ETV Bharat / state

ಸರ್ಕಾರದ ಗೊಂದಲದ ಬಗ್ಗೆ ಚರ್ಚೆ ನಡೆಸಿಲ್ಲ ; ಬಿಜೆಪಿ ವಕ್ತಾರ ಕ್ಯಾ.ಗಣೇಶ್ ಕಾರ್ಣಿಕ್ - ಚಲವಾದಿ ನಾರಾಯಣ ಸ್ವಾಮಿ ಕಾಂಗ್ರೆಸ್​ ವಿರುದ್ಧ ವಾಗ್ದಾಳಿ

ಡಿಜೆಹಳ್ಳಿ, ಕೆಜಿಹಳ್ಳಿಯಲ್ಲಿ ಶಾಸಕರ ಮನೆಗೆ ಬೆಂಕಿ ಹಾಕಿದ ಪ್ರಕರಣದ ಹಿಂದೆ ಯಾರಿದ್ದಾರೆ? ಇದರ ದಲಿತ ವಿರೋಧಿ ಶಕ್ತಿಗಳು ಇದ್ದಾರೆ, ಶಾಸಕರ ಮನೆಗೆ ಬಿದ್ದ ಬೆಂಕಿಯೇ ಕಾಂಗ್ರೆಸ್ ಮನೆಗೂ ಬಿದ್ದಿದೆ. ಮೊದಲಿಂದಲೂ ಕಾಂಗ್ರೆಸ್​ನಲ್ಲಿ ದಲಿತರಿಗೆ ಸಿಎಂ ಹುದ್ದೆ ಕೊಡದೇ ಅನ್ಯಾಯ ಮಾಡಲಾಗಿದೆ. ಈಗಲೂ ದಲಿತರಿಗೆ ಸಿಎಂ ಸ್ಥಾನ ತಪ್ಪಿಸಲು ಪಿತೂರಿ ಮಾಡಿದ್ದಾರೆ..

ganesh
ganesh
author img

By

Published : Jun 25, 2021, 9:24 PM IST

ಬೆಂಗಳೂರು : ಸರ್ಕಾರದ ಗೊಂದಲಗಳು, ನಾಯಕತ್ವ ಬದಲಾವಣೆ ಹೇಳಿಕೆಗಳ ಬಗ್ಗೆ ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ಯಾವುದೇ ಚರ್ಚೆ ನಡೆದಿಲ್ಲ. ಕೇವಲ ಪಕ್ಷ ಸಂಘಟನೆಯ ಬಗ್ಗೆ ಮಾತ್ರ ಚರ್ಚಿಸಲಾಗಿದೆ ಎಂದು ಬಿಜೆಪಿ ವಕ್ತಾರ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದ್ದಾರೆ.

ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ಪದಾಧಿಕಾರಿಗಳ ಸಭೆ ನಂತರ ಮಾತನಾಡಿದ ಅವರು, ಕೋವಿಡ್ ಇದ್ದ ಕಾರಣ ಕಳೆದ ನಾಲ್ಕೈದು ತಿಂಗಳಿಂದ ಪಕ್ಷದ ಸಂಘಟನೆ ಬಗ್ಗೆ ಚರ್ಚೆ ಮಾಡಲು ಆಗಿರಲಿಲ್ಲ. ಹೀಗಾಗಿ, ಇಂದು ಆ ಎಲ್ಲಾ ವಿಚಾರಗಳನ್ನು ಚರ್ಚೆ ಮಾಡಿದ್ದೇವೆ.

ಮುಂದೆ ಡಿಸೆಂಬರ್​ನಲ್ಲಿ ಬರಲಿರುವ ತಾಲೂಕು,ಜಿಲ್ಲಾ ಪಂಚಾಯತ್ ಚುನಾವಣಾ ತಯಾರಿ,ಎರಡು ಉಪಚುನಾವಣೆ ಕುರಿತು ಚರ್ಚೆ ಮಾಡಲಾಗಿದೆ ಎಂದರು. ಕೋವಿಡ್ ವ್ಯಾಕ್ಸಿನೇಷನ್‌ ಕಾರ್ಯವನ್ನು ಯಶಸ್ವಿ ಮಾಡುವ ಬಗ್ಗೆ ಚರ್ಚೆ ನಡೆಸಿದ್ದು, 3ನೇ ಅಲೆ ತಡೆಗೆ ಪಕ್ಷದಿಂದ ಹೇಗೆ ತೊಡಗಿಸಿಕೊಳ್ಳಬೇಕು ಎನ್ನುವ ಬಗ್ಗೆಯೂ ಚರ್ಚೆ ಮಾಡಿದ್ದೇವೆ ಎಂದರು.

ದಲಿತರಿಗೆ ಸಿಎಂ ಹುದ್ದೆ ತಪ್ಪಿಸಲು ಕಾಂಗ್ರೆಸ್ ನಲ್ಲಿ ಷಡ್ಯಂತ್ರ:

ಬಿಜೆಪಿ ಮುಖಂಡ ಚಲವಾದಿ ನಾರಾಯಣ ಸ್ವಾಮಿ ಮಾತನಾಡಿ, ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಮಾತಾಡಿಕೊಂಡೇ ನಾಟಕ ಆಡುತ್ತಿದ್ದಾರೆ. ದಲಿತರಿಗೆ ಸಿಎಂ ಹುದ್ದೆ ತಪ್ಪಿಸಲು ಈ‌ ನಾಟಕವಾಡಲಾಗುತ್ತಿದೆ. ಕಾಂಗ್ರೆಸ್​ನಲ್ಲಿ ದಲಿತರಿಗೆ ಸಿಎಂ ಹುದ್ದೆ ಕೊಡದಿರಲು ಪಿತೂರಿ ನಡೆದಿದೆ. ಹಾಗಾಗಿ, ದಲಿತರು ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬರುತ್ತಿದ್ದಾರೆ.

ಡಿಜೆಹಳ್ಳಿ, ಕೆಜಿಹಳ್ಳಿಯಲ್ಲಿ ಶಾಸಕರ ಮನೆಗೆ ಬೆಂಕಿ ಹಾಕಿದ ಪ್ರಕರಣದ ಹಿಂದೆ ಯಾರಿದ್ದಾರೆ? ಇದರ ದಲಿತ ವಿರೋಧಿ ಶಕ್ತಿಗಳು ಇದ್ದಾರೆ, ಶಾಸಕರ ಮನೆಗೆ ಬಿದ್ದ ಬೆಂಕಿಯೇ ಕಾಂಗ್ರೆಸ್ ಮನೆಗೂ ಬಿದ್ದಿದೆ. ಮೊದಲಿಂದಲೂ ಕಾಂಗ್ರೆಸ್​ನಲ್ಲಿ ದಲಿತರಿಗೆ ಸಿಎಂ ಹುದ್ದೆ ಕೊಡದೇ ಅನ್ಯಾಯ ಮಾಡಲಾಗಿದೆ. ಈಗಲೂ ದಲಿತರಿಗೆ ಸಿಎಂ ಸ್ಥಾನ ತಪ್ಪಿಸಲು ಪಿತೂರಿ ಮಾಡಿದ್ದಾರೆ ಎಂದು ಆರೋಪಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.