ETV Bharat / state

ಗ್ರಾಮ ಗ್ರಾಮಕ್ಕೆ ತೆರಳಿ ಪ್ರಚಾರ ಮಾಡಿದ್ದೆವು.. ಸೋಲಿನ ಹೊಣೆ ನಾನೇ ಹೊರುತ್ತೇನೆ : ವಿಜಯೇಂದ್ರ - ಉಪಚುನಾವಣೆ ಫಲಿತಾಂಶ

ಪ್ರತಾಪ್ ಗೌಡ ಪಾಟೀಲ್​ಗೆ ಎಂಎಲ್​ಸಿ ಮಾಡುವ ಕುರಿತು ಪ್ರತಿಕ್ರಿಯಿಸಿ, ಅದರ ಬಗ್ಗೆ ಪಕ್ಷದ ಮುಖಂಡರು ಕೂತು ಚರ್ಚೆ ಮಾಡ್ತಾರೆ. ಈಗ ತಾನೇ ಫಲಿತಾಂಶ ಬಂದಿದೆ. ಸಿಎಂ, ರಾಜ್ಯಾಧ್ಯಕ್ಷರು ಅದರ ಬಗ್ಗೆ ಚರ್ಚೆ ಮಾಡುತ್ತಾರೆ..

ವಿಜಯೇಂದ್ರ
ವಿಜಯೇಂದ್ರ
author img

By

Published : May 2, 2021, 8:08 PM IST

ಬೆಂಗಳೂರು : ಮಸ್ಕಿ ಕ್ಷೇತ್ರದ ಜವಾಬ್ದಾರಿ ಹೊತ್ತಿದ್ದೆ. ಸೋಲಿನ ನೈತಿಕ ಹೊಣೆಯನ್ನು ನಾನೂ ಹೊರುತ್ತೇನೆ ಎಂದು ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದ್ದಾರೆ. ಬೆಂಗಳೂರಲ್ಲಿ ಮಾತನಾಡಿದ ಅವರು, ಪ್ರತಾಪ್ ಗೌಡ ಪಾಟೀಲ್​ರ ಮುಂದಿನ ಭವಿಷ್ಯ ಪಕ್ಷದ ನಾಯಕರು ನಿರ್ಧರಿಸಲಿದ್ದಾರೆ ಎಂದರು.

ಮಸ್ಕಿ ಸೋಲು ನಿರೀಕ್ಷೆ ಮಾಡಿರಲಿಲ್ಲ. ನಾವು ಗ್ರಾಮಗಳಿಗೆ ಹೋಗಿ ಪ್ರಚಾರ ಮಾಡಿದ್ದೆವು. ಆದರೂ ಸೋಲಾಗಿದೆ ಎಂದರು. ಅಸ್ಸೋಂ, ಪುದುಚೆರಿಯಲ್ಲಿ ಬಿಜೆಪಿ ಗೆದ್ದಿದೆ. ಪಶ್ಚಿಮ ಬಂಗಾಳದಲ್ಲಿ ನಾವು ಅಂದುಕೊಂಡ ಮಟ್ಟದಲ್ಲಿ ‌ಸಂಖ್ಯೆ ಬರಲಿಲ್ಲ.

ಆದರೂ 70ಕ್ಕೂ ಹೆಚ್ಚು ಸ್ಥಾನ ಗೆದ್ದು ದೊಡ್ಡ ಸಾಧನೆ ಮಾಡಿದ್ದೇವೆ. ಅಧಿಕೃತ ವಿರೋಧ ಪಕ್ಷದ ಸ್ಥಾನಮಾನ ಪಡೆಯುವಲ್ಲಿ ಸಫಲರಾಗಿದ್ದೇವೆ ಎಂದರು.

ಬೆಳಗಾವಿಯಲ್ಲಿ ಬಿಜೆಪಿ ಮತ್ತೊಮ್ಮೆ ಜಯಭೇರಿ ಬಾರಿಸಿದೆ, ಬಸವಕಲ್ಯಾಣದಲ್ಲಿ ಕೂಡ ಗೆದ್ದಿದ್ದೇವೆ. ಆದರೆ, ಮಸ್ಕಿಯಲ್ಲಿ ಹೀಗೆ ಫಲಿತಾಂಶ ಬರಲಿದೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಮಸ್ಕಿಯಲ್ಲಿ‌ ಹಿನ್ನಡೆ ಆಗಿರಬಹುದು, ಆದರೂ ನಾವು ಧೃತಿಗೆಡಲ್ಲ, ಕಾರ್ಯಕರ್ತರು ಧೃತಿಗೆಡೋದು ಬೇಡ ಎಂದರು.

ಚುನಾವಣಾ ಫಲಿತಾಂಶ ಕುರಿತು ವಿಜಯೇಂದ್ರ ಪ್ರತಿಕ್ರಿಯೆ

ಮಸ್ಕಿ ಕ್ಷೇತ್ರದ ಸೋಲನ್ನು‌ ನೈತಿಕವಾಗಿ ನಾನೂ ಸಹ ಹೊರುತ್ತೇನೆ, ನಾನು ಕ್ಷೇತ್ರದ ಉಸ್ತುವಾರಿಯಾಗಿದ್ದೆ, ಮಸ್ಕಿ ಸೋಲು ನಿರೀಕ್ಷೆ ಮಾಡಿರಲಿಲ್ಲ. ನಾವು ಗ್ರಾಮಗಳಿಗೆ ಹೋಗಿ ಪ್ರಚಾರ ಮಾಡಿದ್ದೆವು. ಆದರೂ ಸೋಲಾಗಿದೆ. ಮುಂದಿನ ದಿನಗಳಲ್ಲಿ ಸೋಲಿನ ಕಾರಣ ಬಗ್ಗೆ ಮುಖಂಡರ ಜೊತೆ ಚರ್ಚೆ ನಡೆಸಲಾಗುತ್ತದೆ ಎಂದರು.

ನನ್ನ ಸೋಲಿಗೆ ನಮ್ಮವರೇ ಕಾರಣ ಎಂಬ ಪ್ರತಾಪ್ ಗೌಡ ಪಾಟೀಲ್ ಹೇಳಿಕೆಯನ್ನು ವಿಜಯೇಂದ್ರ ತಳ್ಳಿಹಾಕಿದರು. ಅವರ ಹೇಳಿಕೆಯನ್ನು ನಾನು‌ ಒಪ್ಪಲ್ಲ, ಅಲ್ಲಿ ಇದ್ದ ಕೆಲ ಸಮಸ್ಯೆಗಳ ನಡುವೆಯೂ ಉತ್ತಮವಾಗಿ ಚುನಾವಣೆ ಮಾಡಿದ್ದೇವೆ.

ಮತದಾರಾರು ನಮಗೆ ಆಶೀರ್ವದಿಸಿಲ್ಲ, ಜನಾದೇಶವನ್ನು ನಾವು ಗೌರವಿಸುತ್ತೇವೆ, ಎಲ್ಲರೂ ಸಹಕಾರ ನೀಡಿದ್ದರು, ಪ್ರಯತ್ನ ಪಟ್ಟಿದ್ದರು ಎಂದರು.

ಕ್ಷೇತ್ರದ ಉಸ್ತುವಾರಿ ಸ್ಥಾನ ಬಸವಕಲ್ಯಾಣ ಬದಲು ಮಸ್ಕಿಗೆ ಬದಲಾಗಿದ್ದ ಕುರಿತು ಪ್ರತಿಕ್ರಿಯೆ ನೀಡಿದ ವಿಜಯೇಂದ್ರ, ಇಲ್ಲಿ ಬಸವ ಕಲ್ಯಾಣ, ಮಸ್ಕಿ ಅನ್ನೋದು ಬರುವುದಿಲ್ಲ. ಪಕ್ಷ ಜವಾಬ್ದಾರಿ ಕೊಟ್ಟಾಗ ಇಲ್ಲ ಅನ್ನೋದಕ್ಕೆ ಆಗೋದಿಲ್ಲ.

ಮುಂದೆ ಸರಿ ಹೋಗುತ್ತೇದೆ, ಒಗ್ಗಟ್ಟಾಗಿ ಇದ್ದೇವೆ. ನಾವೆಲ್ಲರೂ ಒಟ್ಟಿಗೆ ಸಂಘಟನೆ ಮಾಡಿದ್ದೆವು. ಮಂದೆಯೂ ಸಂಘಟನೆ ಮಾಡುತ್ತೇವೆ ಎಂದರು.

ಪ್ರತಾಪ್ ಗೌಡ ಪಾಟೀಲ್​ಗೆ ಎಂಎಲ್​ಸಿ ಮಾಡುವ ಕುರಿತು ಪ್ರತಿಕ್ರಿಯಿಸಿ, ಅದರ ಬಗ್ಗೆ ಪಕ್ಷದ ಮುಖಂಡರು ಕೂತು ಚರ್ಚೆ ಮಾಡ್ತಾರೆ. ಈಗ ತಾನೇ ಫಲಿತಾಂಶ ಬಂದಿದೆ. ಸಿಎಂ, ರಾಜ್ಯಾಧ್ಯಕ್ಷರು ಅದರ ಬಗ್ಗೆ ಚರ್ಚೆ ಮಾಡುತ್ತಾರೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.