ಬೆಂಗಳೂರು : ಹಿಂದಿನ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನಾಮಕರಣಗೊಂಡ, ಪೌರ ಸಂಸ್ಥೆ, ಕೃಷಿಮಾರುಕಟ್ಟೆಗಳ ಸದಸ್ಯರ ನೇಮಕಾತಿ ರದ್ದುಪಡಿಸುವ ಪರ್ವವನ್ನು ಬಿಜೆಪಿ ಸರ್ಕಾರ ಮುಂದುವರಿಸಿದೆ.

ಕಳೆದ ಎರಡು ಮೂರು ದಿನಗಳಿಂದ ಪ್ರತಿ ದಿನ ಒಂದಲ್ಲಾ ಒಂದು ಇಲಾಖೆಯ ನೇಮಕಾತಿ ರದ್ದುಪಡಿಸುತ್ತಲೇ ಇದೆ. ನಿನ್ನೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯ 15 ಅಕಾಡಮಿಗಳು ಹಾಗು ಪ್ರಾಧಿಕಾರದ ಅಧ್ಯಕ್ಷರು, ಸದಸ್ಯರ ನೇಮಕವನ್ನ ರದ್ದುಪಡಿಸಿದೆ. ಇದಕ್ಕು ಮುಂಚೆ ರಾಜ್ಯದ ಎಲ್ಲ ನಿಗಮ ಮಂಡಳಿಗಳ ಅಧ್ಯಕ್ಷರು, ಉಪಾಧ್ಯಕ್ಷರು , ನಿರ್ದೇಶಕರ ನೇಮಕಾತಿ ರದ್ದುಮಾಡಿ ಆದೇಶ ಹೊರಡಿಸಲಾಗಿತ್ತು.

ರಾಜ್ಯದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆಗಳಿಗೆ ಹಿಂದಿನ ಮೈತ್ರಿ ಸರ್ಕಾರ ನಾಮಕರಣ ಮಾಡಿದ್ದ ಅಧ್ಯಕ್ಷರು, ಉಪಾಧ್ಯಕ್ಷರು ಹಾಗು ನಿರ್ದೇಶಕರ ನಾಮಕರಣವನ್ನು ಸಹಕಾರ ಇಲಾಖೆ ಮುಖ್ಯಮಂತ್ರಿ ಯಡಿಯೂರಪ್ಪನವರ ಆದೇಶದ ಮೇರೆಗೆ ರದ್ದುಪಡಿಸಿಲಾಗಿದೆ.