ಬೆಂಗಳೂರು: ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಗಲಭೆ ಪ್ರಕರಣದ ತನಿಖೆ ಚುರುಕಾಗಿದೆ. ಕಾರ್ಪೋರೇಟರ್ಗಳಾದ ಸಂಪತ್ ರಾಜ್ ಹಾಗೂ ಜಾಕೀರ್ ಹುಸೇನ್ ಅವರನ್ನು ಸಿಸಿಬಿ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಗಲಭೆ ನಡೆಯುವ ಮುನ್ನ 6 ತಿಂಗಳಿನಿಂದ ಬಂಧಿತ ಎಸ್ಡಿಪಿಐನ ಮುಜಾಮಿಲ್ ಪಾಷಾ ಜತೆ ಆರೋಪಿ ಅರುಣ್ ಸಂಪರ್ಕ ಹೊಂದಿದ್ದನಂತೆ. ಕಳೆದ 6 ತಿಂಗಳಿನಿಂದ ನಿರಂತರ ಸಂಪರ್ಕ ಹೊಂದಿದ್ದು, ವಾಟ್ಸ್ ಆ್ಯಪ್ ಕಾಲ್ ಮುಖಾಂತರ ಮಾತನಾಡುತ್ತಿದ್ದ ಎನ್ನಲಾಗಿದೆ. ಗಲಭೆಯ ಪ್ರಮುಖ ಆರೋಪಿಗಳೊಂದಿಗೆ ಅರುಣ್ ಸಂಪರ್ಕವಿರುವ ಕಾರಣ ಮಾಜಿ ಮೇಯರ್ ಸಂಪತ್ ರಾಜ್ ಅವರಿಗೆ ಸಂಕಷ್ಟ ಎದುರಾಗಿದೆ.
ಪ್ರಕರಣ ರಾಜಕೀಯ ಬಣ್ಣ ಪಡೆಯುತ್ತಿದ್ದು, ಮಾಜಿ ಮೇಯರ್ ಸಂಪತ್‌ರಾಜ್ ಹಾಗೂ ಜಾಕೀರ್ ಹುಸೇನ್ ಇಬ್ಬರನ್ನೂ ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಹಾಗೂ ಡಿಸಿಪಿ ರವಿ, ಇನ್ಸ್ಪೆಕ್ಟರ್ ಮುರುಗೇಂದ್ರಯ್ಯ ಹಾಗೂ ಕೇಶವಮೂರ್ತಿ ವಿಚಾರಣೆಗೆ ಒಳಪಡಿಸಿದ್ದಾರೆ.
ಅಲ್ಲದೆ, ಅರುಣ್ ಬಂಧನವಾಗಿ ಪ್ರಮುಖ ಸಾಕ್ಷಿ ಲಭ್ಯವಾದ ಕಾರಣ ಪ್ರಕರಣ ಇನ್ನಷ್ಟು ಗಂಭೀರತೆ ಪಡೆದುಕೊಂಡಿದೆ. ತನಿಖಾಧಿಕಾರಿಗಳು ಈ ಮೂವರ ವಿಚಾರಣೆ ನಡೆಸುತ್ತಿದ್ದು, ಹಲವು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.