ETV Bharat / state

ಸಿಸಿಟಿವಿ ಆಫ್​ ಮಾಡಿ 2 ಲಕ್ಷ ರೂ. ಎಗರಿಸಿದ ಚಾಲಾಕಿ ದಂಪತಿ! - bengaluru theft

ಪಿಜಿಯಲ್ಲಿಟ್ಟಿದ್ದ ಹಣವನ್ನು ಅಲ್ಲೇ ಕೆಲಸ ಮಾಡುತ್ತಿದ್ದ ನೇಪಾಳಿ ದಂಪತಿಗಳು ಕದ್ದು ಪರಾರಿಯಾಗಿರುವ ಘಟನೆ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Nepali Couple
ಹೈಗ್ರೌಂಡ್ಸ್ ಪೊಲೀಸ್ ಠಾಣೆ
author img

By

Published : Mar 10, 2020, 6:55 AM IST

ಬೆಂಗಳೂರು: ಲೇಡಿಸ್​ ಪಿಜಿಯಲ್ಲಿಟ್ಟಿದ್ದ ಹಣವನ್ನು ಅಲ್ಲೇ ಕೆಲಸ ಮಾಡುತ್ತಿದ್ದ ನೇಪಾಳಿ ದಂಪತಿಗಳು ಕದ್ದು ಪರಾರಿಯಾಗಿರುವ ಘಟನೆ ಹೈಗ್ರೌಂಡ್ಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನೇಪಾಳ ಮೂಲದ ಪೂಜಾ ಸಿಂಗ್ ಹಾಗೂ ರಾಜು ಸಿಂಗ್ ಹಣ ಕದ್ದು ಪರಾರಿಯಾದವರು. ಇಲ್ಲಿನ ಕಾವೇರಪ್ಪ ಲೇಔಟ್​ನಲ್ಲಿ ಪದ್ಮನಾಭ ಎಂಬುವರು ಕಳೆದ ಎಂಟು ವರ್ಷಗಳಿಂದ ಪಿಜಿ ನಡೆಸುತ್ತಿದ್ದಾರೆ. 5 ವರ್ಷಗಳಿಂದ ನೇಪಾಳಿ ದಂಪತಿಗಳು ಇಲ್ಲಿ ಕೆಲಸ ಮಾಡುತ್ತಿದ್ದರು. ಪಿಜಿಗೆ ಸೇರುವ ಮುಂಚಿತವಾಗಿ ಯುವತಿಯರು ಮುಂಗಡ ಹಣವನ್ನು ನೀಡುತ್ತಿದ್ದು, ಅದನ್ನು ಮಾಲೀಕರು ಬೀರುವಿನಲ್ಲಿ ಇಡುತ್ತಿದ್ದರು. ಇದನ್ನು ಗಮನಿಸಿದ್ದ ದಂಪತಿಗಳು ರಾತ್ರಿ ವೇಳೆ ಸಿಸಿಟಿವಿ ಕ್ಯಾಮರಾ ಆಫ್​ ಮಾಡಿ ಸುಮಾರು 2 ಲಕ್ಷ ರೂ. ಕಳ್ಳತನವೆಸಗಿ ಪರಾರಿಯಾಗಿದ್ದಾರೆ.

ಇತ್ತ ಮಾಲೀಕರ ಅಜ್ಜಿ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದು, ಅವರ ಚಿಕಿತ್ಸೆಗೆ ಹಣ ಪಾವತಿಸಲು ಬೀರುವಿನಲ್ಲಿದ್ದ ಹಣಕ್ಕಾಗಿ ಕೈಹಾಕಿದ್ದಾರೆ. ಈ ವೇಳೆ ಹಣ ಕಳ್ಳತನವಾಗಿರುವ ಘಟನೆ ಬೆಳಕಿಗೆ ಬಂದಿದೆ. ತಕ್ಷಣವೇ ಸಿಸಿಟಿವಿ ಪರಿಶೀಲಿಸಿದಾಗ ನೋಸಿಗ್ನಲ್​ ಎಂದು ಬಂದಿದೆ. ಬಳಿಕ ಡಿವಿಆರ್ ಚೆಕ್ ಮಾಡಿದಾಗ ಸಿಸಿಟಿವಿ ಸ್ವಿಚ್ ಆಫ್ ಮಾಡಿರುವುದು ತಿಳಿದುಬಂದಿದೆ. ಸದ್ಯ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಕಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.