ETV Bharat / state

ಡ್ರಗ್ಸ್ ಜಾಲದಲ್ಲಿ ಇನ್ನೊಬ್ಬ ನಟಿ: ಸಿಸಿಬಿ ವಿಚಾರಣೆ ವೇಳೆ ಸಾಕ್ಷ್ಯ ಪತ್ತೆ

ಕೇಂದ್ರ ಅಪರಾಧ ವಿಭಾಗ (ಸಿಸಿಬಿ)ದ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಹಾಗೆಯೇ ಇತರೆ ಪೆಡ್ಲರ್​ಗಳ‌ ಮೊಬೈಲ್​ನಲ್ಲಿ ಚತುರ್ಭಾಷಾ ನಟಿಯೊಬ್ಬರ ಹೆಸರು ದೊರೆತಿದೆ. ಈ ನಟಿ ಡ್ರಗ್ಸ್‌ ಪ್ರಕರಣದಲ್ಲಿ ಭಾಗಿಯಾಗಿರುವ ಸಾಧ್ಯತೆ ದಟ್ಟವಾಗಿದೆ.

ccb
ccb
author img

By

Published : Oct 8, 2020, 9:38 AM IST

ಬೆಂಗಳೂರು: ಸ್ಯಾಂಡಲ್‌ವುಡ್‌ ಮಾದಕ‌‌ಜಾಲದಲ್ಲಿ ಸಿಲುಕಿ ಅಚ್ಚರಿ ಮೂಡಿಸಿದ ನಟಿಯರಾದ ರಾಗಿಣಿ, ಸಂಜನಾ ಬಳಿಕ ಇದೀಗ ಮತ್ತೊಂದು ಸ್ಟಾರ್ ನಟಿಗೆ ಈ ಮಾಫಿಯಾದ ಸಂಪರ್ಕವಿರುವ ಗುಮಾನಿ ಸಿಸಿಬಿಗೆ ಲಭ್ಯವಾಗಿದೆ. ಈ ನಟಿಯ ಬಗ್ಗೆ ತನಿಖಾಧಿಕಾರಿಗಳು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಈ ನಟಿ ಕನ್ನಡದಲ್ಲಿ ಮಾತ್ರವಲ್ಲದೆ ತಮಿಳು, ತೆಲುಗು, ಹಿಂದಿಯಲ್ಲೂ ನಟಿಸಿದ್ದಾರಂತೆ. ಸದ್ಯ ಸಿಸಿಬಿ ವಿಚಾರಣೆಗೆ ಒಳಪಡಿಸಿದ ಮಾಜಿ ‌ಭೂಗತ ಮುತ್ತಪ್ಪ ರೈ ಪುತ್ರ ರಿಕ್ಕಿ ಹಾಗೆ ಇತರೆ ಪೆಡ್ಲರ್​ಗಳ‌ ಮೊಬೈಲ್​ನಲ್ಲಿ ಇದಕ್ಕೆ ಬೇಕಾದ ಪುರಾವೆಗಳು ಸಿಕ್ಕಿವೆ.

ಸದ್ಯ ಆಕೆಯ ಪಾತ್ರವೇನು ಅನ್ನೋದ್ರ ಬಗ್ಗೆ ಅಧಿಕಾರಿಗಳು ಮಾಹಿತಿ ಸಂಗ್ರಹಿಸುತ್ತಿದ್ದು ಶೀಫ್ರದಲ್ಲೇ ಆ ನಟಿಗೆ ವಿಚಾರಣೆಗೆ ಹಾಜರಾಗುವ ಸಂಬಂಧ ನೋಟಿಸ್ ಕಳುಹಿಸುವ ಸಾಧ್ಯತೆ ಇದೆ.

ಮಾದಕ ವಸ್ತುಗಳನ್ನು ಈ ನಟಿಯೇ ಸರಬರಾಜು ಮಾಡ್ತಿದ್ರಾ?, ಡ್ರಗ್ಸ್ ಸೇವನೆ ಮಾಡ್ತಿದ್ರಾ? ಅಥವಾ ಡ್ರಗ್ಸ್ ಪಾರ್ಟಿಗೆ ಆಹ್ವಾನಿತರಾಗಿ ಹೋಗಿ ಬರ್ತಿದ್ರಾ? ಅನ್ನೋ ವಿಚಾರಗಳನ್ನು ಬೆನ್ನತ್ತಿ ಸಿಸಿಬಿ ಅಧಿಕಾರಿಗಳು ಹೊರಟಿದ್ದಾರೆ. ಒಂದು ವೇಳೆ ಪೂರಕ ಸಾಕ್ಷ್ಯಗಳು ದೊರೆತರೆ ತನಿಖಾಧಿಕಾರಿಗಳು ಮುಂದಿನ ನಿರ್ಧಾರ ಕೈಗೊಳ್ಳಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.