ETV Bharat / state

ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ ನೀಡಿದ ಜೀವನಾಂಶವನ್ನು ಸಿಆರ್​ಪಿಸಿ ಅಡಿ ಹೆಚ್ಚಿಸಲಾಗದು: ಹೈಕೋರ್ಟ್ - ಪತ್ನಿಗೆ ಪತಿಯಿಂದ ಜೀವನಾಂಶ ನೀಡುವ ಅರ್ಜಿ ವಿಚಾರಣೆ

ಪತ್ನಿಗೆ ನೀಡುತ್ತಿದ್ದ ಜೀವನಾಂಶವನ್ನು 1 ಸಾವಿರದಿಂದ 5 ಸಾವಿರಕ್ಕೆ ಹೆಚ್ಚಿಸಿ ಕಲಘಟಗಿಯ ಮ್ಯಾಜಿಸ್ಟ್ರೇಟ್ ಕೋರ್ಟ್ ನೀಡಿದ್ದ ಆದೇಶ ಹಾಗೂ ಈ ಆದೇಶವನ್ನು ಪುರಸ್ಕರಿಸಿರುವ ಧಾರವಾಡ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಆದೇಶ ರದ್ದು ಕೋರಿ ಶಿವಾನಂದ ಎಂಬುವವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ಈ ತೀರ್ಪು ನೀಡಿದೆ.

Cannot increase alimony granted by CRPC: High Court
ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ ನೀಡಿದ ಜೀವನಾಂಶವನ್ನು ಸಿಆರ್​ಪಿಸಿ ಅಡಿ ಹೆಚ್ಚಿಸಲಾಗದು ಎಂದ ಹೈಕೋರ್ಟ್​
author img

By

Published : Mar 2, 2022, 10:11 PM IST

ಬೆಂಗಳೂರು: ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ-2005 ಅಡಿ ಪತಿಯಿಂದ ದೂರವಿರುವ ಮಹಿಳೆಗೆ ನಿಗದಿಪಡಿಸಿದ ಜೀವನಾಂಶವನ್ನು ಅಪರಾಧ ದಂಡ ಪ್ರಕ್ರಿಯಾ ಸಂಹಿತೆ (ಸಿಆರ್​ಪಿಸಿ) ಸೆಕ್ಷನ್ 127ರ ಅಡಿ ಹೆಚ್ಚಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿದೆ.

ಪತ್ನಿಗೆ ನೀಡುತ್ತಿದ್ದ ಜೀವನಾಂಶವನ್ನು 1 ಸಾವಿರದಿಂದ 5 ಸಾವಿರಕ್ಕೆ ಹೆಚ್ಚಿಸಿ ಕಲಘಟಗಿಯ ಮ್ಯಾಜಿಸ್ಟ್ರೇಟ್ ಕೋರ್ಟ್ ನೀಡಿದ್ದ ಆದೇಶ ಹಾಗೂ ಈ ಆದೇಶವನ್ನು ಪುರಸ್ಕರಿಸಿರುವ ಧಾರವಾಡ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಆದೇಶ ರದ್ದು ಕೋರಿ ಶಿವಾನಂದ ಎಂಬುವವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ಈ ತೀರ್ಪು ನೀಡಿದೆ.

ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯ ರಕ್ಷಣೆ ಕಾಯ್ದೆ-2005ರ ಸೆಕ್ಷನ್ 12ರ ಅಡಿ ಪತ್ನಿ ಜೀವನಾಂಶ ಕೇಳಿ ಅರ್ಜಿ ಸಲ್ಲಿಸಿದ್ದಾರೆಯೇ ಹೊರತು ಅಪರಾಧ ದಂಡ ಪ್ರಕ್ರಿಯಾ ಸಂಹಿತೆ 125ರ ಅಡಿ ಪರಿಹಾರ ಕೇಳಿಲ್ಲ. ಸಿಆರ್​ಪಿಸಿ ಸೆಕ್ಷನ್ 125ರ ಅಡಿ ಪರಿಹಾರ ಕೇಳಿ ಅರ್ಜಿ ಸಲ್ಲಿಸಿದ್ದಾಗ ಮಾತ್ರ ಸಿಆರ್​ಪಿಸಿ ಸೆಕ್ಷನ್ 127ರ ಅಡಿ ಜೀವನಾಂಶ ಪರಿಷ್ಕರಣೆಗೆ ಕೋರಬಹುದು. ಆದರೆ ಪತ್ನಿ ಡಿವಿ ಆ್ಯಕ್ಟ್ 12ರ ಅಡಿ ಜೀವನಾಂಶ ಕೋರಿರುವುದರಿಂದ ಅದನ್ನು ಪರಿಷ್ಕರಿಸಲು ಅಥವಾ ಹೆಚ್ಚಿಸಲು ಸಿಆರ್​ಪಿಸಿ ಸೆಕ್ಷನ್ 127ರ ಅಡಿಯಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಹೀಗಾಗಿ ಸಿಆರ್​ಪಿಸಿ ಸೆಕ್ಷನ್ 127ರ ಅಡಿ ಜೀವನಾಂಶ ಮೊತ್ತ ಹೆಚ್ಚಿಸಲು ಕೋರಿ ಸಲ್ಲಿಸಿರುವ ಅರ್ಜಿಯನ್ನು ಪರಿಗಣಿಸಿ ಮ್ಯಾಜಿಸ್ಟ್ರೇಟ್ ಕೋರ್ಟ್ ಹಾಗೂ ಜಿಲ್ಲಾ ಪ್ರಧಾನ ನ್ಯಾಯಾಲಯ ನೀಡಿರುವ ಆದೇಶ ಸೂಕ್ತವಲ್ಲ ಎಂದು ಪೀಠ ತೀರ್ಪಿನಲ್ಲಿ ಹೇಳಿದೆ.

ಅಲ್ಲದೇ ಜೀವನಾಂಶ ಹೆಚ್ಚಿಸಿ ಹೊರಡಿಸಿರುವ ಆದೇಶ ರದ್ದುಪಡಿಸಿರುವ ಪೀಠ, ಪ್ರಕರಣದ ಮಹಿಳೆಯು ಸೂಕ್ತ ಕಾನೂನಿನ ಅಡಿ ಪರಿಹಾರ ಕಂಡುಕೊಳ್ಳಲು ಈ ಆದೇಶ ಅಡ್ಡಿಯಾಗದು ಎಂದು ಸ್ಪಷ್ಟಪಡಿಸಿದೆ.

2001ರಲ್ಲಿ ವಿವಾಹವಾಗಿದ್ದ ದಂಪತಿ ನಡುವೆ ಕಲಹ ಉಂಟಾಗಿದ್ದರಿಂದ 2009ರಲ್ಲಿ ಪತ್ನಿ ಜೀವನಾಂಶ ಕೋರಿ ಡಿವಿ ಕಾಯ್ದೆಯ ಸೆಕ್ಷನ್ 12ರ ಅಡಿ ಮ್ಯಾಜಿಸ್ಟ್ರೇಟ್ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಈ ವೇಳೆ ನ್ಯಾಯಾಲಯ 1000 ರೂ. ಜೀವನಾಂಶ ನೀಡುವಂತೆ ಪತಿಗೆ ಆದೇಶಿಸಿತ್ತು. 2015ರಲ್ಲಿ ಸಿಆರ್​ಪಿಸಿ ಸೆಕ್ಷನ್ 127ರ ಅಡಿ ಜೀವನಾಂಶ ಹೆಚ್ಚಿಸಲು ಕೋರಿ ಸಲ್ಲಿಸಿದ್ದ ಅರ್ಜಿ ಪರಿಗಣಿಸಿದ್ದ ಮ್ಯಾಜಿಸ್ಟ್ರೇಟ್ ಕೋರ್ಟ್ ಜೀವನಾಂಶವನ್ನು ಒಂದು ಸಾವಿರದಿಂದ ಐದು ಸಾವಿರಕ್ಕೆ ಹೆಚ್ಚಿಸಿ 2018ರಲ್ಲಿ ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಪತಿ ಶಿವಾನಂದ ಧಾರವಾಡ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಕ್ರಿಮಿನಲ್ ರಿವಿಷನ್ ಪಿಟಿಷನ್ ಸಲ್ಲಿಸಿದ್ದರು. ಜಿಲ್ಲಾ ನ್ಯಾಯಾಲಯ 2019ರಲ್ಲಿ ಮ್ಯಾಜಿಸ್ಟ್ರೇಟ್ ಆದೇಶವನ್ನು ಎತ್ತಿಹಿಡಿದಿತ್ತು. ಆ ಬಳಿಕ ಶಿವಾನಂದ ಆದೇಶ ರದ್ದುಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಇದನ್ನೂ ಓದಿ: ಆಳಂದದಲ್ಲಿ ಎರಡು ಕೋಮುಗಳ ಮಧ್ಯೆ ಘರ್ಷಣೆ: 10 ಮಂದಿ ಮಹಿಳೆಯರು ಸೇರಿ 167 ಜನ ಅರೆಸ್ಟ್​

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.