ETV Bharat / state

ವ್ಯಕ್ತಿಯಿಂದ ಊಹೆಗೂ ಮೀರಿದ ಮದ್ಯ ಖರೀದಿ: ಸೋಷಿಯಲ್​ ಮೀಡಿಯಾದಲ್ಲಿ ಬಿಲ್​​​ ವೈರಲ್​! ​

author img

By

Published : May 4, 2020, 9:18 PM IST

Updated : May 4, 2020, 9:36 PM IST

ವ್ಯಕ್ತಿಯೊಬ್ಬ ಊಹೆಗೂ ಮೀರಿದ ಮದ್ಯ ಖರೀದಿ ಮಾಡಿದ್ದು, ಈ ಖರೀದಿ ಬಿಲ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್​ ಆಗಿದೆ. ಆ ವ್ಯಕ್ತಿ ಎಷ್ಟು ರೂಪಾಯಿ ಮೌಲ್ಯದ ಮದ್ಯ ಖರೀದಿ ಮಾಡಿದ್ದಾನೆ ಗೊತ್ತಾ?

Buy liquor from a person
ಸಾಂದರ್ಭಿಕ ಚಿತ್ರ

ಬೆಂಗಳೂರು: ಮದ್ಯ ಮಾರಾಟಕ್ಕೆ ಅನುಮತಿ ನೀಡುತ್ತಿದ್ದಂತೆಯೇ ನಗರದಲ್ಲಿರುವ ಎಲ್ಲಾ ಬಾರ್ ಅಂಡ್ ಎಂಆರ್​​ಪಿ ಮದ್ಯದಂಗಡಿಗಳ ಮುಂದೆ ಜನ ಸಾಲಿನಲ್ಲಿ ನಿಂತು ಮದ್ಯ ಖರೀದಿಸಿದ್ದಾರೆ.

Buy liquor from a person: Bill Viral on Social Media
ಸೋಷಿಯಲ್ ಮೀಡಿಯಾದಲ್ಲಿ ವೈರಲ್​ ಆದ ಖರೀದಿ ಬಿಲ್ ​

ಈ ನಡುವೆ ಚಿಕ್ಕ‌ ಆಡುಗೋಡಿಯ ಮದ್ಯದಂಗಡಿಯೊಂದಕ್ಕೆ ಬಂದ ವ್ಯಕ್ತಿಯೊಬ್ಬರು 52,841 ರೂಪಾಯಿ ಮೌಲ್ಯದ ಮದ್ಯ ಖರೀದಿ ಮಾಡಿದ್ದಾರೆ. ಮದ್ಯ ಖರೀದಿ ಮಾಡಿದ ಬಿಲ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

17 ವಿವಿಧ ಬ್ರ್ಯಾಂಡ್​​ಗಳ ಮದ್ಯ ಖರೀದಿಸಿದ್ದಾರೆ. ಅಬಕಾರಿ ಅಧಿಕಾರಿಗಳು ಹೇಳುವಂತೆ ಏಕಕಾಲದಲ್ಲಿ ವ್ಯಕ್ತಿಯೋರ್ವ 2.25 ಲೀಟರ್ ಭಾರತೀಯ ಮದ್ಯ ಹಾಗೂ ಆರು ಬಿಯರ್ ಪಡೆಯಲು ಮಾತ್ರ ಅವಕಾಶವಿದೆ. ಹೀಗಿದ್ದರೂ ವ್ಯಕ್ತಿಯೋರ್ವನಿಗೆ ದೊಡ್ಡ ಮಟ್ಟದಲ್ಲಿ ಮದ್ಯ ಖರೀದಿಗೆ ಅವಕಾಶ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ.

Last Updated : May 4, 2020, 9:36 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.