ETV Bharat / state

ಇಸ್ಪಿಟ್​​​​​​​​​​​​​​ ಕಾರ್ಡ್​ನಲ್ಲಿ ಹಿಡನ್​ ಕ್ಯಾಮೆರಾ ಇಟ್ಟು ಹಣ ಸಂಪಾದನೆ: ಆರೋಪಿ ಖೆಡ್ಡಾಕ್ಕೆ ಬೀಳಿಸಿದ ಸಿಸಿಬಿ - ಇಸ್ಪಿಟ್​ ಕಾರ್ಡ್​ನಲ್ಲಿ ಹಿಡನ್​ ಕ್ಯಾಮೆರಾ ಅಳವಡಿಕೆ

ಸುಲಭವಾಗಿ ಹಣ ಸಂಪಾದನೆ ಮಾಡಲು ಇಸ್ಪಿಟ್​​​​​ ಕಾರ್ಡ್​ನಲ್ಲಿ ಹಿಡನ್ ಕ್ಯಾಮೆರಾ ಅಳವಡಿಸಿ ಅಂದರ್​ ಬಾಹರ್​ ಆಡಿ ಹಣ ಸಂಪಾದಿಸುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

Accused arrest
Accused arrest
author img

By

Published : Jun 20, 2020, 2:17 PM IST

Updated : Jun 20, 2020, 4:03 PM IST

ಬೆಂಗಳೂರು: ಇಸ್ಪಿಟ್​​ ಕಾರ್ಡ್​ನಲ್ಲಿ ಹಿಡನ್ ಕ್ಯಾಮೆರಾ ಅಳವಡಿಸಿ, ಅಂದರ್ ಬಾಹರ್ ಆಟವಾಡಿ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದ ಅಡ್ಡೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಇಮ್ರಾನ್ ಬಿನ್ ಇಸ್ಮಾಯಿಲ್ ಬಂಧಿತ ಆರೋಪಿ. ಯಶವಂತಪುರದ ಬಿ.ಕೆ.ನಗರದಲ್ಲಿ ವಾಸವಾಗಿದ್ದ ಮನೆಯಲ್ಲಿ ಈ ಕೃತ್ಯ ಎಸಗುತ್ತಿದ್ದ ಎನ್ನಲಾಗಿದೆ. ಸುಲಭವಾಗಿ ಹಣ ಸಂಪಾದನೆ ಮಾಡಲು ಮೋಸದ ದಾರಿ ಹಿಡಿದ ಇಮ್ರಾನ್‌. ಹೆಚ್ಚು ಹಣ ಗಳಿಸುವ ಉದ್ದೇಶದಿಂದ ಇಸ್ಪಿಟ್​​ ಎಲೆಗಳಲ್ಲಿ ಸ್ಕ್ಯಾನರ್, ಹಿಡನ್ ಕ್ಯಾಮೆರಾ ಅಳವಡಿಸುತ್ತಿದ್ದ. ಅಲ್ಲದೇ ನೋಟುಗಳಿಗೂ ಇದೇ ರೀತಿ ಮಾಡುತ್ತಿದ್ದ ಎನ್ನಲಾಗಿದೆ.

ಈ ಬಗ್ಗೆ ಖಚಿತ ಮಾಹಿತಿ‌ ಮೇರೆಗೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ ಹಿಡನ್ ಕ್ಯಾಮೆರಾಗಳು, ಸ್ಕ್ಯಾನರ್​ಗಳು, ಎಲೆಕ್ಟ್ರಾನಿಕ್ ಡಿವೈಸ್​ಗಳು, 500 ಮುಖಬೆಲೆಯ 6 ನೋಟುಗಳು 200 ರೂ ಮುಖಬೆಲೆಯ 10 ನೋಟುಗಳು ಸೇರಿದಂತೆ 4 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ.

ಕೃತ್ಯ ಹೇಗೆ ನಡೆಸುತ್ತಿದ್ದ ? : ಮೊದಲು ಇಸ್ಪೀಟ್ ಕಾರ್ಡ್​ಗಳಿಗೆ ಕ್ಯಾಮೆರಾ ಅಳವಡಿಸಿ ಅದನ್ನ ಜೂಜುಕೋರರಿಗೆ ಮಾರುತ್ತಿದ್ದ. ನಂತರ ತನ್ನ ಬಳಿ ಇರುವ ಸ್ಪೀಕರ್ ಮಾರುತ್ತಿದ್ದ. ಹಿಡನ್ ಕ್ಯಾಮೆರಾ ಸಿಸ್ಟಮ್ ಮೂಲಕ ಹ್ಯಾಂಡಲ್ ಮಾಡಿ ಗೆಲ್ಲುವ ಹಾಗೆ ಮಾಡಿ ಹಣ ಸಂಪಾದಿಸುತ್ತಿದ್ದ. ಈತನ ಜೊತೆ ಇನ್ನಿಬ್ಬರು ಈ ಕೃತ್ಯದಲ್ಲಿ ಭಾಗಿಯಾಗಿದ್ದು, ದಾಳಿ ವೇಳೆ ಎಸ್ಕೇಪ್ ಆಗಿದ್ದಾರೆ. ಸದ್ಯ ಅವರಿಗಾಗಿ ಸಿಸಿಬಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Jun 20, 2020, 4:03 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.