ETV Bharat / state

'ಖಾಲಿ ಡಬ್ಬಿ, ಜನರ ಕಿವಿ ಮೇಲೆ ಹೂ, ಚುನಾವಣಾ ಬಜೆಟ್‌': ಕಾಂಗ್ರೆಸ್, ಜೆಡಿಎಸ್​ ಟೀಕೆ - ಕಾಂಗ್ರೆಸ್ ಹಾಗೂ ಜೆಡಿಎಸ್ ಬಜೆಟ್ ವಿರುದ್ಧ ವಾಗ್ದಾಳಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿದ ಬಜೆಟ್ ಕುರಿತು ಪ್ರತಿಪಕ್ಷಗಳು ಟೀಕಾಸ್ತ್ರ ಪ್ರಯೋಗಿಸಿವೆೆ.

U T  Khader
ಯು.ಟಿ. ಖಾದರ್
author img

By

Published : Feb 17, 2023, 2:54 PM IST

Updated : Feb 17, 2023, 3:58 PM IST

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದು ಮಂಡಿಸಿದ ಬಜೆಟ್ ಟೀಕಿಸಿರುವ ಪ್ರತಿಪಕ್ಷ ಕಾಂಗ್ರೆಸ್‌, ''ಸರ್ಕಾರ ಕಿವಿ ಮೇಲೆ ಹೂ ಇಟ್ಟಿದೆ. ಜನರಿಗೆ ಚಿಪ್ಪು ಸಿಕ್ಕಿದೆ'' ಎಂದರೆ, ''ಖಾಲಿ ಡಬ್ಬಾ ಬಜೆಟ್'' ಎಂದು ಜೆಡಿಎಸ್ ವ್ಯಂಗ್ಯವಾಡಿದೆ. ಕಾಂಗ್ರೆಸ್ ನಾಯಕ ಯು.ಟಿ.ಖಾದರ್ ಪ್ರತಿಕ್ರಿಯಿಸಿ, ''ಜಾತ್ರೆಯಲ್ಲಿ ಜನಾಕರ್ಷಣೆಗೆ ಮ್ಯೂಸಿಕ್ ಬ್ಯಾಂಡ್ ಬಾರಿಸಿದ್ದಾರೆ. ಶಬ್ದದಿಂದ ಯಾವುದೂ ಪ್ರಯೋಜನ ಇಲ್ಲ" ಎಂದರು.

  • ಕೇಂದ್ರದಿಂದ ರಾಜ್ಯದವರೆಗೂ ಬಿಜೆಪಿ ಮೊದಲಿಂದಲೂ ಜನರ ಕಿವಿ ಮೇಲೆ ಹೂವಿಡುತ್ತಲೇ ಬಂದಿದೆ.

    ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕದ ಕಿವಿ ಮೇಲೆ ಹೂವಿಟ್ಟರು.
    ಈಗ ರಾಜ್ಯ ಬಜೆಟ್‌ನಲ್ಲಿ ಕನ್ನಡಿಗರ ಕಿವಿ ಮೇಲೆ ಹೂವಿಡುತ್ತಿದ್ದಾರೆ.

    ಪ್ರಣಾಳಿಕೆಯಲ್ಲಿನ 90% ರಷ್ಟು ಭರವಸೆ ಈಡೇರಿಸದ ಬಿಜೆಪಿ ಬಜೆಟ್‌ನಲ್ಲಿ ಹೇಳಿದ್ದು ಮಾಡುವುದೇ!#KiviMeleHoova pic.twitter.com/aWyELn4xZL

    — Karnataka Congress (@INCKarnataka) February 17, 2023 " class="align-text-top noRightClick twitterSection" data=" ">

ಕರಾವಳಿಗೆ ದ್ರೋಹ: ''ಎರಡು ವರ್ಷದಲ್ಲಿ ಘೋಷಣೆ ಮಾಡಿದ್ದನ್ನೇ ಮತ್ತೆ ಘೋಷಿಸಿದ್ದಾರೆ. ಯಾವುದೇ ಯೋಜನೆ ಇಲ್ಲದ ನಿರಾಶಾದಾಯಕ ಬಜೆಟ್. ಆಲೋಚನೆ ಇಲ್ಲದ ಸರ್ಕಾರ ಅಂತ ಜನ ತೀರ್ಮಾನಿಸುತ್ತಾರೆ. ಕರಾವಳಿ ಜಿಲ್ಲೆಗೆ, ಮೀನುಗಾರರಿಗೆ ಸಂಪೂರ್ಣ ದ್ರೋಹ ಬಗೆದಿದ್ದಾರೆ'' ಎಂದು ಖಾದರ್ ಹೇಳಿದ್ದಾರೆ.

  • ಹಿಂದಿನ ಬಜೆಟ್‌‌ನ ಪ್ರಗತಿ 50% ಕೂಡ ದಾಟಿಲ್ಲ.
    ಇಂದಿನ ಬಜೆಟ್ ಟೀಕಾಫ್ ಆಗುವುದೇ ಇಲ್ಲ.

    ಚುನಾವಣೆಗಾಗಿ ಬಣ್ಣ ಬಣ್ಣದ ಘೋಷಣೆ ಮಾಡಿ ರಾಜ್ಯದ ಜನರ ಕಿವಿ ಮೇಲೆ ಹೂವಿಡುವ ಪ್ರಯತ್ನದಲ್ಲಿದ್ದಾರೆ ಅಷ್ಟೇ.

    ಯಾವುದೇ ಯೋಜನೆ ಬಗ್ಗೆ ಕೇಳಿದರೂ ಅನುದಾನವಿಲ್ಲ, ಹಣವಿಲ್ಲ ಎನ್ನುವವರ ಬಜೆಟ್‌ನಿಂದ ನಿರೀಕ್ಷೆ ಇಟ್ಟುಕೊಳ್ಳುವುದು ಮೂರ್ಖತನ.#KiviMeleHoova

ಕಿವಿ ಮೇಲೆ ಹೂ: ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್ ಮಾತನಾಡಿ, ''ಈ ಬಜೆಟ್ ಬಗ್ಗೆ ಈಗಾಗಲೇ ಹೇಳಿದ್ದಾರೆ. ಕಿವಿ ಮೇಲೆ ಹೂ ಇಡುವ ಬಜೆಟ್. ಇದು ಚುನಾವಣಾ ಬಜೆಟ್ ಆಗಿದೆ. ಕಳೆದ‌ ಬಾರಿ ಘೋಷಿಸಿದ್ದನ್ನೇ ಇಂಪ್ಲಿಮೆಂಟ್ ಮಾಡಿಲ್ಲ. ಇನ್ನು ಈ ಬಜೆಟ್ ಹೇಗೆ ಜಾರಿಗೆ ಬರಲಿದೆ'' ಎಂದು ಪ್ರಶ್ನಿಸಿದರು.

ಖಾಲಿ ಡಬ್ಬಿ ಇದ್ದಂತೆ: ಜೆಡಿಎಸ್ ಉಪ ನಾಯಕ ಬಂಡೆಪ್ಪ ಖಾಶೆಂಪುರ್ ಮಾತನಾಡಿ, ''ಡಬಲ್ ಇಂಜಿನ್ ಸರ್ಕಾರದ ಬಜೆಟ್ ಬಗ್ಗೆ ಕುತೂಹಲ ಇತ್ತು. ಆದರೆ, ರೈತರ, ಬಡವರ ಪರ ಇಲ್ಲ, ನಿರ್ದಿಷ್ಟ ಯೋಜನೆಯೂ ಇಲ್ಲ. ಇದು ಖಾಲಿ ಡಬ್ಬಿ'' ಎಂದರು.

  • ಮಹಿಳೆಯರಿಗೆ ಸ್ತ್ರೀ ಉನ್ನತಿ ನಿಧಿ ಸ್ಥಾಪಿಸುತ್ತೇವೆ, ಸ್ಮಾರ್ಟ್ ಫೋನ್ ನೀಡುತ್ತೇವೆ ಎಂದಿತ್ತು ಬಿಜೆಪಿ.
    ಅದ್ಯಾವ ಭರವಸೆಗಳೂ ಈಡೇರಿಲ್ಲ.

    ಹೀಗಿರುವಾಗ @BSBommai ಅವರು ನಾಮಕಾವಸ್ಥೆಗೆ ಓದುತ್ತಿರುವ ಬಜೆಟ್‌ನಲ್ಲಿ ನಿರೀಕ್ಷೆ ಇಟ್ಟುಕೊಳ್ಳುವಂತಹ ಮೂರ್ಖತನ ಮತ್ತೊಂದಿಲ್ಲ.#KiviMeleHoova pic.twitter.com/uFWyg94udn

ಇದನ್ನೂ ಓದಿ: ಬಜೆಟ್​ನಲ್ಲಿ ಐಐಟಿ ಮಾದರಿಯಲ್ಲೇ ಕೆಐಟಿಗಳನ್ನು ಉನ್ನತೀಕರಿಸಲು ವಿಶೇಷ ಒತ್ತು..

Last Updated : Feb 17, 2023, 3:58 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.