ETV Bharat / state

ಬೈ ಎಲೆಕ್ಷನ್ ರಣತಂತ್ರ: ಬಿಜೆಪಿ ಸಭೆಯಿಂದ ದೂರ ಉಳಿದು, ಅಸಮಧಾನ ಹೊರಹಾಕಿದ ಆರ್​​. ಅಶೋಕ್​​ - ಉಪ ಚುನಾವಣಾ ಸಿದ್ದತಾ

ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ. ನಡ್ಡಾ ಬೆಂಗಳೂರಿಗೆ ಆಗಮಿಸಿ ದಿನವಿಡೀ ಹಲವು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಅವರೊಂದಿಗೆ ರಾಜ್ಯ ನಾಯಕರೆಲ್ಲರೂ ಪಾಲ್ಗೊಂಡು ರಾತ್ರಿ ಸಭೆ ನಡೆಸುವ ಮೂಲಕ ಉಪ ಚುನಾವಣಾ ಸಿದ್ಧತಾ ಕಾರ್ಯವನ್ನು ಮುಂದುವರೆಸಲಾಯಿತು. ಆದ್ರೆ ಈ ಸಭೆಗೂ ಸಚಿವ ಆರ್​ ಅಶೋಕ್​ ಗೈರುಹಾಜರಾಗುವ ಮೂಲಕ ತಮ್ಮ ಅಸಮಾಧಾನವನ್ನು ಮತ್ತೊಮ್ಮೆ ಹೊರಹಾಕಿದ್ದಾರೆ.

ಆರ್​​ ಅಶೋಕ್​​
author img

By

Published : Sep 23, 2019, 10:20 AM IST

ಬೆಂಗಳೂರು: ಉಪ ಚುನಾವಣಾ ದಿನಾಂಕ ಘೋಷಣೆಯಾಗುತ್ತಿದ್ದಂತೆ ರಾಜ್ಯ ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದ್ದು, ಸರಣಿ ಸಭೆಗಳನ್ನು ನಡೆಸಲಾಗುತ್ತಿದೆ. ಆದ್ರೆ ಕಂದಾಯ ಸಚಿವ ಆರ್.ಅಶೋಕ್ ಮಾತ್ರ ಈ ಸಭೆಗಳಿಂದ ಅಂತರ ಕಾಯ್ದುಕೊಂಡು ತಮ್ಮ ಅಸಮಧಾನವನ್ನು ಹೊರಹಾಕುತ್ತಲೇ ಇದ್ದಾರೆ.

ರಾಜ್ಯಾಧ್ಯಕ್ಷರಾದ ಬಳಿಕ ನಡೆಯುತ್ತಿರುವ ಮೊದಲ ಪರೀಕ್ಷೆ ಎದುರಿಸಲು ನಳಿನ್ ಕುಮಾರ್ ಕಟೀಲ್ ತಾಲೀಮು ಆರಂಭಿಸಿದ್ದಾರೆ. ಇದರ ಭಾಗವಾಗಿ ಕಳೆದ‌ ರಾತ್ರಿ ರಾಜ್ಯ ಬಿಜೆಪಿ ಕಚೇರಿಯಲ್ಲಿ ಕಟೀಲ್ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಬೆಂಗಳೂರಿನ ಬಿಜೆಪಿ ಪ್ರಮುಖರ ಸಭೆಯಲ್ಲಿ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ, ಡಿಸಿಎಂ ಡಾ. ಸಿ.ಎನ್ ಅಶ್ವಥ್ ನಾರಾಯಣ, ಸಂಸದರಾದ ಪಿ.ಸಿ ಮೋಹನ್, ತೇಜಸ್ವಿ ಸೂರ್ಯ ಮತ್ತು ಇತರ ಮುಖಂಡರು ಭಾಗಿಯಾಗಿದ್ದರು.

15 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬೆಂಗಳೂರಿನ ಕೆ.ಆರ್. ಪುರಂ ಮತ್ತು ಪುಲಿಕೇಶಿನಗರ ಕ್ಷೇತ್ರ ಪಕ್ಕದ ಹೊಸಕೋಟೆ ಕ್ಷೇತ್ರ ಕೂಡ ಸೇರಿರುವ ಹಿನ್ನೆಲೆಯಲ್ಲಿ ಈ ಕ್ಷೇತ್ರಗಳ‌ ಚುನಾವಣಾ ಸಿದ್ಧತಾ ಕಾರ್ಯದ ಕುರಿತು ಚರ್ಚೆ ನಡೆಸಲಾಯಿತು. ಬಿಬಿಎಂಪಿ ಮೇಯರ್ ಚುನಾವಣೆ ಕುರಿತೂ ಸಭೆ ನಡೆಸಲಾಯಿತು.

ಮುಂದುವರೆದ ಅಶೋಕ್ ಮುನಿಸು:

ಆದರೆ ಈ ಎಲ್ಲಾ ವಿಷಯಗಳ ಕುರಿತು ನಡೆದ ಸಭೆಗೆ ಕಂದಾಯ ಸಚಿವ ಆರ್. ಅಶೋಕ್ ಗೈರಾಗಿ ತಮ್ಮ ಅಸಮಧಾನ ಶಮನವಾಗಿಲ್ಲ ಎಂಬ ಸಂದೇಶವನ್ನು ಮತ್ತೊಮ್ಮೆ ಪಕ್ಷದ ನಾಯಕರಿಗೆ ರವಾನಿಸಿದ್ದಾರೆ. ಸ್ವತಃ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್​​ ಕಟೀಲ್ ಸೇರಿ ಹಿರಿಯ ನಾಯಕರು ಸಾಕಷ್ಟು ಬಾರಿ ಅಶೋಕ್ ಮನವೊಲಿಕೆ ಕಾರ್ಯ ನಡೆಸಿದ್ದರೂ ಅದು ಫಲ ನೀಡಿಲ್ಲ. ಪಕ್ಷದ ಚಟುವಟಿಕೆಯಿಂದ ದೂರ ಉಳಿಯುವ ಮೂಲಕ ತಮ್ಮ ಅಸಮಧಾನ ಹೊರಹಾಕುತ್ತಿದ್ದಾರೆ.

ಉಪ ಮುಖ್ಯಮಂತ್ರಿ ಸ್ಥಾನ ಕೈತಪ್ಪಿದ್ದು ಒಂದು ಕಡೆಯಾದರೆ ಬೆಂಗಳೂರು ಜಿಲ್ಲಾ ಉಸ್ತುವಾರಿ ನೀಡದೇ ಇರುವುದಕ್ಕೆ ಅಶೋಕ್ ಮತ್ತಷ್ಟು ಬೇಸರಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಪಕ್ಷದ ಚಟುವಟಿಕೆಯಿಂದ ಮತ್ತಷ್ಟು ದೂರ ಸರಿಯುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

Intro:

ಬೆಂಗಳೂರು: ಉಪ ಚುನಾವಣಾ ದಿನಾಂಕ ಘೋಷಣೆಯಾಗುತ್ತಿದ್ದಂತೆ ರಾಜ್ಯ ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದ್ದು ಸರಣಿ ಸಭೆಗಳನ್ನು ನಡೆಸಲಾಗುತ್ತಿದ್ದರೂ ಕಂದಾಯ ಸಚಿವ ಆರ್.ಅಶೋಕ್ ಮಾತ್ರ ದೂರ ಉಳಿದು ತಮ್ಮ ಅಸಮಧಾನ ಹೊರಹಾಕುವ ಪ್ರಕ್ರಿಯೆಯನ್ನು ಮುಂದುವರೆಸಿದ್ದಾರೆ.

ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ ನಡ್ಡಾ ಆಗಮಿಸಿ ದಿನವಿಡೀ ಹಲವು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಅವರೊಂದಿಗೆ ರಾಜ್ಯ ನಾಯಕರೆಲ್ಲರೂ ಪಾಲ್ಗೊಂಡರೂ ರಾತ್ರಿ ಸಭೆ ನಡೆಸುವ ಮೂಲಕ ಉಪ ಚುನಾವಣಾ ಸಿದ್ದತಾ ಕಾರ್ಯವನ್ನು ಮುಂದುವರೆಸಲಾಯಿತು. ಚುನಾವಣಾ ದಿನಾಂಕ ಘೋಷಣೆಯಾಗುತ್ತಿದ್ದಂತೆ ನಿರಂತರವಾಗ ಸಭೆ ನಡೆಸು ಚುನಾವಣಾ ತಂತ್ರ ರೂಪಿಸುವ ಕಾರ್ಯ ನಡೆಸಲಾಗುತ್ತಿದೆ.

ರಾಜ್ಯಾಧ್ಯಕ್ಷರಾದ ಬಳಿಕ ನಡೆಯುತ್ತಿರುವ ಮೊದಲ ಪರೀಕ್ಷೆ ಎದುರಿಸಲು ನಳಿನ್ ಕುಮಾರ್ ಕಟೀಲ್ ತಾಲೀಮು ಆರಂಭಿಸಿದ್ದಾರೆ ಇದರ ಭಾಗವಾಗಿ ಕಳೆದ‌ ರಾತ್ರಿ ರಾಜ್ಯ ಬಿಜೆಪಿ ಕಚೇರಿಯಲ್ಲಿ ಕಟೀಲ್ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಬೆಂಗಳೂರಿನ ಬಿಜೆಪಿ ಪ್ರಮುಖರ ಸಭೆಯಲ್ಲಿ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ, ಡಿಸಿಎಂ ಡಾ. ಸಿ.ಎನ್. ಅಶ್ವಥ್ ನಾರಾಯಣ, ಸಂಸದರಾದ ಪಿ.ಸಿ. ಮೋಹನ್, ತೇಜಸ್ವಿ ಸೂರ್ಯ ಮತ್ತು ಇತರ ಮುಖಂಡರು ಭಾಗಿಯಾಗಿದ್ದರು.

15 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬೆಂಗಳೂರಿನ ಕೆ.ಆರ್.ಪುರಂ ಮತ್ತು ಪುಲಿಕೇಶಿನಗರ ಕ್ಷೇತ್ರ ಪಕ್ಕದ ಹೊಸಕೋಟೆ ಕ್ಷೇತ್ರ ಕೂಡ ಸೇರಿರುವ ಹಿನ್ನಲೆಯಲ್ಲಿ ಈ ಕ್ಷೇತ್ರಗಳ‌ ಚುನಾವಣಾ ಸಿದ್ದತಾ ಕಾರ್ಯದ ಕುರಿತು ಚರ್ಚೆ ನಡೆಸಲಾಯಿತು. ಬಿಬಿಎಂಪಿ ಮೇಯರ್ ಚುನಾವಣೆ ಕುರಿತೂ ಸಭೆ ನಡೆಸಲಾಯಿತು.

ಮುಂದುವರೆದ ಅಶೋಕ್ ಮುನಿಸಿ:

ಆದರೆ ಈ ಎಲ್ಲಾ ವಿಷಯಗಳ ಕುರಿತು ನಡೆದ ಸಭೆಗೆ ಕಂದಾಯ ಸಚಿವ ಆರ್. ಅಶೋಕ್ ಗೈರಾಗಿ ತಮ್ಮ ಅಸಮಧಾನ ಶಮನವಾಗಿಲ್ಲ ಎನದನುವ ಸಂದೇಶವನ್ನು ಮತ್ತೊಮ್ಮೆ ಪಕ್ಷದ ನಾಯಕರಿಗೆ ರವಾನಿಸಿದ್ದಾರೆ. ಸ್ವತಃ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುರಿತು ಕಟೀಲ್ ಸೇರಿ ಹಿರಿಯ ನಾಯಕರು ಸಾಕಷ್ಟು ಬಾರಿ ಅಶೋಕ್ ಮನವೊಲಿಕೆ ಕಾರ್ಯ ನಡೆಸಿದ್ದರೂ ಫಲ ನೀಡಿಲ್ಲ, ಪಕ್ಷದ ಚಟುವಟಿಕೆಯಿಂದ ದೂರ ಉಳಿಯುವ ಮೂಲಕ ತಮ್ಮ‌ ಅಸಮಧಾನ ಹೊರಹಾಕುತ್ತಿದ್ದಾರೆ.

ಉಪ ಮುಖ್ಯಮಂತ್ರಿ ಸ್ಥಾನ ಕೈ ತಪ್ಪಿದ್ದು ಒಂದು ಕಡೆಯಾದರೆ ಬೆಂಗಳೂರು ಜಿಲ್ಲಾ ಉಸ್ತುವಾರಿ ನೀಡದೇ ಇರುವುದಕ್ಕೆ ಅಶೋಕ್ ಮತ್ತಷ್ಟ ಬೇಸರಗೊಂಡಿದ್ದಾರೆ ಈ ಹಿನ್ನಲೆಯಲ್ಲಿ ಪಕ್ಷದ ಚಟುವಟಿಕೆಯಿಂದ ಮತ್ತಷ್ಟು ದೂರ ಸರಿಯುತ್ತಿದ್ದಾರೆ ಎನ್ನಲಾಗಿದೆ.

Body:.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.