ಬೆಂಗಳೂರು: ಸಿಸಿಬಿ ಪೊಲೀಸರು ನಿನ್ನೆ ರಾತ್ರಿ ಅಕ್ರಮವಾಗಿ ಗ್ಯಾಂಬ್ಲಿಂಗ್ ಅಡ್ಡೆ ನಡೆಸುತ್ತಿದ್ದ ಅನ್ನಪೂರ್ಣೇಶ್ವರಿ ರಿಕ್ರಿಯೇಷನ್ ಕ್ಲಬ್ ಮೇಲೆ ದಾಳಿ ಮಾಡಿದ್ದಾರೆ.
ಅನ್ನಪೂರ್ಣೇಶ್ವರಿ ರಿಕ್ರಿಯೇಷನ್ ಕ್ಲಬ್ನಲ್ಲಿ ಹಲವು ದಿನಗಳಿಂದ ಗ್ಯಾಂಬ್ಲಿಂಗ್ ನಡೆಯುತ್ತಿತ್ತು. ಹೀಗಾಗಿ ಖಚಿತ ಮಾಹಿತಿ ಪಡೆದ ಸಿಸಿಬಿ ತಂಡ ದಾಳಿ ನಡೆಸಿ ಗ್ಯಾಂಬ್ಲಿಂಗ್ನಲ್ಲಿ ತೊಡಗಿದ್ದ ಕ್ಲಬ್ ಮಾಲೀಕ ಸೇರಿ 13 ಜನರ ಬಂಧನ ಮಾಡಿ, ಒಂದು ಲಕ್ಷದ ಎರಡು ಸಾವಿರ ನಗದು ವಶಪಡಿಸಿಕೊಂಡು, ನಂದಿನಿಲೇಔಟ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.
![CCB attack on gambling group](https://etvbharatimages.akamaized.net/etvbharat/prod-images/kn-bng-01-ccb-7204498_18092019092505_1809f_1568778905_861.jpg)
ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅಧಿಕಾರ ಸ್ವೀಕಾರ ಮಾಡಿದ ನಂತ್ರ ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ಗೆ ನಗರದ ಕ್ಲಬ್, ಪಬ್, ಬಾರ್ಗಳ ಮೇಲೆ ನಿಗಾ ಇಡುವಂತೆ ಸೂಚನೆ ನೀಡಲಾಗಿತ್ತು. ಇದೀಗ ಪ್ರತಿದಿನ ಸಿಸಿಬಿ ಸಿಲಿಕಾನ್ ಸಿಟಿಯ ಅಕ್ರಮ ಅಡ್ಡೆ ಮೇಲೆ ದಾಳಿ ನಡೆಸಿ ತನಿಖೆ ಮುಂದುವರೆಸಿದ್ದಾರೆ.