ETV Bharat / state

2020-21ನೇ ಸಾಲಿನ ಬಜೆಟ್ ಘೋಷಣೆಗಳ ಪೈಕಿ ಈವರೆಗೆ ಅನುಷ್ಠಾನವಾಗಿರುವುದು ಇಷ್ಟೇ..

ಸಿಎಂ ಯಡಿಯೂರಪ್ಪ 2020-21ನೇ ಸಾಲಿನಲ್ಲೂ ಆರ್ಥಿಕ ಸಂಕಷ್ಟದ ಮಧ್ಯೆಯೇ ಬಜೆಟ್ ಮಂಡನೆ ಮಾಡಿದ್ದರು. ಹಾಗಿದ್ದರೂ ಸಿಎಂ ಹಲವು ಯೋಜನೆಗಳನ್ನು ಘೋಷಿಸಿದ್ದರು‌.‌ ಇನ್ನೇನು 2020-21ನೇ ಸಾಲಿನ ಬಜೆಟ್ ವರ್ಷ ಅಂತ್ಯವಾಗಲಿದ್ದು, ಬಜೆಟ್ ಘೋಷಣೆಗಳ ಅನುಷ್ಠಾನ ಮಾತ್ರ ನಿರೀಕ್ಷಿತ ಪ್ರಮಾಣದಲ್ಲಿ ಆಗಿಲ್ಲ ಎಂಬ ದೂರನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರೂ ಅಧಿವೇಶನದಲ್ಲಿ ಮಾಡಿದ್ದರು..

year-2020-21-implementation-news
2020-21 ಸಾಲಿನ ಬಜೆಟ್ ಘೋಷಣೆ
author img

By

Published : Feb 13, 2021, 4:40 PM IST

ಬೆಂಗಳೂರು : ಕೋವಿಡ್ ಮಹಾಮಾರಿ ಮಧ್ಯೆ 2020-21ನೇ ಸಾಲಿನ ಬಜೆಟ್ ವರ್ಷ ಬಹುತೇಕ ಕಳೆದು ಹೋಗಿದೆ. ಆರ್ಥಿಕ ಸಂಕಷ್ಟದ ನಡುವೆ ಬಜೆಟ್ ಅನುಷ್ಠಾನದ ಸವಾಲು ಯಡಿಯೂರಪ್ಪ ಸರ್ಕಾರದ ಮೇಲಿತ್ತು.

ಮುಂದಿನ ಬಜೆಟ್ ಬಗ್ಗೆ ಸಿಎಂ ಈಗಾಗಲೇ ಪೂರ್ವ ತಯಾರಿ ಪ್ರಾರಂಭಿಸಿದ್ದಾರೆ. ಈ ಮಧ್ಯೆ 2020-21ನೇ ಸಾಲಿನ ಬಜೆಟ್ ಅನುಷ್ಠಾನದ ಪ್ರಗತಿ ಹೇಗಿದೆ ಎಂಬುದರ ಸಮಗ್ರ ವರದಿ ಇಲ್ಲಿದೆ. ಸಿಎಂ ಯಡಿಯೂರಪ್ಪ 2021-22ನೇ ಸಾಲಿನ ಬಜೆಟ್ ಪೂರ್ವ ತಯಾರಿ ಪ್ರಾರಂಭಿಸಿದ್ದಾರೆ.

ಕೋವಿಡ್ ಆರ್ಥಿಕ ಸಂಕಷ್ಟದ ಮಧ್ಯೆ ಬಜೆಟ್ ಮಂಡನೆಯ ಅನಿವಾರ್ಯ ಸರ್ಕಾರದ ಮೇಲಿದೆ. ಇತ್ತ ಯಡಿಯೂರಪ್ಪ ಅಧಿಕಾರ ಸ್ವೀಕರಿಸಿದ ಬಳಿಕ ಪೂರ್ಣ ಪ್ರಮಾಣದಲ್ಲಿ 2020-21ನೇ ಸಾಲಿನ ಬಜೆಟ್ ಮಂಡಿಸಿದ್ದರು.

2020-21ನೇ ಸಾಲಿನಲ್ಲಿ ಸಿಎಂ ಯಡಿಯೂರಪ್ಪ 2.37 ಲಕ್ಷ ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿದ್ದರು. ಬಜೆಟ್ ಮಂಡನೆಯಾದ ಬೆನ್ನಲ್ಲೇ ಕೋವಿಡ್ ಮಹಾಮಾರಿ ವಕ್ಕರಿಸಿತ್ತು.‌ ಲಾಕ್‌ಡೌನ್, ಕೋವಿಡ್ ಅಟ್ಟಹಾಸ, ಆರ್ಥಿಕ ಸಂಕಷ್ಟದ ಮಧ್ಯೆ ಬಜೆಟ್ ಕಾರ್ಯಕ್ರಮಗಳ ಅನುಷ್ಠಾನದ ಸವಾಲು ಸರ್ಕಾರದ ಮೇಲಿತ್ತು.

ಬಜೆಟ್ ಘೋಷಣೆಗಳ ಅನುಷ್ಠಾನ ಪ್ರಗತಿ ಹೇಗಿದೆ?: ಸಿಎಂ ಯಡಿಯೂರಪ್ಪ 2020-21ನೇ ಸಾಲಿನಲ್ಲೂ ಆರ್ಥಿಕ ಸಂಕಷ್ಟದ ಮಧ್ಯೆಯೇ ಬಜೆಟ್ ಮಂಡನೆ ಮಾಡಿದ್ದರು. ಹಾಗಿದ್ದರೂ ಸಿಎಂ ಹಲವು ಯೋಜನೆಗಳನ್ನು ಘೋಷಿಸಿದ್ದರು‌.‌ ಇನ್ನೇನು 2020-21ನೇ ಸಾಲಿನ ಬಜೆಟ್ ವರ್ಷ ಅಂತ್ಯವಾಗಲಿದ್ದು, ಬಜೆಟ್ ಘೋಷಣೆಗಳ ಅನುಷ್ಠಾನ ಮಾತ್ರ ನಿರೀಕ್ಷಿತ ಪ್ರಮಾಣದಲ್ಲಿ ಆಗಿಲ್ಲ ಎಂಬ ದೂರನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರೂ ಅಧಿವೇಶನದಲ್ಲಿ ಮಾಡಿದ್ದರು.

ಬಜೆಟ್ ಘೋಷಣೆಗಳು, ಅದರ ಅನುಷ್ಠಾನದ ಪ್ರಗತಿ ನೋಡಿದರೆ ಬಜೆಟ್ ಅನುಷ್ಠಾನ ನಿರೀಕ್ಷಿತ ಪ್ರಮಾಣದಲ್ಲಿ ಮಾಡಲು ಸಾಧ್ಯವಾಗಿಲ್ಲ ಎಂಬುದು ಗೋಚರವಾಗುತ್ತದೆ. 2020-21ನೇ ಸಾಲಿನ ಆಯವ್ಯಯದಲ್ಲಿ ಒಟ್ಟು 223 ಘೋಷಣೆಗಳನ್ನು ಸಿಎಂ ಯಡಿಯೂರಪ್ಪ ಮಾಡಿದ್ದರು. ಈ ಪೈಕಿ 145 ಹೊಸ ಘೋಷಣೆಗಳಾಗಿದ್ದವು. 6 ಮಾರ್ಪಡಿತ ಘೋಷಣೆಗಳಾಗಿದ್ದವು. 72 ಮುಂದುವರಿದ ಘೋಷಣೆಗಳಾಗಿದ್ದವು ಎಂಬುದನ್ನು ಯೋಜನೆ ಹಾಗೂ ಸಾಂಖ್ಯಿಕ ಇಲಾಖೆ ಮಾಹಿತಿ ನೀಡಿದೆ.

ಇದರಲ್ಲಿ ಯೋಜನಾ ಇಲಾಖೆಯಲ್ಲಿ ಸ್ವೀಕೃತವಾದ ಕಾರ್ಯಕ್ರಮಗಳು 78. ಇನ್ನು, ಆರ್ಥಿಕ ಇಲಾಖೆಯಲ್ಲಿ 80 ಘೋಷಣೆಗಳು ಸ್ವೀಕೃತಗೊಂಡು, ಸಹಮತ ಪಡೆದುಕೊಂಡಿವೆ. ಆದರೆ, ಆಯವ್ಯಯ ಘೋಷಣೆಗಳ ಪೈಕಿ ಡಿಸೆಂಬರ್ ಅಂತ್ಯದವರೆಗೆ ಸರ್ಕಾರಿ ಆದೇಶ ಹೊರಡಿಸಿರುವುದು 131 ಕಾರ್ಯಕ್ರಮಗಳಿಗೆ ಮಾತ್ರ. ಆರ್ಥಿಕ ಸಂಕಷ್ಟ ಹಿನ್ನೆಲೆ ಒಟ್ಟು 49 ಕಾರ್ಯಕ್ರಮಗಳನ್ನು ಕೈ ಬಿಡಲಾಗಿದೆ.

43 ಆಯವ್ಯಯ ಘೋಷಣೆಗಳ ಸಂಬಂಧ ಸರ್ಕಾರಿ ಆದೇಶ ಇನ್ನೂ ಹೊರ ಬಿದ್ದಿಲ್ಲ ಎಂದು ಯೋಜನಾ ಹಾಗೂ ಸಾಂಖ್ಯಿಕ ಇಲಾಖೆ ಅಂಕಿ-ಅಂಶದಲ್ಲಿ ಬಯಲಾಗಿದೆ. ಅಂದರೆ 2020-21ನೇ ಸಾಲಿನ ಆಯವ್ಯಯದಲ್ಲಿ ಮಾಡಲಾದ 223 ಘೋಷಣೆಗಳ ಪೈಕಿ ಅನುಷ್ಠಾನ ಸಂಬಂಧ ಸರ್ಕಾರಿ ಆದೇಶ ಹೊರಡಿಸಲಾಗಿರುವುದು ಕೇವಲ 131.

2020-21 ಬಜೆಟ್ ನ ಆರ್ಥಿಕ ಪ್ರಗತಿ ಹೇಗಿದೆ?: 2020-21ನೇ ಸಾಲಿನಲ್ಲಿ ಒಟ್ಟು 209672.34 ಕೋಟಿ ರೂ. ಅನುದಾನ ಹಂಚಿಕೆಯಾಗಿದೆ. ಡಿಸೆಂಬರ್ ಅಂತ್ಯದ ವೇಳೆಗೆ ಸುಮಾರು 130774.57 ಕೋಟಿ ರೂ. ಆರ್ಥಿಕ ಗುರಿ ಹೊಂದಲಾಗಿತ್ತು. ಈ ಪೈಕಿ 112902.06 ಕೋಟಿ ರೂ. ಆರ್ಥಿಕ ಪ್ರಗತಿ ಸಾಧಿಸಲಾಗಿದೆ. ಅಂದರೆ ಒಟ್ಟು ಅನುದಾನದ ಪ್ರತಿಯಾಗಿ ಕೇವಲ 53.85% ವೆಚ್ಚ ಮಾಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.