ETV Bharat / state

ಬೆಂಗಳೂರು: ಅನುಮಾನಾಸ್ಪದವಾಗಿ ಉದ್ಯಮಿಯ ಶವ ಪತ್ತೆ, ಪೊಲೀಸರಿಂದ ತನಿಖೆ - ಮಗ ಸೋಮಸುಂದರ್​ ದೂರು

ಮೊಮ್ಮಗನನ್ನು ಬ್ಯಾಡ್ಮಿಂಟನ್​ ತರಗತಿಗೆ ಕರೆದುಕೊಂಡು ಹೋದ ತಾತ ಮತ್ತೆ ಪತ್ತೆಯಾಗಿದ್ದು ಹೆಣವಾಗಿಯೇ. ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿರುವ ಮಗ ಸೋಮಸುಂದರ್​ ಪೊಲೀಸರಿಗೆ ದೂರು ನೀಡಿದ್ದಾರೆ.

South Division DCP P. Krishnakanth
ದಕ್ಷಿಣ ವಿಭಾಗದ ಡಿಸಿಪಿ ಪಿ.ಕೃಷ್ಣಕಾಂತ್
author img

By

Published : Nov 18, 2022, 6:54 AM IST

Updated : Nov 18, 2022, 10:43 AM IST

ಬೆಂಗಳೂರು: ಉದ್ಯಮಿಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ರೋಸ್ ಗಾರ್ಡನ್‌ನಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಬಾಲ ಸುಬ್ರಮಣಿಯನ್ (67) ಎಂದು ಗುರುತಿಸಲಾಗಿದೆ. ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.

ಟ್ರಾನ್ಸ್‌ಪೋರ್ಟ್‌ ಉದ್ಯಮಿಯಾಗಿದ್ದ ಸುಬ್ರಮಣಿಯನ್ ಬುಧವಾರ ಸಂಜೆ ತಮ್ಮ ಮೊಮ್ಮಗನನ್ನು ಬ್ಯಾಡ್ಮಿಂಟನ್ ತರಗತಿಗೆ ಕರೆದುಕೊಂಡು ಹೋಗಿ ಮತ್ತೆ ಸಂಜೆ 4.55 ರ ವೇಳೆಗೆ ತಮ್ಮ ಸೊಸೆ ಧನಲಕ್ಷ್ಮಿ ಅವರಿಗೆ ಕರೆ ಮಾಡಿ, 'ನನಗೆ ಹೊರಗಡೆ ಕೆಲಸವಿದೆ ಸಂಜೆ 7 ಗಂಟೆಗೆ ಬರುತ್ತೇನೆಂದು' ಹೇಳಿದ್ದರಂತೆ. ನಂತರ ಅವರ ಕುಟುಂಬಸ್ಥರು ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿದೆ. ಇದರಿಂದ ಗಾಬರಿಗೊಂಡ ಸುಬ್ರಮಣಿಯನ್ ಅವರ ಪುತ್ರ ಸೋಮಸುಂದರ್​ ತಂದೆ ಕಾಣೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು.

ದಕ್ಷಿಣ ವಿಭಾಗದ ಡಿಸಿಪಿ ಪಿ ಕೃಷ್ಣಕಾಂತ್

ಗುರುವಾರ ಬೆಳಗ್ಗೆ 8 ಗಂಟೆಗೆ ಪುಟ್ಟೇನಹಳ್ಳಿ ಠಾಣಾ ವ್ಯಾಪ್ತಿಯ ರೋಸ್ ಗಾರ್ಡನ್‌ನ 17ನೇ ಡಿ ಕ್ರಾಸ್ ಬಳಿ ಬೆಡ್​ಶೀಟ್ ಸುತ್ತಿರುವ ಸ್ಥಿತಿಯಲ್ಲಿ ಸುಬ್ರಮಣಿಯನ್ ಮೃತದೇಹ ಪತ್ತೆಯಾಗಿದೆ. ಮುಖ ಹಾಗೂ ಕಾಲುಗಳನ್ನು ಮುಚ್ಚಿರುವ ಸ್ಥಿತಿಯಲ್ಲಿ ಶವ ಸಿಕ್ಕಿದ್ದು, ಯಾವುದೇ ರಕ್ತದ ಕಲೆಗಳು ಕಂಡುಬಂದಿಲ್ಲ.

ತಂದೆಯ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ ಸೋಮಸುಂದರ್ ನೀಡಿರುವ ದೂರು ಆಧರಿಸಿ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಪಿ.ಕೃಷ್ಣಕಾಂತ್ ತಿಳಿಸಿದ್ದಾರೆ.

ಇದನ್ನೂ ಓದಿ: ಕಲಬುರಗಿ: ಮತ್ತೋರ್ವ ಯುವಕನ ಕೊಲೆ; ಆಸ್ತಿ ವಿಚಾರಕ್ಕೆ ಕೃತ್ಯ ಶಂಕೆ

Last Updated : Nov 18, 2022, 10:43 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.