ETV Bharat / state

ಸ್ಯಾಂಡಲ್‌ವುಡ್ ಡ್ರಗ್ಸ್‌ ಪ್ರಕರಣ.. ಸಿಸಿಬಿ- ಐಎಸ್​ಡಿ ನಡುವೆ ಮುಸುಕಿನ ಗುದ್ದಾಟ

ನಟ ಲೂಸ್ ಮಾದ ಯೋಗಿಯನ್ನ ತನಿಖೆಗೊಳಪಡಿಸಲು ಸಿಸಿಬಿ ಕೂಡ ನಿರ್ಧಾರ ಮಾಡಿತ್ತು. ಹಾಗೆ ಸಿಸಿಬಿ ಬಂಧಿಸಿರುವ ಪೆಡ್ಲರ್ ಲಿಸ್ಟ್​​ನಲ್ಲಿ‌ ಕಿರುತೆರೆ ನಟ-ನಟಿಯರಿದ್ದಾರೆ. ಒಂದು ವೇಳೆ ದಿಕ್ಕು ತಪ್ಪಿದ್ರೆ ಕೇಸ್ ತನಿಖೆ ನಡೆಸಲು ತುಂಬಾ ಕಷ್ಟವಾಗುತ್ತೆ..

Internal Security Division
ಆಂತರಿಕ ಭದ್ರತಾ ವಿಭಾಗ
author img

By

Published : Sep 23, 2020, 4:31 PM IST

ಬೆಂಗಳೂರು: ಸ್ಯಾಂಡಲ್‌ವುಡ್ ಡ್ರಗ್ಸ್‌ ಪ್ರಕರಣ ಸಂಬಂಧ ಸಿಸಿಬಿ ತನಿಖೆ ನಡೆಸುತ್ತಿರುವ ಮಧ್ಯೆ ಐಎಸ್​ಡಿ ಕೂಡ ಎಂಟ್ರಿ ಕೊಟ್ಟು ಡ್ರಗ್ಸ್‌ ಮಾಫಿಯಾದ ತನಿಖೆ ಕೈಗೊಂಡು ಕಿರುತೆರೆ ನಟ- ನಟಿಯರಿಗೆ ವಿಚಾರಣೆ ನಡೆಸುತ್ತಿದೆ.

ಆಂತರಿಕ ಭದ್ರತಾ ವಿಭಾಗ

ಆದರೆ, ಎನ್​ಸಿಬಿ ಸ್ಯಾಂಡಲ್‌ವುಡ್ ಡ್ರಗ್ಸ್‌ ಮಾಫಿಯಾದ ಕ್ಲ್ಯೂ ಬಿಟ್ಟು ಕೊಟ್ಟ ತಕ್ಷಣ ಸಿಸಿಬಿ ತನಿಖೆ ನಡೆಸಲು ಮುಂದಾಗಿತ್ತು. ಆದರೆ, ಅಕ್ರಮ ಶಸ್ತ್ರಾಸ್ತ್ರ ಪ್ರಕರಣ ಬೇಧಿಸುತ್ತಿದ್ದ ಐಎಸ್​ಡಿ ಈ ನಡುವೆ ಇಬ್ಬರು ಡ್ರಗ್ಸ್‌ ಪೆಡ್ಲರ್​ಗಳನ್ನು ಬಂಧಿಸಿದ್ದರು. ಅವರನ್ನ ಹೆಚ್ಚಿನ ವಿಚಾರಣೆ ನಡೆಸಿದ್ದ ಐಎಸ್​ಡಿ ಸಿನಿ ತಾರೆಯರ ಹೆಸರು ಕೇಳಿ ಬಂದ ಕಾರಣ ಹಲವರನ್ನ ತನಿಖೆಗೊ ಳಪಡಿಸಿದ್ದಾರೆ.

ಸದ್ಯ ಇದೇ ವಿಚಾರವಾಗಿ ಎರಡು ತನಿಖಾ ತಂಡ ನಡುವೆ ಮುಸುಕಿನ ಗುದ್ದಾಟ ಶುರುವಾಗಿದೆ. ಡ್ರಗ್ಸ್‌ ಮಾಫಿಯಾ ಹೆಸರು ಬಂದಾಗಲೇ ಸಿಸಿಬಿಗೆ ಪ್ರಕರಣ ಹಸ್ತಾಂತರಿಸಬಹುದಿತ್ತು?. ಆದರೆ, ಪ್ರತ್ಯೇಕ ತನಿಖೆಯನ್ನ ಐಎಸ್​ಡಿ ನಡೆಸುತ್ತಿದೆ. ಡ್ರಗ್ಸ್‌ ವಿಚಾರವಾಗಿ ಮೊದಲಿನಿಂದಲೂ ಸಿಸಿಬಿ ತನಿಖೆ ನಡೆಸ್ತಿದೆ. ಅಲ್ಲದೆ ಪ್ರತಿ ಮಾಹಿತಿಯೂ ಸಿಸಿಬಿ ಬಳಿಯಿತ್ತು. ಪ್ರತ್ಯೇಕ ತನಿಖೆ ನಡೆಸುವ ಅವಶ್ಯಕತೆ ಏನಿತ್ತು?. ಈ ಮೂಲಕ ಸ್ಯಾಂಡಲ್‌ವುಡ್ ಡ್ರಗ್ಸ್‌ ಕೇಸ್ ದಿಕ್ಕು ತಪ್ಪುವ ಸಾಧ್ಯತೆ ಇದೆ.

ಯಾಕಂದ್ರೆ, ನಟ ಲೂಸ್ ಮಾದ ಯೋಗಿಯನ್ನ ತನಿಖೆಗೊಳಪಡಿಸಲು ಸಿಸಿಬಿ ಕೂಡ ನಿರ್ಧಾರ ಮಾಡಿತ್ತು. ಹಾಗೆ ಸಿಸಿಬಿ ಬಂಧಿಸಿರುವ ಪೆಡ್ಲರ್ ಲಿಸ್ಟ್​​ನಲ್ಲಿ‌ ಕಿರುತೆರೆ ನಟ-ನಟಿಯರಿದ್ದಾರೆ. ಒಂದು ವೇಳೆ ದಿಕ್ಕು ತಪ್ಪಿದ್ರೆ ಕೇಸ್ ತನಿಖೆ ನಡೆಸಲು ತುಂಬಾ ಕಷ್ಟವಾಗುತ್ತೆ. ಸದ್ಯ ಸಿಸಿಬಿ ಅಧಿಕಾರಿಗಳ ನಡುವೆಯೇ ಈ ವಿಚಾರ ಚರ್ಚೆ ನಡೀತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.