ETV Bharat / state

10% ಕಮಿಷನ್​ಗಾಗಿ ಬೆಡ್ ಬ್ಲಾಕಿಂಗ್ ದಂಧೆ: ಸಿಸಿಬಿ ಮುಂದೆ ಬಾಯ್ಬಿಟ್ಟ ವಂಚಕರು - ಬೆಡ್ ಬ್ಲಾಕ್ ಪ್ರಕರಣದ ಸಿಸಿಬಿ ತನಿಖೆ

ಬೆಡ್​ ಬ್ಲಾಕ್​ ದಂಧೆಯ ತನಿಖೆ ಆರಂಭಿಸಿರುವ ಸಿಸಿಬಿ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

CCB Enquiry of Bed Blocking mafia accused
ಬೆಂಗಳೂರು ಬೆಡ್ ಬ್ಲಾಕ್ ಪ್ರಕರಣ
author img

By

Published : May 6, 2021, 10:48 AM IST

ಬೆಂಗಳೂರು: ಬೆಡ್ ಬ್ಲಾಕಿಂಗ್ ದಂಧೆ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳು ವಿಚಾರಣೆ ವೇಳೆ ಶೇ.10 ರಷ್ಟು ಕಮಿಷನ್​ಗಾಗಿ ದುಷ್ಕೃತ್ಯ ಎಸಗಿರುವುದಾಗಿ ತಿಳಿಸಿದ್ದಾರೆ.

ಈವೆಂಟ್ ಮ್ಯಾನೇಜ್​ಮೆಂಟ್ ಮಾಡುತ್ತಿದ್ದ ಆರೋಪಿಗಳಾದ ರೋಹಿತ್ ಹಾಗೂ ನೇತ್ರಾವತಿ ಇಬ್ಬರು ಕೊರೊನಾ ರೋಗಿಗಳನ್ನೇ ಟಾರ್ಗೆಟ್ ಮಾಡಿಕೊಂಡು ಸಂಪರ್ಕಿಸುತ್ತಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಬೆಡ್ ಬೇಕು ಎಂದು ಮನವಿ ಮಾಡುವವರ ನಂಬರ್​ಗಳಿಗೆ ಕರೆ ಮಾಡಿ, ಹಣ ನೀಡಿದರೆ ಐಸಿಯು ಬೆಡ್ ಕೊಡಿಸುವುದಾಗಿ ಹೇಳುತ್ತಿದ್ದರು. ಇದನ್ನು ನಂಬಿ ಜನ ಹಣ ಕೊಡುತ್ತಿದ್ದರು. ಹಣ ಪಡೆದ ಆರೋಪಿಗಳು ಶೇ‌.10 ರಷ್ಟು ಕಮಿಷನ್ ಇಟ್ಟುಕೊಂಡು ಉಳಿದದ್ದನ್ನು ಬಿಬಿಎಂಪಿಯ ಬೊಮ್ಮನಹಳ್ಳಿ ಕೋವಿಡ್​ ವಾರ್ ರೂಮ್ ಮೇಲ್ವಿಚಾರಕರಾದ ಡಾ.ರೆಹಾನ್ ಹಾಗೂ ಡಾ.ಶಶಿಗೆ ನೀಡುತ್ತಿದ್ದರು. ರೋಗಿಗಳ ಸಂಬಂಧಿಕರು ಹಣ ನೀಡುವುದು ಖಾತ್ರಿಯಾಗುತ್ತಿದ್ದಂತೆ ಬೆಡ್ ಬ್ಲಾಕ್‌ ಮಾಡುತ್ತಿದ್ದರು ಎಂಬ ವಿಚಾರ ತನಿಖೆಯಲ್ಲಿ ಬಹಿರಂಗವಾಗಿದೆ.

ಇದನ್ನೂ ಓದಿ: ಸಾಮಾನ್ಯ ಬೆಡ್​ಗಳಿಗೂ ಆಕ್ಸಿಜನ್ ವ್ಯವಸ್ಥೆ ಹೆಚ್ಚಿಸಲು ಕ್ರಮ: ಗೌರವ್ ಗುಪ್ತಾ

ನಿನ್ನೆಯಷ್ಟೆ ಬಿಬಿಎಂಪಿಯ ಎಲ್ಲಾ ಕೋವಿಡ್ ವಾರ್‌ ರೂಂಗಳ‌‌ ಮೇಲೆ ದಾಳಿ ನಡೆಸಿದ್ದ ಸಿಸಿಬಿ ಅಧಿಕಾರಿಗಳು ದಂಧೆಯ ಸಾಕಷ್ಟು ಮಾಹಿತಿ ಕಲೆ ಹಾಕಿದ್ದರು.
ಅಪ್ತಮಿತ್ರ ಏಜೆಂಟ್​ಗಳು, ಖಾಸಗಿ ಆಸ್ಪತ್ರೆಗಳ ಪಿಆರ್​ಒಗಳ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ದಂಧೆ ಬಯಲಾದ ಬಳಿಕ ಸಿಸಿಬಿಗೂ ಸಾರ್ವಜನಿಕರು ಮಾಹಿತಿ ನೀಡುತ್ತಿದ್ದಾರೆ. ಬೆಡ್ ಪಡೆಯಲು ಹಣ ನೀಡಿರುವ ಬಗ್ಗೆ ಜನ ಸಿಸಿಬಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಇಂದು ಹಲವರು ಸಿಸಿಬಿ ಬಲೆಗೆ ಸಾಧ್ಯತೆಯಿದ್ದು, ಪ್ರಕರಣದಲ್ಲಿ ಈವರೆಗೆ ಇಬ್ಬರು ವೈದ್ಯರು ಸೇರಿ ನಾಲ್ವರನ್ನು ಬಂಧಿಸಲಾಗಿದೆ.‌ ಹಲವರನ್ನು ವಶಕ್ಕೆ ಪಡೆದು ಸಿಸಿಬಿ ವಿಚಾರಣೆ ನಡೆಸುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.