ಬೆಂಗಳೂರು: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಅತ್ಯಾಚಾರ ಆರೋಪ ಪ್ರಕರಣ ದಾಖಲಾಗಿದೆ. ಈ ಬೆನ್ನಲ್ಲೇ ಯುವತಿಗೆ ವಿಚಾರಣೆಗೆ ಹಾಜರಾಗುವಂತೆ ಎರಡನೇ ನೋಟಿಸ್ ಜಾರಿಯಾಗಿದೆ.
ನಿನ್ನೆ ಕಬ್ಬನ್ ಪಾರ್ಕ್ ಪೊಲೀಸರು ವಕೀಲ ಜಗದೀಶ್ ಮೂಲಕ ಈ ನೋಟಿಸ್ ಜಾರಿ ಮಾಡಿದರು. ನೋಟಿಸ್‌ನಲ್ಲಿ ಘಟನೆ ಸಂಬಂಧ ಸ್ಥಳ ಮಹಜರು, ಮೆಡಿಕಲ್ ಟೆಸ್ಟ್ ಮತ್ತು ಸಂತ್ರಸ್ತೆಯ ಹೇಳಿಕೆ ಅತ್ಯಗತ್ಯ ಎಂದು ತಿಳಿಸಲಾಗಿದೆ.
ಹೀಗಾಗಿ ಪ್ರಕರಣದ ಕುರಿತು ಮುಂದಿನ ತನಿಖೆಗೆ ಸಂತ್ರಸ್ತೆ ಹಾಜರಾಗುವುದು ಅನಿವಾರ್ಯವಾಗಿದೆ.