊತೆ ಸಂಪರ್ಕದಲ್ಲಿದ್ದ ಸ್ಯಾಂಡಲ್​ವುಡ್ ನಟ-ನಟಿಯರಿಗೆ ಆತಂಕ ಶುರುವಾಗಿದೆ. ಹಲವು ನಟ-ನಟಿಯರ ಆಪ್ತನಾಗಿದ್ದ ರಮೇಶ್ ದೆಂಬಲ್ ಆಯೋಜಿಸುತ್ತಿದ್ದ ಪಾರ್ಟಿಯಲ್ಲಿ ಅವರೆಲ್ಲರೂ ಭಾಗಿಯಾಗಿದ್ದರು ಎನ್ನಲಾಗಿದೆ.

ಇದೇ ಪಾರ್ಟಿಯಲ್ಲಿ ಯಾರೆಲ್ಲಾ ಭಾಗವಹಿಸಿದ್ದರು ಎಂಬುದು ವಿಚಾರಣೆ ನಡೆಸಿದ ಬಳಿಕವಷ್ಟೇ ತಿಳಿದು ಬರಲಿದೆ. ಪೊಲೀಸ್ ವಶದಲ್ಲಿದಲ್ಲಿರುವ ವಿರೇನ್ ಖನ್ನಾ ದೊಡ್ಡ ಪಾರ್ಟಿಗಳನ್ನು ಆಯೋಜನೆ ಮಾಡುತ್ತಿದ್ದ. ಸದ್ಯ ರಮೇಶ್ ದಂಬೆಲ್ ವಿಚಾರಣೆಗೆ ಹಾಜರಾದ ಬಳಿಕ ಆರೋಪಿಗಳೊಂದಿಗಿರುವ ನಂಟಿನ ಬಗ್ಗೆ ತನಿಖಾಧಿಕಾರಿಗಳು ಪ್ರಶ್ನಿಸಲಿದ್ದಾರೆ.

Last Updated : Sep 26, 2020, 11:56 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.