ಬೆಂಗಳೂರು: ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪದಗ್ರಹಣ ಕಾರ್ಯಕ್ರಮ ಹಿನ್ನೆಲೆಯಲ್ಲಿ ಪಕ್ಷದ ಕಚೇರಿ ಜಗನ್ನಾಥ ಭವನದಲ್ಲಿ ಇಂದು ಹೋಮ-ಹವನಾದಿ ಧಾರ್ಮಿಕ ಕ್ರಿಯೆಗಳು ನಡೆದವು. ಕಳೆದ ರಾತ್ರಿ ಗಣಪತಿ ಹೋಮ ನೆರವೇರಿಸಿದ ಅರ್ಚಕರು ಇಂದು ಬೆಳಿಗ್ಗೆ ದುರ್ಗಾ ಹೋಮ ನಡೆಸಿದರು. ಬಳಿಕ ಪೂರ್ಣಹುತಿಯಾಯಿತು. ನಿಯೋಜಿತ ಅಧ್ಯಕ್ಷರ ಜೊತೆಗೆ ನಿಕಟಪೂರ್ವ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
-
ನೂತನ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿರುವ ಶ್ರೀ @BYVijayendra ಅವರು ಇಂದು ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನಕ್ಕೆ ಆಗಮಿಸಿ ಪೂಜೆಯಲ್ಲಿ ಪಾಲ್ಗೊಂಡು, ಭಾರತ ಮಾತೆ ಭಾವಚಿತ್ರಕ್ಕೆ ಮತ್ತು ಜಗನ್ನಾಥರಾವ್ ಜೋಶಿ ಅವರ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿದರು.
— BJP Karnataka (@BJP4Karnataka) November 15, 2023 " class="align-text-top noRightClick twitterSection" data="
ಮಾಜಿ ಮುಖ್ಯಮಂತ್ರಿಗಳಾದ ಶ್ರೀ @BSYBJP ಅವರ ಆಶೀರ್ವಾದ ಪಡೆದು, ನಿಕಟಪೂರ್ವ… pic.twitter.com/IAkYNt4vNi
">ನೂತನ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿರುವ ಶ್ರೀ @BYVijayendra ಅವರು ಇಂದು ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನಕ್ಕೆ ಆಗಮಿಸಿ ಪೂಜೆಯಲ್ಲಿ ಪಾಲ್ಗೊಂಡು, ಭಾರತ ಮಾತೆ ಭಾವಚಿತ್ರಕ್ಕೆ ಮತ್ತು ಜಗನ್ನಾಥರಾವ್ ಜೋಶಿ ಅವರ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿದರು.
— BJP Karnataka (@BJP4Karnataka) November 15, 2023
ಮಾಜಿ ಮುಖ್ಯಮಂತ್ರಿಗಳಾದ ಶ್ರೀ @BSYBJP ಅವರ ಆಶೀರ್ವಾದ ಪಡೆದು, ನಿಕಟಪೂರ್ವ… pic.twitter.com/IAkYNt4vNiನೂತನ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿರುವ ಶ್ರೀ @BYVijayendra ಅವರು ಇಂದು ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನಕ್ಕೆ ಆಗಮಿಸಿ ಪೂಜೆಯಲ್ಲಿ ಪಾಲ್ಗೊಂಡು, ಭಾರತ ಮಾತೆ ಭಾವಚಿತ್ರಕ್ಕೆ ಮತ್ತು ಜಗನ್ನಾಥರಾವ್ ಜೋಶಿ ಅವರ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿದರು.
— BJP Karnataka (@BJP4Karnataka) November 15, 2023
ಮಾಜಿ ಮುಖ್ಯಮಂತ್ರಿಗಳಾದ ಶ್ರೀ @BSYBJP ಅವರ ಆಶೀರ್ವಾದ ಪಡೆದು, ನಿಕಟಪೂರ್ವ… pic.twitter.com/IAkYNt4vNi
ಕಚೇರಿ ಮುಂಭಾಗದಲ್ಲಿ ಜಾನಪದ ಕಲಾತಂಡಗಳ ಪ್ರದರ್ಶನ ಗಮನ ಸೆಳೆಯಿತು. ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು, ಕಾರ್ಯಕರ್ತರು ಆಗಮಿಸಿದ್ದು, ಹೊರಭಾಗದಲ್ಲಿ ಬೃಹತ್ ಎಲ್ಇಡಿ ಪರದೆ ಅಳವಡಿಸಿ ಪದಗ್ರಹಣ ಕಾರ್ಯಕ್ರಮ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ಊಟದ ಕೌಂಟರ್‌ಗಳನ್ನು ತೆರೆಯಲಾಗಿದೆ. ಅಭಿಮಾನಿಗಳು ವಿಜಯೇಂದ್ರ ಪರ ಜಯಘೋಷ ಮೊಳಗಿಸಿದರು.
-
Live : ನೂತನ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿರುವ ಶ್ರೀ @BYVijayendra ಅವರ ಪದಗ್ರಹಣ ಸಮಾರಂಭ #VijayaSarathya#ವಿಜಯಸಾರಥ್ಯ#BJP4Karnataka https://t.co/T1KHx3Mi6v
— BJP Karnataka (@BJP4Karnataka) November 15, 2023 " class="align-text-top noRightClick twitterSection" data="
">Live : ನೂತನ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿರುವ ಶ್ರೀ @BYVijayendra ಅವರ ಪದಗ್ರಹಣ ಸಮಾರಂಭ #VijayaSarathya#ವಿಜಯಸಾರಥ್ಯ#BJP4Karnataka https://t.co/T1KHx3Mi6v
— BJP Karnataka (@BJP4Karnataka) November 15, 2023Live : ನೂತನ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿರುವ ಶ್ರೀ @BYVijayendra ಅವರ ಪದಗ್ರಹಣ ಸಮಾರಂಭ #VijayaSarathya#ವಿಜಯಸಾರಥ್ಯ#BJP4Karnataka https://t.co/T1KHx3Mi6v
— BJP Karnataka (@BJP4Karnataka) November 15, 2023
ಈ ಸಂದರ್ಭದಲ್ಲಿ ಮಾತನಾಡಿದ ಬಿ.ವೈ.ವಿಜಯೇಂದ್ರ, "ನಮ್ಮ ರಾಷ್ಟ್ರೀಯ ನಾಯಕರು, ಪಕ್ಷದ ವರಿಷ್ಠರು ನನ್ನನ್ನು ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಘೋಷಣೆ ಮಾಡಿದ್ದಾರೆ. ಕಟೀಲ್ ಅವರಿಂದ ಜವಾಬ್ದಾರಿ ವಹಿಸಿಕೊಳ್ಳುತ್ತಿದ್ದೇನೆ. ರಾಜ್ಯದ ಜನರ ಸಹಕಾರ ಕೋರುತ್ತಿದ್ದೇನೆ" ಎಂದರು.
-
Live : ನೂತನ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿರುವ ಶ್ರೀ @BYVijayendra ಅವರ ಪದಗ್ರಹಣ ಸಮಾರಂಭ #VijayaSarathya#ವಿಜಯಸಾರಥ್ಯ#BJP4Karnataka https://t.co/UkRS7hxUvN
— BJP Karnataka (@BJP4Karnataka) November 15, 2023 " class="align-text-top noRightClick twitterSection" data="
">Live : ನೂತನ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿರುವ ಶ್ರೀ @BYVijayendra ಅವರ ಪದಗ್ರಹಣ ಸಮಾರಂಭ #VijayaSarathya#ವಿಜಯಸಾರಥ್ಯ#BJP4Karnataka https://t.co/UkRS7hxUvN
— BJP Karnataka (@BJP4Karnataka) November 15, 2023Live : ನೂತನ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿರುವ ಶ್ರೀ @BYVijayendra ಅವರ ಪದಗ್ರಹಣ ಸಮಾರಂಭ #VijayaSarathya#ವಿಜಯಸಾರಥ್ಯ#BJP4Karnataka https://t.co/UkRS7hxUvN
— BJP Karnataka (@BJP4Karnataka) November 15, 2023
"ಇಂದು ಐತಿಹಾಸಿಕ ದಿನ. ವಿಜಯೇಂದ್ರ ರಾಜ್ಯಾಧ್ಯಕ್ಷರಾಗುತ್ತಿದ್ದಾರೆ. ರಾಜ್ಯದಲ್ಲಿ ಪೂರ್ಣ ಉತ್ಸಾಹ ಬಂದಿದೆ. ನಮಗೆ ಖುಷಿ ಇದೆ. ಅವರಿಗೆ ಶುಭಕೋರಲು ಬಂದಿದ್ದೇನೆ. ಯಾವ ಅಸಮಾಧಾನವೂ ಇಲ್ಲ. ಪ್ರಧಾನಿ ನರೇಂದ್ರ ಮೋದಿ, ಜೆ.ಪಿ.ನಡ್ಡಾ, ಅಮಿತ್ ಶಾ ಎಲ್ಲರೂ ಸೇರಿ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಮಕಾಡೆ ಮಲಗಿಸುತ್ತೇವೆ" ಎಂದು ಮಾಜಿ ಸಚಿವ ಪ್ರಭು ಚೌಹಾಣ್ ಹೇಳಿದರು.
"ವಿಜಯೇಂದ್ರ ಪಕ್ಷದ ಜವಾಬ್ದಾರಿ ತೆಗೆದುಕೊಳ್ಳುತ್ತಿದ್ದಾರೆ. ಸವಾಲಿನ ಸಂದರ್ಭದಲ್ಲಿ ಪಕ್ಷ ಸಂಘಟನೆ ಮಾಡುವ ಶಕ್ತಿಯನ್ನು ಆ ದೇವರು ಅವರಿಗೆ ನೀಡಲಿ. ಕೆಲವರ ಗೈರುಹಾಜರಿಗೆ ವಿಶೇಷ ಅರ್ಥ ಬೇಡ. ವರಿಷ್ಠರು ಪಂಚರಾಜ್ಯಗಳ ಚುನಾವಣಾ ಜವಾಬ್ದಾರಿಯನ್ನು ಹಲವರಿಗೆ ಕೊಟ್ಟಿದಾರೆ. ಹಾಗಾಗಿ ಕೆಲವರು ಬರಲಾಗಿಲ್ಲ. ಇದರಲ್ಲಿ ತಪ್ಪು ಅರ್ಥ ಏನೂ ಇಲ್ಲ. ಎಲ್ಲರ ಸಹಕಾರವೂ ಇದೆ. ರಾಜಕೀಯ ಅಂದ್ರೇನೇ ಹಾಗೆ, ಸವಾಲಿನ ಹಾದಿ ರಾಜಕೀಯದಲ್ಲಿ ಏರುತಗ್ಗು ಇದ್ದೇ ಇರುತ್ತದೆ. ಅದನ್ನೆಲ್ಲವನ್ನೂ ಎದುರಿಸುವ ಶಕ್ತಿ ವಿಜಯೇಂದ್ರ ಅವರಿಗಿದೆ" ಸಹೋದರ ಹಾಗು ಸಂಸದ ಬಿ.ವೈ.ರಾಘವೇಂದ್ರ ನುಡಿದರು.
ಶಾಸಕ ಎಸ್.ಆರ್.ವಿಶ್ವನಾಥ್ ಮಾತನಾಡಿ, "ಇವತ್ತು ನೂತನ ಅಧ್ಯಕ್ಷರಾಗಿ ಚುನಾವಣಾ ಚಾಣಕ್ಯ ವಿಜಯೇಂದ್ರ ರಾಜ್ಯಾದ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡ್ತಿದ್ದಾರೆ. ದೀಪಾವಳಿಯಲ್ಲಿ ನಡ್ಡಾ, ಅಮಿತ್ ಶಾ, ಪ್ರಧಾನಿ ಮೋದಿ ಆಶೀರ್ವಾದದಿಂದ ಪದಗ್ರಹಣ ಮಾಡುತ್ತಿದ್ದಾರೆ. ಕಾರ್ಯಕರ್ತರಿಗೆ ನಿರುತ್ಸಾಹ ಇತ್ತು. ಈಗ ಅವರ ಜೊತೆ ಪಕ್ಷ ಸಂಘಟನೆಗೆ ನಾವೆಲ್ಲಾ ಇರುತ್ತೇವೆ. ಲೋಕಸಭಾ ಚುನಾವಣೆಯಲ್ಲಿ 28 ಸ್ಥಾನ ಗೆಲ್ಲಬೇಕೆಂದು ಈಗಾಗಲೇ ಸಿದ್ಧ ಮಾಡಿಕೊಳ್ಳಲಾಗುತ್ತಿದೆ" ಎಂದರು.
ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, "ವಿಜಯೇಂದ್ರ ಅವರಿಗೆ ಈಗ ಪಕ್ಷದ ಜವಾಬ್ದಾರಿ ನಿಯೋಜಿಸಿದ್ದಾರೆ. ಬಹಳ ಸಂತೋಷ ಆಗಿದೆ. ರಾಜ್ಯದ, ಅದರಲ್ಲೂ ಯುವಜನತೆಗೆ ಉತ್ಸಾಹ ಬಂದಿದೆ. ಮುಂದೆ ಈ ಪಕ್ಷದ ಓಟವನ್ನು ಯಾರೂ ತಡೆದು ನಿಲ್ಲಿಸಲಾಗಲ್ಲ. ವಿಪಕ್ಷ ನಾಯಕನ ಆಯ್ಕೆ ಸಂಬಂಧ ನಾಳೆ ಶುಕ್ರವಾರ ನಡೆಯಬಹುದು. ನಾನು ಆಕಾಂಕ್ಷಿ ಅಲ್ಲ ಅಂತ ಹೇಳಲ್ಲ. ಯಾರಿಗೆ ಕೊಟ್ಟರೂ ಕೆಲಸ ಮಾಡ್ತೀನಿ. ವಿಪಕ್ಷ ಬಹಳ ದೊಡ್ಡ ಜವಾಬ್ದಾರಿ. 135 ಸೀಟು ಪಡೆದು ಕಾಂಗ್ರೆಸ್ ಹುಚ್ಚು ಕುದುರೆ ತರ ಲಗಾಮು ಇಲ್ಲದೆ ಓಡ್ತಿದೆ. ಅದನ್ನು ತಡೆದು ಕಟ್ಟಿಹಾಕುವ ಕೆಲಸ ನಾವು ಮಾಡುತ್ತೇವೆ" ಎಂದು ಹೇಳಿದರು.
ಇದನ್ನೂ ಓದಿ : ರಾಜ್ಯ ಬಿಜೆಪಿ ನೊಗ ಹೊತ್ತ ವಿಜಯೇಂದ್ರ: ಯುವ ನಾಯಕನಿಗೆ ಹಿರಿಯರ ಬೆಂಬಲ