ETV Bharat / state

ಚಾಕುವಿನಿಂದ ಇರಿದು, ಇಟ್ಟಿಗೆ ಎತ್ತಿ ಹಾಕಿ ಸ್ನೇಹಿತನ ಕೊಲೆ ಪ್ರಕರಣ: 5 ಮಂದಿ ಆರೋಪಿಗಳ ಬಂಧನ

author img

By

Published : Oct 25, 2021, 8:20 PM IST

Updated : Oct 25, 2021, 10:58 PM IST

ಬ್ಯಾಟರಾಯನಪುರದಲ್ಲಿ 5 ಜನರ ಗುಂಪೊಂದು ಸ್ನೇಹಿತನನ್ನು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

accused
ಆರೋಪಿಗಳ ಬಂಧನ

ಬೆಂಗಳೂರು: ಹಣದ ವಿಚಾರವಾಗಿ 25 ವರ್ಷಗಳಿಂದ ಜೊತೆಗಿದ್ದವನನ್ನು ಸ್ನೇಹಿತನೇ ಚಾಕುವಿನಿಂದ ಇರಿದು, ಸಿಮೆಂಟ್ ಇಟ್ಟಿಗೆ ಎತ್ತಿ ಹಾಕಿ ಬರ್ಬರವಾಗಿ ಕೊಲೆ ಮಾಡಿರುವ ಪ್ರಕರಣ ಶುಕ್ರವಾರ ಬ್ಯಾಟರಾಯನಪುರದಲ್ಲಿ ತಡರಾತ್ರಿ ನಡೆದಿತ್ತು.

ಪ್ರಕರಣ ಸಂಬಂಧ ಮಾಹಿತಿ ನೀಡಿದ ಡಿಸಿಪಿ

ಪ್ರಕರಣ ಸಂಬಂಧ ಭಾಸ್ಕರ್ ಸಹಚರರಾದ ಶ್ರೀನಿವಾಸ್, ಗಿರೀಶ್, ಪರಮೇಶ್ ಮತ್ತು ಮಂಜುನಾಥ್ ಎನ್ನುವ 5 ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಸಂಜೀವ್ ಪಾಟೀಲ್ ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ಚಂದ್ರಶೇಖರ್ ಮೃತ (30) ವ್ಯಕ್ತಿಯಾಗಿದ್ದು, ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು. ಆರೋಪಿಗಳು ಚಾಕುವಿನಿಂದ ಚುಚ್ಚಿ ಬರ್ಬರವಾಗಿ ಕೊಲೆ ಮಾಡಿದ ವಿಚಾರ ತನಿಖೆಯಿಂದ ಬೆಳಕಿಗೆ ಬಂದಿತ್ತು. ಕೊಲೆ ಮಾಡಿದ ಆರೋಪಿಗಳು ತಲೆ ಮರಿಸಿಕೊಂಡಿದ್ದರು. ಹಣಕಾಸಿನ ವಿಚಾರವಾಗಿ ಆಪ್ತ ಸ್ನೇಹಿತರೆ ಕೊಲೆ ಮಾಡಿರುವ ಶಂಕೆ ಪೊಲೀಸರಿಗೆ ವ್ಯಕ್ತವಾಗಿತ್ತು. ಘಟನೆ ಸಂಬಂಧ ಬ್ಯಾಟರಾನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದು ಮಾಹಿತಿ ನೀಡಿದರು.

complaint copy
ದೂರಿನ ಪ್ರತಿ

ಮೂಲತಃ ಮಂಡ್ಯ ಜಿಲ್ಲೆಯವರು:

ಕೊಲೆಯಾದ ಚಂದ್ರಶೇಖರ್ ಆರ್​​ಆರ್​​ನಗರದಲ್ಲಿ ವಾಸವಿದ್ದು, ಆಟೋ ರಿಕ್ಷಾ ಚಾಲನೆ ಮಾಡಿಕೊಂಡು ಹೂ ವ್ಯಾಪಾರ ಮಾಡುತ್ತಿದ್ದನು. ಸ್ನೇಹಿತ ಭಾಸ್ಕರ್ ತರಕಾರಿ ವ್ಯಾಪಾರ ಮಾಡುತ್ತಿದ್ದನು. ಇಬ್ಬರು ಮೂಲತಃ ಮಂಡ್ಯ ಜಿಲ್ಲೆಯ ಅಕ್ಕ- ಪಕ್ಕದ ಹಳ್ಳಿಯ ನಿವಾಸಿಗಳಾಗಿದ್ದಾರೆ.

2 ಲಕ್ಷ ರೂ. ಸಾಲ:

ಕೆಲ ತಿಂಗಳ ಹಿಂದೆ ಚಂದ್ರಶೇಖರ್ ಆರೋಪಿ ಭಾಸ್ಕರ್​​​​ ಸ್ನೇಹಿತನಿಗೆ 2 ಲಕ್ಷ ರೂ. ಸಾಲ ನೀಡಿದ್ದನು. ಈ ಸಾಲವನ್ನು ಭಾಸ್ಕರ್ ತನ್ನ ಜವಾಬ್ದಾರಿ ಎಂದು ತೆಗೆದುಕೊಂಡು ತೀರಿಸಲು ಪ್ರಾರಂಭಿಸಿದ್ದನು. ಎರಡು ತಿಂಗಳಿನಿಂದ ಭಾಸ್ಕರ್ ಸರಿಯಾಗಿ ಸಾಲದ ಕಂತು ನೀಡಿರಲಿಲ್ಲ. ಈ ಸಿಟ್ಟಿಗೆ ಭಾಸ್ಕರ್ ಪತ್ನಿಗೂ ತನಗೂ ಸಂಬಂಧವಿದೆ ಎಂದು ಪುಕಾರೆಬ್ಬಿಸಿ ಪರಿಚಯಸ್ಥರಿಗೆ, ಸ್ನೇಹಿತರಿಗೆ ಹೇಳಿಕೊಂಡು ಚಂದ್ರಶೇಖರ್ ಓಡಾಡುತ್ತಿದ್ದ ಎನ್ನುವ ಮಾಹಿತಿ ದೊರೆತಿದೆ ಎಂದರು.

complaint copy
ದೂರಿನ ಪ್ರತಿ

ಹಿಂದೆಯೂ ಹೊಡೆದಾಟ:

ಈ ನಡುವೆ ಹಣಕಾಸಿನ ವಿಚಾರವಾಗಿ ಭಾಸ್ಕರ್ ಕುಟುಂಬ ಹಾಗೂ ಚಂದ್ರಶೇಖರ್ ಕುಟುಂಬಗಳ ನಡುವೆ ಹೊಡೆದಾಟವಾಗಿ ಪ್ರಕರಣ ಹನುಮಂತನಗರ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು. ಆದರೆ, ಪೊಲೀಸರು ಇಬ್ಬರಿಗೂ ರಾಜಿ ಮಾಡಿಸಿದ್ದರು. ಆಗ ಎರಡೂ ಕುಟುಂಬಗಳು ಒಪ್ಪಿಕೊಂಡು ಪ್ರಕರಣ ದೂರು ಹಿಂಪಡಿದ್ದರು. ಆದರೆ, ಭಾಸ್ಕರ್ ಮನಸ್ಸಿನಲ್ಲಿ ಪ್ರತಿಕಾರದ ಮೊಳಕೆ ಒಡೆದಿತ್ತು. ಈ ನಡುವೆ ಭಾಸ್ಕರ್ ಪತ್ನಿ ಕೂಡ ಮನೆ ಬಿಟ್ಟು ಬೇರೆಡೆ ವಾಸ ಮಾಡಲು ಪ್ರಾರಂಭಿಸಿದ್ದಳು. ಈ ಸಂಬಂಧ ಪ್ರಮುಖ ಆರೋಪಿ ಮತ್ತು ಉಳಿದ ಆರೋಪಿಗಳು ಕೊಲೆಗೆ ಸ್ಕೆಚ್ ರೂಪಿಸಿದ್ದರು.

ಮಾತನಾಡಲು ಕರೆಸಿದ್ದ ಮೃತ ಚಂದ್ರಶೇಖರ್:

ಶುಕ್ರವಾರ ಸಂಜೆ ಮೃತ ಚಂದ್ರಶೇಖರ್ ಆರೋಪಿತರಾದ ಭಾಸ್ಕರ್​​ ಹಾಗೂ ಆತನ ಮೂವರು ಸ್ನೇಹಿತರಿಗೆ ಮಾತನಾಡಲು ಕರೆಸಿದ್ದನು. ಮದ್ಯಪಾನಸ್ತರಾಗಿದ್ದ ಚಂದ್ರಶೇಖರ್​ ಹಾಗೂ ಭಾಸ್ಕರ್ ಸ್ನೇಹಿತರ ಮದ್ಯೆ ಹಣಕಾಸಿನ ವಿಚಾರ ಹಾಗೂ ದಾಂಪತ್ಯದ ವಿಚಾರವಾಗಿ ಸ್ಥಳದಲ್ಲೇ ಇದ್ದ ಬಾರ್​ನಲ್ಲಿ ಗಲಾಟೆ ನಡೆದಿತ್ತು.

ಸ್ವಲ್ಪ ಸಮಯದ ಬಳಿಕೆ ಬಾರ್​​​​ನಿಂದ 100 ಮೀ ನಷ್ಟು ದೂರ ತೆರಳಿ ನಿರ್ಜನ ಪ್ರದೇಶದಲ್ಲಿ ಮಾತನಾಡಲು ಪ್ರಾರಂಭಿಸುತ್ತಾರೆ. ಆಗ ಪ್ರಮುಖ ಆರೋಪಿ ಭಾಸ್ಕರ್​ ಮತ್ತು ಸ್ನೇಹಿತ ಆಟೋದಲ್ಲಿ ಬಂದು ಜೊತೆಗೂಡುತ್ತಾರೆ. ಆಗ ಜಗಳ ವಿಕೋಪಕ್ಕೆ ತಿರುಗಿ ಆರೋಪಿಗಳು ಚಂದ್ರಶೇಖರ್ ಮುಖಕ್ಕೆ ಹೊಡೆಯಲು ಪ್ರಾರಂಭಿಸುತ್ತಾರೆ. ನಂತರ ಆತ ಓಡಲು ಯತ್ನಿಸಿದಾಗ ಆಟೋದಲ್ಲಿದ್ದ ಕಾರದ ಪುಡಿ ತೆಗೆದು ಎರಚಿ ದೇಹದ ಹಲವು ಭಾಗಗಳಿಗೆ ಚಾಕು, ಡ್ರಾಗರ್​​​​ನಿಂದ ಇರಿಯಲು ಪ್ರಾರಂಭಿಸುತ್ತಾರೆ. ಆತ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಸಿಮೆಂಟ್​​ ಇಟ್ಟಿಗೆ ಎತ್ತಿ ಹಾಕಿ ಕೊಲೆ ಮಾಡಿದ್ದಾರೆ. ತೀವ್ರ ರಕ್ತಸ್ರಾವದಿಂದ ಚಂದ್ರಶೇಖರ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದ ಎಂದು ಡಿಸಿಪಿ ಮಾಹಿತಿ ನೀಡಿದರು.

ಸ್ನೇಹಿತನ ಮಾಸ್ಟರ್ ಪ್ಲಾನ್:

ಸ್ಥಳಕ್ಕೆ ಆಗಮಿಸಿದ ಬ್ಯಾಟರಾಯನಪುರ ಪೊಲೀಸರಿಗೆ ಆರೋಪಿಗಳು ಬಿಟ್ಟು ಹೋಗಿದ್ದ ಆಟೋ, ಮಾರಾಕಾಸ್ತ್ರಗಳು, ಮಧ್ಯದ ಬಾಟಲ್​​ಗಳು, ದೊರೆತ್ತಿದ್ದವು. ಈ ಎಲ್ಲ ಘಟನೆ ನಡೆಯುವ ವೇಳೆ ಭಾಸ್ಕರ್ ಮೊದಲು ಸ್ಥಳದಲ್ಲಿ ಇರಲಿಲ್ಲ. ಆದರೆ, ಎಲ್ಲ ತಯಾರಿ ಮಾಡಿಕೊಂಡು ನಂತರ ಬಂದು ಜೊತೆಗೂಡಿದ್ದನು. ಆತನೇ ಮುಂದೆ ನಿಂತು ಎಲ್ಲ ಪ್ಲಾನ್ ಮಾಡಿದ್ದ ಎಂದು ಆರೋಪಿಗಳು ಬಾಯಿ ಬಿಟ್ಟಿದ್ದಾರೆ. ಹಣ ಮತ್ತು ಕೌಟುಂಬಿಕ ವಿಚಾರವಾಗಿ ಹುಟ್ಟಿದ ದ್ವೇಷ ಈ ಕೊಲೆಗೆ ಕಾರಣವಾಗಿದೆ ಎಂದು ಹೇಳಿದರು.

ಮುಂದುವರಿದ ತನಿಖೆ:

ಮರಣೋತ್ತರ ಪರೀಕ್ಷೆಯನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆಸಲಾಗಿತ್ತು. ಕೊಲೆ ನಡೆದಿರುವುದು ವರದಿಯಲ್ಲಿ ಸಹ ದೃಢಪಟ್ಟಿದೆ. ಸದ್ಯ 5 ಜನ ಆರೋಪಿಗಳನ್ನು ತನಿಖೆಗೆ ಒಳಪಡಿಸಲಾಗಿದ್ದು, ಹೆಚ್ಚಿನ ತನಿಖೆಯನ್ನು ಬ್ಯಾಟರಾಯನಪುರ ಠಾಣಾ ಪೊಲೀಸರು ನಡೆಸುತ್ತಿದ್ದಾರೆ ಎಂದು ಸಂಜೀವ್ ಪಾಟೀಲ್ ತಿಳಿಸಿದರು.

ಇದನ್ನೂ ಓದಿ: COVID Update: ರಾಜ್ಯದಲ್ಲಿ 290 ಹೊಸ ಕೇಸ್​ ಪತ್ತೆ..10 ಮಂದಿ ಬಲಿ

Last Updated : Oct 25, 2021, 10:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.