ETV Bharat / state

ಮಹಿಳಾ ಪಿಜಿಯಲ್ಲಿ ಕ್ಯಾಮೆರಾ ಇಟ್ಟು ಲೈಂಗಿಕ ಶೋಷಣೆ: ಯುವತಿ ಹೆಸರಲ್ಲಿ ಚಾಟ್​​ ಮಾಡಿ ಆರೋಪಿ ಬಂಧಿಸಿದ ಪೊಲೀಸರು - ಆರೋಪಿ ಬಂಧನ

ಮಹಿಳಾ ಪಿಜಿಯೊಂದರಲ್ಲಿ ವಾಸವಿದ್ದ ಯುವತಿಯರ ನಗ್ನ ದೃಶ್ಯ ಸೆರೆ ಹಿಡಿದು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಆರೋಪಿಯನ್ನು ಬೆಂಗಳೂರು ಆಗ್ನೇಯ ವಿಭಾಗದ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

Accused Niranjan
ಆರೋಪಿ ನಿರಂಜನ್
author img

By

Published : Dec 9, 2022, 12:57 PM IST

Updated : Dec 9, 2022, 1:56 PM IST

ಬೆಂಗಳೂರು : ಮಹಿಳಾ ಪಿಜಿಯೊಂದರಲ್ಲಿ ವಾಸವಿದ್ದ ಯುವತಿಯರ ನಗ್ನ ದೃಶ್ಯ ಸೆರೆ ಹಿಡಿದು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಆರೋಪಿಯನ್ನು ಬೆಂಗಳೂರು ಆಗ್ನೇಯ ವಿಭಾಗದ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪಾಂಡಿಚೇರಿ ಮೂಲದ ನಿರಂಜನ್ ಬಂಧಿತ ಆರೋಪಿ.

ಎಚ್ಎಸ್ಆರ್ ಲೇಔಟ್ ನಲ್ಲಿ ವಾಸವಿದ್ದ ಆರೋಪಿ ಪಕ್ಕದಲ್ಲಿದ್ದ ಮಹಿಳಾ ಪಿಜಿಯ ಬಾತ್ ರೂಮಿನಲ್ಲಿ ಮೊಬೈಲ್ ಇಟ್ಟು ವೀಡಿಯೋ ರೆಕಾರ್ಡ್ ಮಾಡುತ್ತಿದ್ದನು. ಆ ಬಳಿಕ ಯುವತಿಯರ ಮೊಬೈಲ್‌ಗೆ ಅನಾಮಧೇಯ ಸಂದೇಶ ಕಳುಹಿಸಿ ಲೈಂಗಿಕ ಶೋಷಣೆ ಮಾಡುತ್ತಿದ್ದನು. ಸಂತ್ರಸ್ತ ಯುವತಿ ಆಗ್ನೇಯ ವಿಭಾಗದ ಸಿಇಎನ್ ಠಾಣೆ ಪೊಲೀಸರಿಗೆ ದೂರು ನೀಡಿದ್ದಳು.

ಆರೋಪಿ ಚಿತ್ರಿಸಿದ್ದು ಹೇಗೆ?: ಕೆಲಸವಿಲ್ಲದಿದ್ದರಿಂದ ತಾಯಿ ಕಳುಹಿಸುತ್ತಿದ್ದ ಹಣದಲ್ಲಿ‌ ಆರೋಪಿ ಮೋಜು‌ ಮಸ್ತಿ ಮಾಡುವ ಜತೆಗೆ ಮಾದಕ ವ್ಯಸನಿಯಾಗಿದ್ದನು. ನಾಲ್ಕು ವರ್ಷಗಳಿಂದ ಎಚ್ಎಸ್ಆರ್ ಲೇಔಟಿನ ಒಂದು ಪಿಜಿಯಲ್ಲಿ ನೆಲೆಸಿದ್ದನು. ಆರೋಪಿ ವಾಸವಿದ್ದ ಪಿಜಿ ಕಟ್ಟಡ ಪಕ್ಕದಲ್ಲಿದ್ದ ಮಹಿಳಾ ಪಿಜಿ ಒಂದೇ ಮಾಲೀಕನ ಒಡೆತನಕ್ಕೆ ಸೇರಿದ್ದವು.

ಆರೋಪಿ ಪಿಜಿ ಮಾಲೀಕನ ಜತೆಗೆ ಒಡನಾಟ ಬೆಳೆಸಿಕೊಂಡಿದ್ದನು. ಮಹಿಳಾ ಪಿಜಿಯಲ್ಲಿ ಏನಾದರೂ ಅಗತ್ಯ ಕೆಲಸವಿದ್ದರೇ ಆರೋಪಿ ತಾನೇ ಸ್ವತ ಮುಂದೆ ನಿಂತು ಮಾಡಿಸುತ್ತಿದ್ದನು. ಇದರಿಂದ ಆರೋಪಿಗೆ ಮಹಿಳಾ ಪಿ.ಜಿ ಬಗ್ಗೆ ಮಾಹಿತಿ ಇತ್ತು. ಆರೋಪಿ‌ ಪಿಜಿಯಲ್ಲಿ ಮಹಿಳೆಯರಿಲ್ಲದ ವೇಳೆ ತೆರಳಿ ವಿಡಿಯೋ ಚಿತ್ರೀಕರಣಕ್ಕೆ ಬೇಕಾದ ಸ್ಥಳ ನಿಗದಿಪಡಿಸಿಕೊಳ್ಳೂತ್ತಿದ್ದನು.

ಯಾರಾದರೂ ಯುವತಿಯರು ಸ್ನಾನ ಮಾಡಲು ಪಿಜಿಯ ಹೊರಗೆ ಒಣ ಹಾಕಿದ್ದ ಟವೆಲ್ ತೆಗೆದುಕೊಂಡು ಹೋದ್ರೆ ಆರೋಪಿ ತನ್ನ ಪಿಜಿ ಮಹಡಿಯಿಂದ ಪಕ್ಕದ ಮಹಿಳಾ ಪಿಜಿಯ ಮಹಡಿಗೆ ಜಿಗಿದು ನೀರಿನ ಪೈಪ್ ನ ನೆಪದಿಂದ ಬಾತ್ ರೂಮ್ ಮೇಲೆ ಕುಳಿತುಕೊಳ್ಳುತ್ತಿದ್ದನು. ಅಲ್ಲಿಂದ ತನ್ನ ಮೊಬೈಲ್ ಗೊತ್ತಾಗದಂತೆ ತೂಗು ಬಿಟ್ಟು ಕಿಟಕಿ ಮೂಲಕ ಸ್ನಾನ ಮಾಡುತ್ತಿದ್ದ ಯುವತಿಯರ ನಗ್ನ ದೃಶ್ಯ ಚಿತ್ರಿಸಿಕೊಳ್ಳುತ್ತಿದ್ದನು. ನಂತರ ಪಿಜಿಯ ರಿಜಿಸ್ಟಾರ್ ಪುಸ್ತಕದಲ್ಲಿದ್ದ ಆ ಯುವತಿಯರ ಮೊಬೈಲ್ ಕದಿಯುತ್ತಿದ್ದನು.

ಬಳಿಕ ತನ್ನ ಗೌಪ್ಯತೆ ಕಾಪಾಡಲು ಸಾಫ್ಟ್‌ವೇರ್ ಬಳಸಿ ವಿದೇಶಿ ನಂಬರ್ ಮೂಲಕ ಆ ಯುವತಿಯರನ್ನ ಸಂಪರ್ಕಿಸುತ್ತಿದ್ದನು. ಆರೋಪಿ ತಾನು ಸೆರೆ ಹಿಡಿದ ನಗ್ನ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುವುದಾಗಿ ಬೆದರಿಕೆ ಹಾಕಿ, ಕರೆದಲ್ಲಿ‌ ಬಂದು ಸಹಕರಿಸುವಂತೆ ಒತ್ತಾಯಿಸುತ್ತಿದ್ದನು.

ಪೊಲೀಸರ್ ಕಾರ್ಯಕ್ಕೆ ಮೆಚ್ಚುಗೆ:ಸಂತ್ರಸ್ತ ಯುವತಿ ದೂರಿನ ಮೇರೆಗೆ ಆಗ್ನೇಯ ವಿಭಾಗದ ಸಿಇಎನ್ ಪೊಲೀಸರ ತಂಡ ತಕ್ಷಣ ಆರೋಪಿ ಬಂಧಿಸಲು ಜಾಲ ಬೀಸಿದೆ. ಸಿಇಎನ್ ಇನ್‌ಸ್ಪೆಕ್ಟರ್ ಯೋಗೇಶ್ ನೇತೃತ್ವದ ತಂಡ, ಯುವತಿ ಹೆಸರಿನಲ್ಲಿ ಆರೋಪಿಗೆ ಚಾಟಿಂಗ್ ಮಾಡಿ ಬಳಿಕ ಆರೋಪಿಯ ಬೇಡಿಕೆಗೆ ಸಮ್ಮತಿಸಿರುವುದಾಗಿ ನಂಬಿಸಿದೆ. ಬಳಿಕ ಹೋಟೆಲ್‌ಗೆ ಕರೆಸಿಕೊಂಡು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಇದನ್ನೂಓದಿ:ದೊಡ್ಡಬಳ್ಳಾಪುರ: 3 ತಿಂಗಳಲ್ಲಿ 3 ಬಾರಿ ದೇವಾಲಯಗಳ ಹುಂಡಿ ಎಗರಿಸಿದ ಖದೀಮರು

Last Updated : Dec 9, 2022, 1:56 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.