ETV Bharat / state

ಕೆಪಿಎಲ್​​ನಲ್ಲಿ ಆಡಿದ ತಂಡದ ಮಾಲೀಕರಿಗೆ ಡೆಡ್​​​ಲೈನ್ ನೀಡಿದ ಸಿಸಿಬಿ

ಸಿಸಿಬಿ ಅಧಿಕಾರಿಗಳು ಕೆಪಿಎಲ್​​ನ 7 ತಂಡದ ಮಾಲೀಕರಿಗೆ ಡೆಡ್​​​ಲೈನ್ ನೀಡಿದ್ದು, ಇದೇ 28ರೊಳಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.

ಡೆಡ್​​​ಲೈನ್ ನೀಡಿದ ಸಿಸಿಬಿ
author img

By

Published : Nov 24, 2019, 10:05 AM IST

ಬೆಂಗಳೂರು: ಕೆಪಿಎಲ್ ಮ್ಯಾಚ್​​ ಫಿಕ್ಸಿಂಗ್ ಪ್ರಕರಣ ಸಂಬಂಧ ಕೆಪಿಎಲ್​​ನಲ್ಲಿ ಆಡಿದ ತಂಡದ 7 ಮಾಲೀಕರಿಗೆ ಸಿಸಿಬಿ ನೋಟಿಸ್ ಜಾರಿ ಮಾಡಿದೆ.

ಕೆಪಿಎಲ್ ಫಿಕ್ಸಿಂಗ್ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ತಂಡ ಪ್ರತಿಷ್ಠಿತ ಆಟಗಾರರು ಮಾತ್ರವಲ್ಲದೇ ಕೆಪಿಎಲ್​​ನಲ್ಲಿ ಆಡಿದ ತಂಡದ 7 ಮಾಲೀಕರಿಗೆ ನೋಟಿಸ್ ಜಾರಿ ಮಾಡಿತ್ತು.ಇಲ್ಲಿಯವರೆಗೆ ಸಿಸಿಬಿ ವಿಚಾರಣೆಗೆ ತಂಡದ ಮಾಲೀಕರು ಹಾಜರಾಗದೆ ಸಿಸಿಬಿ ನೋಟಿಸ್​​ಗೂ ಕ್ಯಾರೆ ಅನ್ನದೆ ಸಿಸಿಬಿ ಅಧಿಕಾರಿಗಳು ಗರಂ ಆಗುವ ರೀತಿ ಮಾಡಿದ್ದಾರೆ. ಹೀಗಾಗಿ ಸಿಸಿಬಿ ಅಧಿಕಾರಿಗಳು ತಂಡದ ಮಾಲೀಕರ ಮೇಲೆ ಅನುಮಾನ ವ್ಯಕ್ತಪಡಿಸಿ 7 ತಂಡದ ಮಾಲೀಕರಿಗೆ ಡೆಡ್ ಲೈನ್ ನೀಡಿದ್ದು ಇದೇ 28ರ ಒಳಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಅದು ಕೂಡ ತಂಡದ ಮಾಲೀಕರೇ ವಿಚಾರಣೆಗೆ ಹಾಜರಾಗಬೇಕೆಂದು ಸೂಚಿಸಿದ್ದಾರೆ. ಯಾಕಂದ್ರೆ, ಇಲ್ಲಿಯವರೆಗೆ ಬೆಂಗಳೂರು ಬ್ಲಾಸ್ಟರ್ ತಂಡ ಹಾಗೂ ಮೈಸೂರು ತಂಡದ ಮಾಲೀಕರು ತಮ್ಮಅಡ್ವೈಸರ್​​ ಕಳುಹಿಸಿ ಸುಮ್ಮನಾಗಿದ್ರು. ಹೀಗಾಗಿ ಸಿಸಿಬಿ ಈ ನಿರ್ಧಾರ ತೆಗೆದುಕೊಂಡಿದೆ.

ತಂಡದ ಮಾಲೀಕರಿಗೆ ನೋಟಿಸ್ ನೀಡಲು ಕಾರಣ:

ಕೆಪಿಎಲ್ ಬಹುಕೋಟಿ ಮ್ಯಾಚ್ ಫಿಕ್ಸಿಂಗ್ ಪ್ರಕರಣದ ತನಿಖೆ ಕೈಗೆತ್ತಿಕೊಂಡು ತನಿಖೆ ನೆಡೆಸುತ್ತಿರುವ ಸಿಸಿಬಿಗೆ ಆಟಗಾರರ ತನಿಖೆ ವೇಳೆ ಕೆಲ ಮಾಹಿತಿಗಳು ಬಹಿರಂಗವಾಗಿದ್ದು, ಕೆಪಿಎಲ್ ತಂಡದ ಮಾಲೀಕರು ಹಾಗೂ ನಿರ್ವಾಹಕರು, ಮ್ಯಾನೇಜ್ಮೆಂಟ್ ಪಾತ್ರ ಕಂಡು ಬಂದಿರುವುದರಿಂದ ಈ ನೊಟೀಸ್ ಜಾರಿ ಮಾಡಲಾಗಿದ್ದು ಪಂದ್ಯಾವಳಿಯಲ್ಲಿರುವ ತಂಡಗಳು ಯಾವುದು, ಮ್ಯಾನೇಜ್ಮೆಂಟ್ ಸದಸ್ಯರು ಯಾರು? ಯಾವ ತಂಡದ ಆಟಗಾರರು ಯಾರ್ಯಾರು? ಈಗಾಗ್ಲೆ ಬಂಧನವಾದ ಬುಕ್ಕಿಗಳು ಪರಿಚಯನಾ? ಯಾವಾಗಲಿಂದ ಪರಿಚಯ? ನಿಮ್ಮ ತಂಡದ ಆಟಗಾರರನ್ನು ಫಿಕ್ಸ್ ಮಾಡುವಾಗ ನಿಮ್ಮ ಗಮನಕ್ಕೆ ಬಂದಿಲ್ವಾ ಹೀಗೆ ಕೆಲ ಪ್ರಶ್ನೆಗಳಿಗೆ ಉತ್ತರಿಸುವಂತೆ ನೋಟಿಸ್ ಹೊರಡಿಸಲಾಗಿದೆ.

ಸದ್ಯ ದಿನದಿಂದ ದಿನಕ್ಕೆ ತಿರುವು ಪಡೆಯುತ್ತಿರುವ ಫಿಕ್ಸಿಂಗ್ ಪ್ರಕರಣ ಸದ್ಯಕ್ಕೆ ತಂಡದ ಮಾಲೀಕರ ಬುಡಕ್ಕೆ ಬಂದಿದೆ. ಈ ಕುರಿತು ಸಿಸಿಬಿ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದು, ಪ್ರಕರಣದಲ್ಲಿ ಯಾರದೇ ಪಾತ್ರ ಸಾಬೀತಾದರೂ ಬಂಧನ ಮಾತ್ರ ಖಚಿತ. ಎಷ್ಟೇ ಒತ್ತಡ ಬರಲಿ ನಿಷ್ಠೆಯಿಂದ ತನಿಖೆ ನಡೆಸುವುದೇ ನಮ್ಮ ಉದ್ದೇಶ ಎಂದಿದ್ದಾರೆ.

Intro:ಕೆ.ಪಿ ಎಲ್ ನಲ್ಲಿ ಆಡಿದ ತಂಡದ ಮಾಲೀಕರಿಗೆ ಡೆಡ್ ಲೈನ್ ನೀಡಿದ ಸಿಸಿಬಿ

ಕೆಪಿಎಲ್ ಫಿಕ್ಸಿಂಗ್ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ತಂಡ ಪ್ರತಿಷ್ಟಿತ ಆಟಗಾರರು ಮಾತ್ರವಲ್ಲದೇ ಕೆಪಿ ಎಲ್ ನಲ್ಲಿ ಆಡಿದ ತಂಡದ 7ಮಾಲೀಕರಿಗೆ ನೋಟಿಸ್ ಜಾರಿ ಮಾಡಿತ್ತು. ಇಲ್ಲಿಯವರೆಗೆ ಸಿಸಿಬಿ ವಿಚಾರಣೆಗೆ ತಂಡದ ಮಾಲೀಕರು ಹಾಜರಾಗದೆ ಸಿಸಿಬಿ ನೋಟಿಸ್ಗೆ ಕ್ಯಾರೆ ಅನ್ನದೇ ಸಿಸಿಬಿ ಅಧಿಕಾರಿಗಳು ಗರಂ ಆಗುವ ರೀತಿ ಮಾಡಿದ್ದಾರೆ.

ಹೀಗಾಗಿ ಸಿಸಿಬಿ ಅಧಿಕಾರಿಗಳು ತಂಡದ ಮಾಲೀಕರ ಮೇಲೆ ಬಹಳ ಅನುಮಾನ ವ್ಯಕ್ತಪಡಿಸಿ 7ತಂಡದ ಮಾಲೀಕರಿಗೆ ಡೆಡ್ ಲೈನ್ ನೀಡಿದ್ದು ಇದೇ ,28ರ ಒಳಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಅದು ಕೂಡ ತಂಡದ ಮಾಲೀಕರೆ ವಿಚಾರಣೆಗೆ ಹಾಜರಾಗಬೇಕೆಂದು ಸೂಚಿಸಿದ್ದಾರೆ. ಯಾಕಂದ್ರೆ ಇಲ್ಲಿಯವರೆಗೆ ಬೆಂಗಳೂರು ಬ್ಲಾಸ್ಟರ್ ತಂಡ ಹಾಗೂ ಮೈಸೂರು ತಂಡದ ಮಾಲಿಕರು ತಮ್ಮ ಅಡೈಸರ್ ಕಳುಹಿಸಿ ಸುಮ್ಮನಾಗಿದ್ರು. ಹೀಗಾಗಿ ಸಿಸಿಬಿ ಈ ನಿರ್ಧಾರ ತಗೊಂಡಿದ್ದಾರೆ.

ಯಾಕೆ ತಂಡ ಮಾಲೀಕರಿಗೆ ನೋಟಿಸ್..

ಕೆಪಿಎಲ್ ಬಹುಕೋಟಿ ಮ್ಯಾಚ್ ಫಿಕ್ಸಿಂಗ್ ಪ್ರಕರಣದ ತನಿಖೆ ಕೈಗೆತ್ತಿಕೊಂಡು ತನಿಖೆ ನೆಡೆಸುತ್ತಿರುವ ಸಿಸಿಬಿಗೆ ಆಟಗಾರರ ತನಿಖೆ ವೇಳೆ ಕೆಲ ಮಾಹಿತಿಗಳು ಬಹಿರಂಗವಾಗಿದ್ದು ಕೆಪಿಎಲ್ ತಂಡದ ಮಾಲಿಕರು ಹಾಗೂ ನಿರ್ವಾಹಕರು, ಮ್ಯಾನೇಜ್ಮೆಂಟ್ ಪಾತ್ರ ಕಂಡು ಬಂದಿರುವುದರಿಂದ ಈ ನೊಟೀಸ್ ಜಾರಿ ಮಾಡಲಾಗಿದ್ದು ಪಂದ್ಯಾವಳಿಯಲ್ಲಿರುವ ತಂಡಗಳು ಯಾವುದು. ಮ್ಯಾನೇಜ್ಮೆಂಟ್ ಸದಸ್ಯರು ಯಾರು? ಯಾವ ತಂಡದ ಆಟಗಾರರು ಯಾರ್ಯಾರು? ಈಗಾಗ್ಲೆ ಬಂಧನವಾದ ಬುಕ್ಕಿಗಳು ಪರಿಚಯನ.. ಯಾವಾಗದಿಂದ ಪರಿಚಯ. ನಿಮ್ಮ ತಂಡದ ಆಟಗಾರರನ್ನ ಫಿಕ್ಸ್ ಮಾಡುವಾಗ ನಿಮ್ಮ ಗಮನಕ್ಕೆ ಬಂದಿಲ್ವಾ ಹೀಗೆ ಕೆಲ ಪ್ರಶ್ನೆಗಳಿಗೆ ಉತ್ತರಿಸುವಂತೆ ನೋಟೀಸ್ ಹೊರಡಿಸಲಾಗಿದೆ.

ಸದ್ಯ ದಿನದಿಂದ ದಿನಕ್ಕೆ ತಿರುವು ಪಡೆಯುತ್ತಿರುವ ಫಿಕ್ಸಿಂಗ್ ಪ್ರಕರಣ ಸದ್ಯಕ್ಕೆ ತಂಡದ ಮಾಲೀಕರ ಬುಡಕ್ಕೆ ಬಂದಿದೆ. ಸಿಸಿಬಿ ಅಧಿಕಾರಿಯೊಬ್ಬರು ಹೇಳುವ ಪ್ರಕಾರ ಯಾರದೇ ಪಾತ್ರ ಬಂದರು ಬಂಧನ ಮಾತ್ರ ಖಚಿತ .ಎಷ್ಟೇ ಒತ್ತಡ ಬರಲಿ ನಿಷ್ಠೆ ಯಾದ ತನಿಖೆ ನಡೆಸುವುದೇ ನಮ್ಮ ಉದ್ದೇಶ ಎಂದಿದ್ದಾರೆBody:KN_BNG_01_KPL_7204498Conclusion:KN_BNG_01_KPL_7204498

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.