ಬೆಂಗಳೂರು: ಸಾರಿಗೆ ನೌಕರರ ಪ್ರತಿಭಟನೆಯಿಂದ ಸೇವೆಯಲ್ಲಿ ಯಾವುದೇ ವ್ಯತ್ಯಯವಾಗಿಲ್ಲ. ವೇಳಾಪಟ್ಟಿಯಂತೆ KSRTC ಬಸ್ಗಳ ಸಂಚಾರ ನಡೆಯುತ್ತಿದೆ ಎಂದು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ತಿಳಿಸಿದೆ.
ಬೆಂಗಳೂರು ಕೇಂದ್ರೀಯ ವಿಭಾಗದಿಂದ 153 ಬಸ್ ಗಳಲ್ಲಿ 144, ರಾಮನಗರ ವಿಭಾಗದಿಂದ 253 ರಲ್ಲಿ 228, ತುಮಕೂರು ವಿಭಾಗದಿಂದ 268ರಲ್ಲಿ 261, ಕೋಲಾರ ವಿಭಾಗದಿಂದ 239ರಲ್ಲಿ 227 ಚಿಕ್ಕಬಳ್ಳಾಪುರ ವಿಭಾಗದಿಂದ 240 ರಲ್ಲಿ 237, ಎಂಸಿಟಿಡಿಯಿಂದ 304ರಲ್ಲಿ 293,ಮೈಸೂರು ವಿಭಾಗದಿಂದ 282 ರಲ್ಲಿ 280,ಮಂಡ್ಯ ವಿಭಾಗದಿಂದ 288 ರಲ್ಲಿ 288, ಚಾಮರಾಜನಗರ ವಿಭಾಗದಿಂದ 280 ರಲ್ಲಿ 265, ಹಾಸನ ವಿಭಾಗದಿಂದ 290 ರಲ್ಲಿ 278, ಚಿಕ್ಕಮಗಳೂರು ವಿಭಾಗದಿಂದ 282 ರಲ್ಲಿ 279, ಮಂಗಳೂರು ವಿಭಾಗದಿಂದ 192 ರಲ್ಲಿ189 ಪುತ್ತೂರು ವಿಭಾಗದಿಂದ 229 ರಲ್ಲಿ 227, ದಾವಣಗೆರೆ ವಿಭಾಗದಿಂದ 194 ರಲ್ಲಿ192, ಚಿತ್ರದುರ್ಗ ವಿಭಾಗದಿಂದ 193 ರಲ್ಲಿ 178, ಶಿವಮೊಗ್ಗ ವಿಭಾಗದಿಂದ 141 ರಲ್ಲಿ138 ಸೇರಿ ಒಟ್ಟು 3828 ರಲ್ಲಿ 3704 ಬಸ್ಗಳ ಸಂಚಾರ ಆರಂಭಗೊಂಡಿದೆ ಎಂದು ಕೆಎಸ್ಆರ್‌ಟಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನೌಕರರ ಸಂಘಟನೆ ಪ್ರತಿಭಟನೆಯಿಂದ KSRTC ಸೇವೆಯಲ್ಲಿ ವ್ಯತ್ಯವಾಗದಂತೆ ಕ್ರಮ ಕೈಗೊಳ್ಳಲಾಗಿದ್ದು, ಪೂರ್ವ ನಿಗದಿಯಂತೆ ಶೇ. 96.8 ರಷ್ಟು ಬಸ್ಗಳು ಸಂಚರಿಸುತ್ತಿವೆ. ತಾಂತ್ರಿಕ ಕಾರಣದಿಂದ ಕೆಲ ಬಸ್ಗಳ ಸಂಚಾರದಲ್ಲಿ ಸಮಸ್ಯೆಯಾಗಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.