ಬೆಂಗಳೂರು : ಡಾ.ಶಿವರಾಮ ಕಾರಂತ ಬಡಾವಣೆ ನಿರ್ಮಾಣ ಮಾಡದಂತೆ ಬಿಡಿಎ ವಿರುದ್ಧ, ಸಾರ್ವಜನಿಕರನ್ನು, ಭೂಮಾಲೀಕರಾದ ರೈತರನ್ನು ಎತ್ತಿಕಟ್ಟಿ ಪ್ರತಿಭಟನೆ ನಡೆಸಿದ ಆರೋಪದ ಮೇಲೆ ರೈತಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ನ್ಯಾಯಾಂಗ ನಿಂದನೆ ಆರೋಪದಡಿ ಎಫ್‌ಐಆರ್ ದಾಖಲಿಸಲಾಗಿದೆ. ಈ ಬಗ್ಗೆ ನಿವೃತ್ತ ನ್ಯಾಯಮೂರ್ತಿ ಎ ವಿ ಚಂದ್ರಶೇಖರ್ ಸಮಿತಿ ಇಂದು ಬಿಡಿಎ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದೆ.
ನಿವೃತ್ತ ನ್ಯಾ. ಎ ವಿ ಚಂದ್ರಶೇಖರ್ ಅಸಮಾಧಾನ : ಕೋಡಿಹಳ್ಳಿ ಚಂದ್ರಶೇಖರ್ ತಪ್ಪು ಮಾಹಿತಿ ನೀಡಿ ಜನರನ್ನ ದಾರಿ ತಪ್ಪಿಸಿದ್ರು. ಶಿವರಾಮ ಕಾರಂತ ಬಡಾವಣೆ ನಿರ್ಮಾಣ ವಿಚಾರದಲ್ಲಿ ಜನರ ದಾರಿ ತಪ್ಪಿಸಿದ್ದಾರೆ. ನ್ಯಾಯಾಂಗ ನಿಂದನೆ ಅಡಿಯಲ್ಲಿ ನೋಟಿಸ್ ಕೂಡ ಕೊಡಲಾಗಿದೆ. ಅವರ ವಿರುದ್ಧ ಎಫ್‌ಐಆರ್ ದಾಖಲಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಸುಪ್ರೀಂಕೋರ್ಟ್ ನೇಮಿಸಿದ್ದ ಸಮಿತಿಗೆ, ದಾಖಲೆಗಳನ್ನು ನೀಡದಂತೆ ಕೋಡಿಹಳ್ಳಿ ಚಂದ್ರಶೇಖರ್ ಜನರ ದಾರಿ ತಪ್ಪಿಸಿದ್ದಾರೆ. ಪ್ರತಿಭಟನೆಗಳನ್ನು ನಡೆಸಿದ್ದಾರೆ ಎಂದರು.
3456 ಎಕರೆ ವಿಸ್ತೀರ್ಣದಲ್ಲಿ ಶಿವರಾಮ ಕಾರಂತ ಬಡಾವಣೆ ನಿರ್ಮಿಸಲು ಉದ್ದೇಶಿಸಲಾಗಿದೆ. ಶಿವರಾಮ ಕಾರಂತ ಬಡಾವಣೆ ಕುರಿತು ಅಹವಾಲು ಸಲ್ಲಿಸಲು ಮತ್ತೆ ಹೆಲ್ಪ್ ಡೆಸ್ಕ್ ಆರಂಭಿಸಲಾಗಿದೆ. ಕೋವಿಡ್ ಕಾರಣದಿಂದಾಗಿ ಬಡಾವಣೆ ವ್ಯಾಪ್ತಿಯ ಅಹವಾಲು ಸ್ವೀಕಾರ ನಿಲ್ಲಿಸಲಾಗಿತ್ತು. ಈಗ ಕೋವಿಡ್ ಪ್ರಕರಣ ಕಡಿಮೆ ಆಗ್ತಿರುವ ಕಾರಣಕ್ಕೆ ಮತ್ತೆ ಹೆಲ್ಪ್ ಡೆಸ್ಕ್ ಆರಂಭ ಮಾಡಲಾಗ್ತಿದೆ ಎಂದರು.
ಎರಡು ಕಡೆ ಹೆಲ್ಪ್ ಡೆಸ್ಕ್ ಆರಂಭ
1. ಸರ್ಕಾರಿ ಉರ್ದು ಪ್ರಾಥಮಿಕ ಶಾಲೆ, ಮೇಡಿ ಅಗ್ರಹಾರ
2. ಸಮುದಾಯ ಭವನ, ಸೋಮಶೆಟ್ಟಿಹಳ್ಳಿ ಇಲ್ಲಿ ಹೆಲ್ಪ್ ಡೆಸ್ಕ್ ತೆರೆಯಲಾಗಿದೆ.
ಈವರೆಗೆ 3580 ಮಂದಿ ಅರ್ಜಿ ಸಲ್ಲಿಸಿದ್ದಾರೆ. 1-7-2021 ಇಂದ ಅರ್ಜಿ ಸ್ವೀಕಾರ ಪ್ರಕ್ರಿಯೆ ಆರಂಭ ಆಗಲಿದೆ. ಶೇ.60% ಅರ್ಜಿಗಳು ಸ್ವೀಕಾರ ಆಗಿವೆ. ಸುಮಾರು 2000ಕ್ಕೂ ಅಧಿಕ ಅರ್ಜಿಗಳು ಸ್ವೀಕಾರ ಆಗಿದ್ದು, ಇನ್ನುಳಿದ ಅರ್ಜಿಗಳು ಆದಷ್ಟು ಬೇಗ ಸ್ವೀಕಾರ ಆಗುವ ವಿಶ್ವಾಸ ಇದೆ ಎಂದರು.
ಓದಿ: ಬಗೆಹರಿಯದ ನೆಟ್ವರ್ಕ್ ಸಮಸ್ಯೆ.. ಆನ್ಲೈನ್ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳ ಪರದಾಟ..