ETV Bharat / state

ಸಿದ್ದಾರ್ಥ ಹೆಗ್ಡೆ ಕನಸಿನ ಕೂಸು 'ಕೆಫೆ ಕಾಫಿ ಡೇ' ಕಂಪನಿಗೆ ಮರುಜೀವ ನೀಡಿದ ಮಾಳವಿಕಾ ಹೆಗ್ಡೆ - ಕೆಫೆ ಕಾಫಿ ಡೇ ಕಂಪನಿಗೆ ಮರುಜೀವ ನೀಡಿದ ಮಾಳವಿಕಾ ಹೆಗ್ಡೆ

ಕಾಫಿ ಡೇ ಕಂಪನಿ ಉದ್ಯಮವನ್ನು ಕಟ್ಟಿ ಬೆಳೆಸಲು ಮಾಳವಿಕಾ ಅವರು ಸತತ ಪ್ರಯತ್ನ ಮಾಡಿದ್ದರ ಫಲವಾಗಿ ಕೆಫೆ ಕಾಫಿ ಡೇ ಕಂಪನಿ ಕುರಿತು ಹೂಡಿಕೆದಾರರು, ಬ್ಯಾಂಕ್‌ಗಳು, ಷೇರು ಮಾರುಕಟ್ಟೆಯಲ್ಲೂ ಹೊಸ ಭರವಸೆ ಮೂಡಿದ್ದು, 23ಕ್ಕೆ ಕುಸಿದಿದ್ದ ಕೆಫೆ ಕಾಫಿ ಡೇ ಷೇರುಗಳು ಇದೀಗ 51ಕ್ಕೆ ಏರಿಕೆಯಾಗಿರುವುದು ಉದ್ಯೋಗಿಗಳಲ್ಲಿ ಸಂತಸ ತಂದಿದೆ.

ಕೆಫೆ ಕಾಫಿ ಡೇ ಕಂಪನಿಗೆ ಮರುಜೀವ ನೀಡಿದ ಮಾಳವಿಕಾ ಹೆಗ್ಡೆ

author img

By

Published : Jan 11, 2022, 10:40 PM IST

ಬೆಂಗಳೂರು: ಕೆಫೆ ಕಾಫಿ ಡೇ ಕಂಪನಿ ವಿ.ಜಿ.ಸಿದ್ದಾರ್ಥ ಹೆಗ್ಡೆ ಅವರ ಕನಸಿನ ಕೂಸಾಗಿತ್ತು. ಅವರ ಸಾವಿನ ನಂತರ ಅದು ಮುಳುಗೇ ಹೋಯಿತು ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಸಿದ್ದಾರ್ಥ ಹೆಗ್ಡೆ ಅವರ ಪತ್ನಿ ಮಾಳವಿಕಾ ಹೆಗ್ಡೆ ಅವರು ಇದನ್ನು ಸುಳ್ಳು ಮಾಡಿದ್ದಾರೆ.

ಪತಿಯ ಅಗಲಿಕೆ ಬಳಿಕ ಕೆಫೆ ಕಾಫಿ ಡೇ ಕಂಪನಿಯ ಜವಾಬ್ದಾರಿ ವಹಿಸಿಕೊಂಡ ಮಾಳವಿಕಾ ಹೆಗ್ಡೆ ಕಂಪನಿಗೆ ಮರುಜೀವ ನೀಡುವ ಮೂಲಕ ಕಂಪನಿಯ ಮೇಲಿದ್ದ ದೊಡ್ಡ ಮೊತ್ತದ ಸಾಲದ ಪ್ರಮಾಣ ಕಡಿಮೆ ಮಾಡುವಲ್ಲಿ ಯಶಸ್ಸು ಕಂಡಿದ್ದಾರೆ.

ಕಾಫಿ ಡೇ ಕಂಪನಿ ಉದ್ಯಮವನ್ನು ಕಟ್ಟಿ ಬೆಳೆಸಲು ಮಾಳವಿಕಾ ಸತತ ಪ್ರಯತ್ನ ಮಾಡಿದ್ದರ ಫಲವಾಗಿ ಕೆಫೆ ಕಾಫಿ ಡೇ ಕಂಪನಿ ಕುರಿತು ಹೂಡಿಕೆದಾರರು, ಬ್ಯಾಂಕ್‌ಗಳು, ಷೇರು ಮಾರುಕಟ್ಟೆಯಲ್ಲೂ ಹೊಸ ಭರವಸೆ ಮೂಡಿದ್ದು, 23ಕ್ಕೆ ಕುಸಿದಿದ್ದ ಕೆಫೆ ಕಾಫಿ ಡೇ ಷೇರುಗಳು ಇದೀಗ 51ಕ್ಕೆ ಏರಿಕೆಯಾಗಿರುವುದು ಉದ್ಯೋಗಿಗಳಲ್ಲಿ ಸಂತಸ ತಂದಿದೆ.

ಕರ್ನಾಟಕದ ಪ್ರತಿಷ್ಠಿತ ಕೆಫೆ ಕಾಫಿ ಡೇ ಒಂದು ಕಾಲದಲ್ಲಿ ಯಶಸ್ಸು ಕಂಡಿತ್ತು. ನಂತರ ಕಂಪನಿ ನಷ್ಟದ ಸುಳಿಗೆ ಸಿಲುಕಿದ್ದು ಉಂಟು. ಕೆಫೆ ಕಾಫಿ ಡೇ ಮಾಲೀಕ ಸಿದ್ದಾರ್ಥ ಹೆಗ್ಡೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. 2019ರ ಆಗಸ್ಟ್​ನಲ್ಲಿ ಸಿದ್ದಾರ್ಥ ಮಂಗಳೂರು ಬಳಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡರು. ಈ ಘಟನೆ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಕೆಫೆ ಕಾಫಿ ಡೇ ಕಂಪನಿಯನ್ನು ಮುನ್ನಡೆಸುವವರು ಯಾರು? ಎಂಬೆಲ್ಲಾ ಮಾತುಗಳು ಕೇಳಿ ಬಂದವು. ಪತಿ ಸಿದ್ದಾರ್ಥ ದಿಢೀರ್ ಆತ್ಮಹತ್ಯೆಗೆ ಶರಣಾದಾಗ ಮಾಳವಿಕಾ ಹೆಗ್ಡೆ ಅವರಿಗೆ ಬರೀ ಸವಾಲುಗಳೇ ಎದುರಾದವು.

ಪತಿ ಕಳೆದುಕೊಂಡ ನೋವು, ದುಃಖ ಒಂದೆಡೆಯಾದರೆ ಮತ್ತೊಂದೆಡೆ ಪತಿ ಸಿದ್ದಾರ್ಥ ಕಟ್ಟಿ ಬೆಳೆಸಿದ್ದ ಉದ್ಯಮ ಸಾಮ್ರಾಜ್ಯವನ್ನು ಉಳಿಸಿ ಬೆಳೆಸುವ ಸವಾಲು ಎದುರಾಗಿತ್ತು. ಕಂಪನಿಯ ಸಾಲದ ಪ್ರಮಾಣವೇ ಅಂದಾಜು 7 ಸಾವಿರ ಕೋಟಿ ರೂ. ಇತ್ತು. ಇಂತಹ ಆರ್ಥಿಕ ಸಂಕಷ್ಟದ ಪರಿಸ್ಥಿತಿಯಲ್ಲಿ ಮುಳುಗುತ್ತಿದ್ದ ಕಂಪನಿಯನ್ನು ಎರಡೇ ವರ್ಷದಲ್ಲಿ ಸಂಕಷ್ಟದಿಂದ ಪಾರು ಮಾಡಿದವರು ಸಿದ್ದಾರ್ಥ ಅವರ ಪತ್ನಿ ಮಾಳವಿಕಾ ಹೆಗ್ಡೆ ಅವರು. ಪತಿಯ ಕೈಯಲ್ಲಿ ಸಾಧ್ಯವಾಗದ್ದನ್ನು ಪತ್ನಿ ಮಾಳವಿಕಾ ಹೆಗ್ಡೆ ಈಗ ಸಾಧಿಸಿ ತೋರಿಸಿದ್ದಾರೆ.

ಕಂಪನಿಗೆ ಈಗ ಅವರು ಆರ್ಥಿಕ ಚೈತನ್ಯ ನೀಡಿದ್ದಾರೆ. ಎಲ್ಲ ಆರ್ಥಿಕ ಬಿಕ್ಕಟ್ಟು, ಸಾಲವನ್ನು ತೀರಿಸಿ, ಕಂಪನಿಯನ್ನು ಯಶಸ್ವಿಯಾಗಿ ಮುನ್ನಡೆಸಲು ಅನುವು ಮಾಡಿಕೊಟ್ಟ ಕೀರ್ತಿ ಮಾಳವಿಕಾ ಹೆಗ್ಡೆ ಅವರಿಗೆ ಸಲ್ಲುತ್ತದೆ.

ಕೆಫೆ ಕಾಫಿ ಡೇ ದೇಶದ 165 ನಗರಗಳಲ್ಲಿ 572 ಕೆಫೆಗಳನ್ನು ಹೊಂದಿತ್ತು. ಜೊತೆಗೆ 333 ಕೆಫೆ ಕಾಫಿ ಡೇ ವ್ಯಾಲ್ಯೂ ಎಕ್ಸಪ್ರೆಸ್ ಕಿಯೋಸ್ಕ್​ಗಳನ್ನು ಹೊಂದಿತ್ತು. 36,326 ವೆಂಡಿಂಗ್ ಮೆಷಿನ್ ಮೂಲಕ ಕೆಫೆ ಕಾಫಿ ಡೇ ತನ್ನ ಗ್ರಾಹಕರಿಗೆ ಕಾಫಿಯ ಸವಿ ಉಣಬಡಿಸುತ್ತಿತ್ತು. ಮಾಳವಿಕಾ ಹೆಗ್ಡೆ 2020ರ ಡಿಸೆಂಬರ್ 7ರಿಂದ ಕಾಫಿ ಡೇ ಎಂಟರ್ ಪ್ರೈಸಸ್ ಲಿಮಿಟೆಡ್​ನ ಸಿಇಒ ಹುದ್ದೆಯನ್ನು ವಹಿಸಿಕೊಂಡರು.

ಆದಾದ ಬಳಿಕ, ಕಂಪನಿಯ ವ್ಯವಹಾರಗಳು, ಸಾಲ, ಆಸ್ತಿ ಮೌಲ್ಯ ಸೇರಿದಂತೆ ವ್ಯವಹಾರದ ಒಳ-ಹೊರಗು ಅರ್ಥ ಮಾಡಿಕೊಂಡು ಕಂಪನಿಯನ್ನು ಮುನ್ನಡೆಸಿದ್ದಾರೆ. ಮೊದಲಿಗೆ ಮಾಳವಿಕಾ ಹೆಗ್ಡೆ ಅವರಿಗೆ ಕಂಪನಿಯ ಸಾಲವನ್ನು ಮರುಪಾವತಿ ಮಾಡುವ ಮೂಲಕ ಕಂಪನಿಯ ಸಾಲದ ಪ್ರಮಾಣ ತಗ್ಗಿಸುವ ಜವಾಬ್ದಾರಿ ಇತ್ತು. ಇದನ್ನು ಮಾಳವಿಕಾ ಹೆಗ್ಡೆ ಈಗ ಯಶಸ್ವಿಯಾಗಿ ನಿರ್ವಹಿಸಿದ್ದಾರೆ.

ಕೆಫೆ ಡೇ ಎಂಟರ್ ಪ್ರೈಸಸ್ ಲಿಮಿಟೆಡ್ ಕಂಪನಿಯ ವಾರ್ಷಿಕ ವರದಿ ಪ್ರಕಾರ 2021ರ ಮಾರ್ಚ್ 31ಕ್ಕೆ ಕಂಪನಿಯ ಸಾಲದ ಮೊತ್ತ 1,779 ಕೋಟಿ ರೂ., ಇದರಲ್ಲಿ 1,263 ಕೋಟಿ ರೂ. ದೀರ್ಘಾವಧಿ ಸಾಲವಾದರೆ, 516 ಕೋಟಿ ಅಲ್ಪಾವಧಿ ಸಾಲವಾಗಿತ್ತು. 2020ರ ಹಣಕಾಸು ವರ್ಷದಲ್ಲಿ ಕಂಪನಿಯು 2,909 ಕೋಟಿ ಸಾಲ ಹೊಂದಿತ್ತು. ಕಳೆದ ಎರಡೇ ವರ್ಷಗಳಲ್ಲಿ ಕೆಫೆ ಡೇ ಎಂಟರ್ ಪ್ರೈಸಸ್ ಲಿಮಿಟೆಡ್ ದೊಡ್ಡ ಪ್ರಮಾಣದ ಸಾಲವನ್ನು ಮರುಪಾವತಿ ಮಾಡುವ ಮೂಲಕ ತನ್ನ ಸಾಲದ ಪ್ರಮಾಣವನ್ನು ತಗ್ಗಿಸಿದೆ.

ಭಾರಿ ಪ್ರಮಾಣದ ಸಾಲವನ್ನು ತೀರಿಸಲು ಕೆಫೆ ಡೇ ಎಂಟರ್ ಪ್ರೈಸಸ್ ಲಿಮಿಟೆಡ್​ಗೆ ತನ್ನ ಆಸ್ತಿಗಳನ್ನು ಮಾರಾಟ ಮಾಡದೆ ಅನ್ಯ ಮಾರ್ಗಗಳಿರಲಿಲ್ಲ. ಹಾಗಾಗಿ, ಬೆಂಗಳೂರಿನ ಬಿಡದಿ ಬಳಿ ಇದ್ದ ತನ್ನ ಗ್ಲೋಬಲ್ ವಿಲೇಜ್ ಟೆಕ್ ಪಾರ್ಕ್ ಅನ್ನು ಬ್ಲಾಕ್ ಸ್ಟೋನ್ ಮತ್ತು ಸಲಾರ್​ಪುರಿಯಾ ಸತ್ವ ಕಂಪನಿಗಳಿಗೆ 2,700 ಕೋಟಿ ರೂ.ಗೆ ಮಾರಾಟ ಮಾಡಿತು. ಅದೇ ರೀತಿ ತನ್ನ ಐಟಿ ಕಂಪನಿಯಾದ ಮೈಂಡ್ ಟ್ರೀಯನ್ನು ಎಲ್ ಅಂಡ್ ಟಿ ಇನ್​ಫೊಟೆಕ್ ಕಂಪನಿಗೆ ಮಾರಾಟ ಮಾಡಿತ್ತು. ಇದರಿಂದಾಗಿ ಕಂಪನಿಯ ಸಾಲದ ಪ್ರಮಾಣವು ಕಳೆದ ವರ್ಷವೇ 7,200 ಕೋಟಿ ರೂ. ನಿಂದ 3,200 ಕೋಟಿಗೆ ಇಳಿಯಿತು.

ಇದೀಗ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಕಾಫಿ ಎಸ್ಟೇಟ್ ಅನ್ನು ಕೆಫೆ ಕಾಫಿ ಡೇ ಕಂಪನಿಯು ಮಾರಾಟಕ್ಕೆ ಇಟ್ಟಿದೆ. ಆದರೆ ಸೂಕ್ತ ಮಾರುಕಟ್ಟೆ ಬೆಲೆ ಸಿಗದೆ ಮಾರಾಟ ಮಾಡಿಲ್ಲ. ಸಿದ್ದಾರ್ಥ ಸಾವಿನ ಬಳಿಕ ಮಾಳವಿಕಾ ಹೆಗ್ಡೆ, ಕಂಪನಿಯನ್ನು ಉಳಿಸುವುದಕ್ಕೆ ತಾವು ಬದ್ದ ಎಂದು ಕಾಫಿ ಡೇ ಉದ್ಯೋಗಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದರು. ಅದೇ ರೀತಿ ಈಗ ಕಂಪನಿಯನ್ನು ಉಳಿಸುತ್ತಿದ್ದಾರೆ. ಪತಿಯ ಕನಸನ್ನು ನನಸು ಮಾಡಲು ಮುಂದಾಗಿರುವ ಮಾಳವಿಕಾ ಹೆಗ್ಡೆ ಅವರಿಗೆ ಇಬ್ಬರು ಮಕ್ಕಳೂ ಸಾಥ್ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.