ETV Bharat / state

ರಾಗಿಣಿ ಡ್ರಗ್ಸ್ ಜಾಲ ಅಗೆದಷ್ಟು ಆಳ... 1 ಗ್ರಾಂ ಕೊಕೇನ್ 6 ಸಾವಿರ ರೂ.ಗೆ ಖರೀದಿಸುತ್ತಿದ್ದ​ಳಾ ನಟಿ!?

ಲೂಮ್ ಪೆಪ್ಪರ್ ಡ್ರಗ್ಸ್​ ಪೆಡ್ಲರ್ ಆಗಿದ್ದು, ಈತ ಈಗಾಗಲೇ ಬಂಧಿತರಾದ ನಟಿ ರಾಗಿಣಿಗೆ ಮಾದಕ ವಸ್ತುಗಳನ್ನು ನೀಡಿದ್ದಾಗಿ ತಿಳಿಸಿದ್ದಾನೆ. ಅದು ಕೂಡ ನಟಿ ರಾಗಿಣಿ ವಿದೇಶಿ ಪ್ರಜೆಗೆ ಪ್ರತಿ ಗ್ರಾಂ ಕೊಕೇನ್​ಗೆ 6 ಸಾವಿರ ರೂ. ಕೊಟ್ಟು ಕೊಕೇನ್ ಖರೀದಿಸಿದ್ದು, ಸದ್ಯ ರಾಗಿಣಿ ಮಾತ್ರವಲ್ಲ, ರಾಗಿಣಿ ಗೆಳೆಯ ರವಿಶಂಕರ್​​ಗೂ ಕೊಕೇನ್ ಮಾರಾಟ ಮಾಡಿರುವುದಾಗಿ ತಿನಿಖೆ ವೇಳೆ ಪೆಪ್ಪರ್​ ಬಾಯ್ಬಿಟ್ಟಿದ್ದಾನೆ ಎಂದು ಹೇಳಲಾಗ್ತಿದೆ.

CCB inquiry on Drug peddler Loom Pepper on drug link case
ಡ್ರಗ್ಸ್​ ಲಿಂಕ್ ಕುರಿತು ನಟಿ ರಾಗಿಣಿ ರಹಸ್ಯ ಬಾಯ್ಬಿಟ್ಟ ಲೂಮ್​​​​​: ಡ್ರಗ್​​ ಪೆಡ್ಲಿಂಗ್ ವರದಿಯಲ್ಲಿ ಏನಿದೆ ಗೊತ್ತಾ..?
author img

By

Published : Sep 18, 2020, 1:16 PM IST

ಬೆಂಗಳೂರು: ಸ್ಯಾಂಡಲ್​​​​ವುಡ್​ಗೆ ಡ್ರಗ್ಸ್​ ಜಾಲ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ನಟಿ ರಾಗಿಣಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು, ಸಿಸಿಬಿ ಪೊಲೀಸರು ಆಕೆಯ ಡ್ರಗ್ಸ್​ ನಂಟಿನ ಬಗ್ಗೆ ಕೆಲವೊಂದು ರೋಚಕ ಮಾಹಿತಿಗಳನ್ನು ಕಲೆಹಾಕ್ತಿದ್ದಾರೆ.

ಸದ್ಯ ರಾಗಿಣಿ ತನಗೇನು ಡ್ರಗ್ಸ್​ ಮಾಫಿಯಾದ ನಂಟಿಲ್ಲ ಅನ್ನೋ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಆದರೆ ರಾಗಿಣಿಗೆ ಡ್ರಗ್ಸ್​ ಪೂರೈಸುತ್ತಿದ್ದ ಆರೋಪದಡಿ ವಿಚಾರಣೆ ಎದುರಿಸುತ್ತಿರುವ ಸೆನೆಗಲ್ ಮೂಲದ ಲೂಮ್ ಪೆಪ್ಪರ್​​​ನಿಂದ ಬಹಳಷ್ಟು ಮಾಹಿತಿಯನ್ನು ಸಿಸಿಬಿ ಪೊಲೀಸರು ಕಲೆಹಾಕಿದ್ದಾರೆ. ಆತ ನೀಡಿದ ಮಾಹಿತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ಲೂಮ್ ಪೆಪ್ಪರ್ ಡ್ರಗ್ಸ್​ ಪೆಡ್ಲರ್ ಆಗಿದ್ದು, ಈತ ಈಗಾಗಲೇ ಬಂಧಿತರಾದ ನಟಿ ರಾಗಿಣಿಗೆ ಮಾದಕ ವಸ್ತುಗಳನ್ನು ನೀಡಿದ್ದಾಗಿ ತಿಳಿಸಿದ್ದಾನೆ. ಅದು ಕೂಡ ನಟಿ ರಾಗಿಣಿ ವಿದೇಶಿ ಪ್ರಜೆಗೆ ಪ್ರತಿ ಗ್ರಾಂಗೆ 6 ಸಾವಿರ ರೂ. ಕೊಟ್ಟು ಕೊಕೇನ್ ಖರೀದಿಸಿದ್ದು, ಸದ್ಯ ರಾಗಿಣಿ ಮಾತ್ರವಲ್ಲ, ರಾಗಿಣಿ ಗೆಳೆಯ ರವಿಶಂಕರ್​​ಗೂ ಕೊಕೇನ್ ಮಾರಾಟ ಮಾಡಿರುವುದಾಗಿ ಲೂಮ್ ಪೆಪ್ಪರ್ ಪೊಲೀಸರ ವಿಚಾರಣೆ ವೇಳೆ ಡ್ರಗ್ಸ್ ಡೀಲ್ ಬಗ್ಗೆ ಎಳೆಎಳೆಯಾಗಿ ಬಾಯ್ಬಿಟ್ಟಿದಾನೆ ಎನ್ನಲಾಗ್ತಿದೆ.

ಈ ಡ್ರಗ್ಸ್​​ ಅನ್ನು ಕಳೆದ ಒಂದು ವರ್ಷದಿಂದ ರಾಗಿಣಿ ಮತ್ತು ರವಿಶಂಕರ್​​​ಗೆ ಮಾರಾಟ ಮತ್ತು ಬಳಕೆಗಾಗಿ ಕೊಡುತ್ತಿದ್ದ. ಒಂದು ಗ್ರಾಂ ಕೊಕೇನ್​​ಗೆ 6 ಸಾವಿರ ರೂಪಾಯಿಯಂತೆ ಮಾರಾಟ ಮಾಡಿದ್ದು, ಇಬ್ಬರು ಕೂಡ ಗಾಂಜಾ ಮತ್ತು ಕೊಕೇನ್​​​ ಅನ್ನು ಪಡೆದಿದ್ದಾರೆ. ಸದ್ಯ ನಗರದ ಕೆಲವೆಡೆ ಮಾದಕವಸ್ತುಗಳನ್ನು ಗೌಪ್ಯವಾಗಿಟ್ಟಿದ್ದು, ನಿಮಗೆ ಬೇಕಿದ್ದಲ್ಲಿ ನಾನು ಅದನ್ನು ತೋರಿಸುತ್ತೇನೆ ಎಂದು ಲೂಪ್​ ಪೆಪ್ಪರ್ ಸಿಸಿಬಿ ಎದುರು ಮಾಹಿತಿ ನೀಡಿದ್ದಾನೆ ಎಂದು ತಿಳಿದುಬಂದಿದೆ.

ಯಾರು ಈ ಲೂಮ್​ ಪೆಪ್ಪರ್​​​..?

ಆಫ್ರಿಕಾದ ಸೆನೆಗಲ್ ದೇಶದ ಪ್ರಜೆ ಲೂಮ್ ಪೆಪ್ಪರ್ ಅಲಿಯಾಸ್ ಸೈಮನ್. ಸೆನೆಗಲ್​​​ನ ಡಾಕರ್ ನಗರ ನಿವಾಸಿಯಾಗಿದ್ದು, ಬೆಂಗಳೂರಿನ ಯಲಹಂಕದ ಕೋಗಿಲು ಕ್ರಾಸ್ ಬಳಿ ನೆಲೆಸಿದ್ದ. 2016ರಲ್ಲಿ ಭಾರತಕ್ಕೆ ವಿದ್ಯಾಭ್ಯಾಸದ ವೀಸಾ ಮೇಲೆ ಬಂದು ಕೆಲ ತಿಂಗಳುಗಳಿಂದ ಕೋಗಿಲು ಕ್ರಾಸ್ ಬಳಿ ನೆಲೆಸಿದ್ದ. ಹಾಗೆ ವೀಸಾ ಅವಧಿ ಮುಗಿದ ಬಳಿಕವೂ ನಗರದಲ್ಲಿ ವಾಸವಿದ್ದು ಡ್ರಗ್ ಪೆಡ್ಲಿಂಗ್ ಮಾಡುತ್ತಿರುವುದು ಪತ್ತೆಯಾಗಿದೆ.

ಸದ್ಯ ಸ್ಯಾಂಡಲ್​​ವುಡ್ ಡ್ರಗ್ಸ್ ಡೀಲ್ ಪ್ರಕರಣದಲ್ಲಿ ಲೂಮ್ ಪೆಪ್ಪರ್ ಬಂಧನವಾಗಿದ್ದು, ಲೂಮ್ ಪೆಪ್ಪರ್ ವಿರುದ್ಧ ಕಾಟನ್​​​​ ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಎಫ್ಐಆರ್​​​​​ನಲ್ಲಿ ಈತ 7ನೇ ಅರೋಪಿಯಾಗಿದ್ದು, ಸ್ಯಾಂಡಲ್​​​​​ವುಡ್ ನಟ-ನಟಿಯರಿಗೆ ಮಾದಕವಸ್ತುಗಳನ್ನು ಪೂರೈಸಿರುವ ಆರೋಪದ ಮೇಲೆ ಲೂಮ್ ಪೆಪ್ಪರ್​ನನ್ನು ಪೊಲೀಸರು ಕಂಬಿ ಹಿಂದೆ ಕಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.