ಬೆಂಗಳೂರು: ಗೌರಿ, ಗಣೇಶ ಹಬ್ಬದ ಅಂಗವಾಗಿ ಕ್ಷೇತ್ರದ ಮಹಿಳೆಯರಿಗೆ ಸೀರೆ ಮತ್ತು ಅರಿಷಿಣ, ಕುಂಕುಮ ಹಾಗು ಸೀರೆ ನೀಡುವ ಮೂಲಕ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಹಬ್ಬದ ಶುಭಾಶಯ ಕೋರಿದರು.
ನಂತರ ಮಾತನಾಡಿದ ಸಚಿವರು, ಪ್ರತಿ ವರ್ಷದಂತೆ ಈ ವರ್ಷವೂ ಹಬ್ಬದ ಅಂಗವಾಗಿ ಕ್ಷೇತ್ರದ ಮಹಿಳಾ ಸಹೋದರಿಯರಿಗೆ ಸೀರೆಗಳನ್ನು ವಿತರಿಸುವ ಪದ್ಧತಿಯನ್ನು ರೂಢಿಸಿಕೊಂಡು ಬಂದಿದ್ದೇನೆ ಎಂದರು.
ಪರಿಸರಸ್ನೇಹಿ ಗಣೇಶನ ಪ್ರತಿಷ್ಠಾಪನೆ ಮಾಡುವಂತೆ ಹಾಗೂ ಕೊರೊನಾ ಸೋಂಕಿರುವುದರಿಂದ ಜನಸಂದಣಿ ಸೇರದಂತೆ ಸರ್ಕಾರದ ಆದೇಶಗಳನ್ನು ಪಾಲಿಸುವಂತೆ ಅವರು ಈ ಸಂದರ್ಭದಲ್ಲಿ ಮನವಿ ಮಾಡಿದರು.
ಹಿಂದೂ ಸಂಸ್ಕೃತಿಯು ಪುರಾತನ ಸಂಸ್ಕೃತಿಯಾಗಿದ್ದು ಮಹಿಳೆಯರಿಗೆ ವಿಶೇಷ ಸ್ಥಾನಮಾನವಿದೆ. ಆದ್ದರಿಂದ ಕಳೆದ ಕೆಲವು ವರ್ಷಗಳಿಂದ ನಮ್ಮ ಕ್ಷೇತ್ರದ ಮಹಿಳಾ ಸಹೋದರಿಯರಿಗೆ ಹಬ್ಬದ ಪ್ರಯುಕ್ತ ಅರಿಷಿಣ, ಕುಂಕುಮ ಹಾಗು ಸೀರೆ ಕೊಡುವ ಮೂಲಕ ಹಬ್ಬವನ್ನು ಆಚರಿಸಲಾಗುತ್ತದೆ ಎಂದು ತಿಳಿಸಿದರು.