ಬೆಂಗಳೂರು: ಮಾದಕ ಜಾಲದ ನಂಟು ಆರೋಪಲ್ಲಿ ಸಿಕ್ಕಿಬಿದ್ದಿರುವ ನಟ ದಿಗಂತ್ಗೆ ಮತ್ತೆ ದಿಗಿಲು ಶುರುವಾಗಿದೆ. ಎರಡು ಬಾರಿ ವಿಚಾರಣೆಗೆ ಕರೆದ ಸಿಸಿಬಿ ಮತ್ತೊಮ್ಮೆ ವಿಚಾರಣೆಗೆ ಕರೆಯುವುದಾಗಿ ತಿಳಿಸಿದೆ. ಈ ಹಿಂದೆ ವಿಚಾರಣಗೆ ಹಾಜರಾಗಿದ್ದಾಗ ಮೊಬೈಲ್ನಲ್ಲಿದ್ದ ಸಾಕ್ಷ್ಯ ನಾಶದ ಕುರಿತು ಪೊಲೀಸರು ದಿಗಂತ್ಗೆ ಪ್ರಶ್ನೆಗೆ ಸುರಿಮಳೆಗೈದಿದ್ದಾರೆ.
ಆದರೆ ದಿಂಗತ್ ವಾರಕ್ಕೊಮ್ಮೆ ವಾಟ್ಸಪ್ ಚಾಟ್ ಕ್ಲೀಯರ್ ಮಾಡುವುದಾಗಿ ಉತ್ತರ ಕೊಟ್ಟಿದ್ದಾನೆ ಎನ್ನಲಾಗಿದೆ. ಹೀಗಾಗಿ ದಿಂಗತ್ ಮೊಬೈಲ್ ರಿಟ್ರೈವ್ ಮಾಡಿರುವ ಪೊಲೀಸರು, ಸರಿಯಾದ ಸಾಕ್ಷ್ಯಗಳನ್ನು ಕಲೆಹಾಕಿ, ಮತ್ತೊಮ್ಮೆ ವಿಚಾರಣೆಗೆ ಕರೆಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಒಂದು ವೇಳೆ ದಿಂಗತ್ ಡ್ರಗ್ಸ್ ಜಾಲದೊಂದಿಗೆ ನಂಟು ಹೊಂದಿರುವುದು ಖಚಿತವಾದರೆ, ಸಂಜನಾ ಮತ್ತು ರಾಗಿಣಿ ಪರಿಸ್ಥಿತಿ ಎದುರಾಗಲಿದೆ. ಮೊದಲ ವಿಚಾರಣೆ ವೇಳೆ ತಾನು ಡಿಪ್ರೆಶನ್ನಲ್ಲಿರುವ ವೇಳೆ ಮಾದಕ ವಸ್ತು ಸೇವನೆ ಮಾಡಿರುವುದಾಗಿ ದಿಗಂತ್ ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಮಾದಕ ವಸ್ತು ಸೇವನೆ ಕಾನೂನು ಬಾಹಿರವಾಗಿದ್ದು, ಸೇವನೆ ಮಾಡಿದರೆ 6 ತಿಂಗಳು ಜೈಲು ಶಿಕ್ಷೆಯಾಗಬಹುದು. ಹೀಗಾಗಿ ಎಲ್ಲಾ ಆಯಾಮಗಳಲ್ಲಿ ಸಾಕ್ಷ್ಯಗಳನ್ನು ಕಲೆಹಾಕಿ ಮುಂದಿನ ವಿಚಾರಣೆಗೆ ಕರೆದಾಗ ದಿಂಗತ್ ಬಗ್ಗೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲು ಸಿಸಿಬಿ ಸಿದ್ಧತೆ ನಡೆಸಿದೆ.