ಬೆಂಗಳೂರು: ಸ್ಯಾಂಡಲ್ವುಡ್ನಲ್ಲಿ ಡ್ರಗ್ಸ್ ಮಾಫಿಯಾ ವಿಚಾರಕ್ಕೆ ಸಂಬಂಧಪಟ್ಟಂತೆ ನಟಿ ರಾಗಿಣಿ ಮನೆ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಕೋರ್ಟ್ನಿಂದ ವಾರೆಂಟ್ ಪಡೆದು ಬೆಳಗ್ಗೆ 6:30ರ ಸುಮಾರಿಗೆ ಎರಡು ಕಾರುಗಳಲ್ಲಿ ಬಂದ ಸಿಸಿಬಿ ತಂಡ ಪರಿಶೀಲನೆ ನಡೆಸಿದೆ. ಈ ವೇಳೆ ರಾಗಿಣಿ ಮನೆಯಲ್ಲೇ ಇದ್ದು, ಸಿಸಿಬಿ ಅಧಿಕಾರಿಗಳ ಪರಿಶೀಲನೆ ವೇಳೆ ಅವರಿಗೆ ಸಹಕಾರ ನೀಡಿದ್ದಾರೆ ಎನ್ನಲಾಗಿದೆ.
ರಾಗಿಣಿ ಆಪ್ತ ರವಿಶಂಕರ್ ಡ್ರಗ್ಸ್ ಕುರಿತು ಮಹತ್ವದ ಮಾಹಿತಿ ನೀಡಿದ ಹಿನ್ನೆಲೆ ಎಸಿಪಿ ಅಂಜುಮಾಲ ನೇತೃತ್ವದಲ್ಲಿ ದಾಳಿ ಮಾಡಿ ಸಿಸಿಬಿ ತನಿಖೆ ಚುರುಕುಗೊಳಿಸಿದೆ. ಸದ್ಯ ರಾಗಿಣಿ ಸಮ್ಮುಖದಲ್ಲಿ ಸಿಸಿಬಿ ಅಧಿಕಾರಿಗಳು ಪರಿಶೀಲನೆಯಲ್ಲಿ ತೊಡಗಿದ್ದಾರೆ. ಬೆಂಗಳೂರಿನಲ್ಲಿ ರಾಗಿಣಿ ಎರಡು ಮನೆ ಹೊಂದಿದ್ದಾರೆ. ರಾಗಿಣಿಯವರ ಯಲಹಂಕದ ಹೆಚ್ಆರ್ಸಿ ಅನನ್ಯ ಮನೆ ಮೇಲೆ ದಾಳಿ ಮಾಡಲಾಗಿದೆ. ರಾಗಿಣಿಯವರ ಮೊಬೈಲ್ ಹಾಗೂ ಲ್ಯಾಪ್ಟಾಪ್ನ್ನು ಸಿಸಿಬಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಸಿಸಿಬಿ ಅಧಿಕಾರಿಗಳು ಇಂದು ಯಲಹಂಕದಲ್ಲಿರೋ ಜ್ಯೂಡಿಶಿಯಲ್ ಲೇಔಟ್ ಬಡವಾಣೆಯಲ್ಲಿರೋ ಪ್ಲಾಟ್ ನಲ್ಲಿ ದಾಳಿ ಮಾಡಿ ಶೋಧಕಾರ್ಯ ಮಾಡ್ತಾ ಇದ್ದಾರೆ. ಈಗಾಗಲೇ ಎರಡು ಮೊಬೈಲ್, ಒಂದು ಲ್ಯಾಪ್‌ಟಾಪ್ ನ್ನ ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಇನ್ನು ರಾಗಿಣಿ ದ್ವಿವೇದಿ ಮೊಬೈಲ್ ಸಂದೇಶ ಹಾಗೂ ವಾಟ್ಸ್ಆಪ್ನ್ನ ಡಿಲೀಟ್ ಮಾಡಿ ಮತ್ತೆ ಮರು ಇನ್ ಸ್ಟಾಲ್ ಮಾಡಿದ್ದಾರೆ ಎನ್ನಲಾಗಿದೆ. ಸತತ ನಾಲ್ಕು ಗಂಟೆಗಳಿಂದ ರಾಗಿಣಿ ದ್ವಿವೇದಿ ಮನೆಯಲ್ಲಿ ಮಾಹಿತಿ ಕಲೆ ಹಾಕ್ತಾ ಇದ್ದಾರೆ.