ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ನಂಟು ಅರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ದೊಡ್ಡ ಮಟ್ಟದ ಡ್ರಗ್ಸ್ ಪೆಡ್ಲರ್ ಅನ್ನು ಮಟ್ಟ ಹಾಕಲು ಮುಂದಾಗಿದ್ದಾರೆ. ಆದ್ರೆ ಆ ದೊಡ್ಡ ಡ್ರಗ್ ಪೆಡ್ಲರ್ ಯಾರು ಎಂಬುದರ ಸುಳಿವನ್ನು ತನಿಖಾಧಿಕಾರಿಗಳು ಬಿಟ್ಟುಕೊಟ್ಟಿಲ್ಲ.
ಈತ ಬೆಂಗಳೂರು ಟು ಮುಂಬೈ, ಬೆಂಗಳೂರು ಟು ಗೊವಾ, ಬೆಂಗಳೂರು ಟು ಮಂಗಳೂರು ಹೀಗೆ ಹಲವೆಡೆ ಡ್ರಗ್ಸ್ ಪೂರೈಸುವ ಕೆಲಸವನ್ನು ಮಾಡುತ್ತಿದ್ದ. ಹೀಗಾಗಿ ಸಿಸಿಬಿ ಅಧಿಕಾರಿಗಳು ಬಂಧಿತ ಪೆಡ್ಲರ್ಗಳು ಹಾಗೂ ನಟ ನಟಿಯರ ಮಾಹಿತಿ ಆಧಾರದ ಮೇರೆಗೆ ಈತನನ್ನು ಬಂಧಿಸಲು ಮುಂದಾಗಿದ್ದಾರೆ. ಈತ ಭೂಗತ ಲೋಕದ ಕೆಲ ಆರೋಪಿಗಳ ಜೊತೆ ಸೇರಿದಂತೆ ರಾಜಾಕಾರಣಿಗಳ ಮಕ್ಕಳು, ಪ್ರತಿಷ್ಠಿತ ಸ್ಟಾರ್ಸ್, ನಟ- ನಟಿಯರ ಜೊತೆ ಲಿಂಕ್ ಹೊಂದಿದ್ದಾನೆ ಎಂಬ ಮಾಹಿತಿಯಿದೆ.
ಅಲ್ಲದೇ ಸುಶಾಂತ್ ಸಿಂಗ್ ಆತ್ಮೀಯರಿಗೆ ಡ್ರಗ್ಸ್ ಪೂರೈಸಿರುವ ಆರೋಪ ಈತನ ಮೇಲಿದೆ. ಎನ್ಸಿಬಿ ಅಧಿಕಾರಿಗಳು ಖೆಡ್ಡಾಕ್ಕೆ ಕೆಡವಿರುವ ಕೆಲ ಪೆಡ್ಲರ್ಗಳ ಜೊತೆ ಈತ ಲಿಂಕ್ ಹೊಂದಿರುವ ಮಾಹಿತಿ ಸಿಸಿಬಿ ಅಧಿಕಾರಿಗಳಿಗೆ ಸಿಕ್ಕಿದೆ. ಸದ್ಯ ಸಿಸಿಬಿಯ ಎಸಿಪಿ ರವಿಕುಮಾರ್, ಇನ್ಸ್ಪೆಕ್ಟರ್ಗಳ ತಂಡ ಈತನನ್ನು ಖೆಡ್ಡಾಕ್ಕೆ ಕೆಡವಲು ಮುಂದಾಗಿದ್ದಾರೆ.
ಈತನನ್ನು ಖೆಡ್ಡಾಕ್ಕೆ ಕೆಡವಿದ ನಂತರ ಈತನ ಜೊತೆ ಸಂಪರ್ಕ ಇರುವ ಸ್ಟಾರ್ ನಟನೋರ್ವನನ್ನು ಬಂಧಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಸದ್ಯ ಈ ಪೆಡ್ಲರ್ನನ್ನು ಬಂಧಿಸಿದ ಬಳಿಕ ಸಿಸಿಬಿ ಅಧಿಕಾರಿಗಳು ಮುಂದಿನ ನಿರ್ಧಾರ ಕೈಗೊಳ್ಳಲಿದ್ದಾರೆ.