ಬೆಂಗಳೂರು: ಮಾಜಿ ಸಿಎಂ ಎಸ್.ಎಂ.ಕೃಷ್ಣ ಅಳಿಯ ಸಿದ್ದಾರ್ಥ ನಾಪತ್ತೆ ಹಿನ್ನೆಲೆ ಡಿ.ಕೆ.ಶಿವಕುಮಾರ್, ಬಿ.ಎಲ್.ಶಂಕರ್, ಸಿಎಂ ಯಡಿಯೂರಪ್ಪ ಸೇರಿದಂತೆ ರಾಜಕೀಯ ಮುಖಂಡರು, ಸಂಬಂಧಿಕರು ಮತ್ತು ಸ್ನೇಹಿತರು ಎಸ್.ಎಂ.ಕೃಷ್ಣ ನಿವಾಸಕ್ಕೆ ದೌಡಾಯಿಸುತ್ತಿದ್ದಾರೆ.
ಸದಾಶಿವನಗರದ ಎಸ್ಎಂಕೆ ನಿವಾಸಕ್ಕೆ ಸಿಎಂ ಬಿಎಸ್ವೈ ಭೇಟಿ ನೀಡಿದರು. ಸಿದ್ಧಾರ್ಥ ನಾಪತ್ತೆಯಾದ ಕೂಡಲೇ ನಿನ್ನೆಯೇ ಮಾಹಿತಿ ಪಡೆದಿದ್ದೇನೆ. ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಕ್ಷಣ ಕ್ಷಣದ ಮಾಹಿತಿ ನೀಡುವಂತೆ ಸೂಚಿಸಿದ್ದೇನೆ. ಸಿದ್ದಾರ್ಥನ ಪತ್ತೆ ಮಾಡುವಂತೆ ಮಂಗಳೂರು ಕಮಿಷನರ್ ಹಾಗೂ ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಸಿದ್ದಾರ್ಥ ಕುಟುಂಬದವರಿಗೆ ಯಡಿಯೂರಪ್ಪ ಧೈರ್ಯ ತುಂಬಿದರು.
ಎಸ್ಎಂಕೆ ನಿವಾಸಕ್ಕೆ ಗಣ್ಯರ ಭೇಟಿ ಬಿಗಿ ಪೊಲೀಸ್ ಬಂದೋಬಸ್ತ್ :
ಎಸ್.ಎಂ.ಕೃಷ್ಣ ನಿವಾಸಕ್ಕೆ ರಾಜಕೀಯ ನಾಯಕರು, ಸ್ನೇಹಿತರು, ಸಂಬಂಧಿಕರು ಆಗಮಿಸುತ್ತಿರುವ ಕಾರಣ ಮನೆಯ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಡಿಜಿಪಿ ನೀಲಮಣಿ ಎನ್. ರಾಜು ಕೂಡ ಕ್ಷಣ ಕ್ಷಣದ ಮಾಹಿತಿ ಕಲೆಹಾಕುತ್ತಿದ್ದಾರೆ. ರಾಜ್ಯ ಗುಪ್ತಚರ ಇಲಾಖೆ ಐಜಿಪಿ ದಯಾನಂದ ಸಹ ಎಸ್ಎಂಕೆ ನಿವಾಸಕ್ಕೆ ಭೇಟಿ ನೀಡಿದರು.
ಶಾಸಕ ಅರಗ ಜ್ಞಾನೇಂದ್ರ ಭೇಟಿ:
ಸಿದ್ಧಾರ್ಥ ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಒಂದು ಕಿ.ಮೀ. ಉದ್ದದ ಮಂಗಳೂರಿನ ಉಳ್ಳಾಲ ಸಮೀಪದ ಬ್ರಿಡ್ಜ್ ಬಳಿ ಕಾಣೆಯಾಗಿದ್ದಾರೆ. ಮೈಸೂರಿನಲ್ಲಿ ಸಿದ್ದಾರ್ಥ ಅವರ ತಂದೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ಚಿಕಿತ್ಸೆ ಮುಂದುವರಿದಿದೆ ಎಂದು ಶಾಸಕ ಅರಗ ಜ್ಞಾನೇಂದ್ರ ತಿಳಿಸಿದರು.
Intro:Body:
[7/30, 8:27 AM] bhavya banglore: ಕಾಫಿ ಡೇ ಗ್ಲೋಬಲ್ ಲಿಮಿಟೆಡ್ ಎಂಡಿ ಸಿದ್ದಾರ್ಥ್ ನಾಪತ್ತೆ ಪ್ರಕರಣ..!
ಸಿದ್ದಾರ್ಥ, ಮಾಜಿ ವಿದೇಶಾಂಗ ಸಚಿವ ಎಸ್ ಎಂ ಕೃಷ್ಣ ಅಳಿಯ..!
ಸಿದ್ದಾರ್ಥ್ ನಾಪತ್ತೆ ಬೆನ್ನಲ್ಲೆ ಎಸ್ ಎಂ ಕೃಷ್ಣ ಮನೆಗೆ ಆಗಮಿಸಿದ ಜನ ಪ್ರತಿನಿಧಿಗಳು
ಡಿಕೆಶಿ ಮತ್ತು ಬಿಎಲ್ ಶಂಕರ್ ಸೇರಿದಂತೆ ನಾಯಕರುಗಳ ಭೇಟಿ
ನಾಪತ್ತೆ ಬಹಿರಂಗವಾಗುತ್ತಿದ್ದಂತೆ ಎಸ್ ಎಂ ಕೃಷ್ಣ ಮನೆಗೆ ಆಗಮಿಸುತ್ತಿರುವ ಸಂಬಂಧಿಕರು ಮತ್ತು ಸ್ನೇಹಿತರು
ಮುಂಜಾಗ್ರತಾ ಕ್ರಮವಾಗಿ ಎಸ್ ಎಂ ಕೃಷ್ಣ ಮನೆ ಮುಂದೆ ಪೊಲೀಸ್ ಭದ್ರತೆ
[7/30, 8:27 AM] bhavya banglore: *ಸಿಎಂ ಯಡಿಯೂರಪ್ಪ ಸದಾಶಿವನಗರದ ಎಸ್ ಎಂ ಕೃಷ್ಣ ನಿವಾಸಕ್ಕೆ ಆಗಮನ*
[7/30, 8:27 AM] bhavya banglore: ಎಸ್ ಎಂ ಕೃಷ್ಣ ನಿವಾಸದಲ್ಲಿ ಬಿ.ಎಲ್ ಶಂಕರ್ ಹೇಳಿಕೆ
ಕಾಫಿ ಡೇ ಉದ್ಯಮದ ಮಾಲೀಕರು ಸಿದ್ದಾರ್ಥ ಪ್ರಯಾಣ ಮಾಡುವ ವೇಳೆ ನಾಪತ್ತೆಯಾಗಿದ್ದಾರೆ
ಮಂಗಳೂರಿನ ಉಲ್ಲಾಳ ಸಮೀಪದಲ್ಲಿ ಸಂಜೆ 6 ಗಂಟೆಯಿಂದ ಕಾಣುತ್ತಿಲ್ಲ
ನಿನ್ನೆ ಸಂಜೆ ಆರು ಗಂಟೆಯಿಂದ ಕಾಣುತ್ತಿಲ್ಲ
ಉಲ್ಲಾಳದ ಶಾಸಕರು ಯು ಟಿ ಖಾದರ್, ಸ್ಥಳೀಯ ಪೊಲೀಸರು ಸಹ ಹುಡಕಾಟ ನಡೆಸುತ್ತಿದ್ದಾರೆ
ಸಿದಾರ್ಥ ನಮ್ಮ ಊರಿನವರು ದೊಡ್ಡ ಉದ್ಯಮಿ
ಅವ್ರ ಕುಟುಂಬ ಆತಂಕದಲ್ಲಿ ಇದೆ. ಹೀಗಾಗಿ ನಾವು ನೋಡೋಕೆ ಬಂದಿದ್ದೇನೆ
ದೊಡ್ಡ ಉದ್ಯಮಿ ಯಾವುದೇ ಸಮಸ್ಯೆ ಬಂದರು ಎದುರಿಸುತ್ತಿದ್ರು
ನಾಪತ್ತೆಗೂ ಮೊದಲು ಯಾರನ್ನ ಭೇಟಿ ಮಾಡಿದ್ರು ಎಂಬುದು ನಾಳೆ ಅವ್ರ ಕಚೇರಿ ತೆರೆದ ನಂತ್ರ ಮಾಹಿತಿ ಸಿಗುತ್ತೆ
ಪ್ರಕರಣ ತನಿಖೆ ಹಂತದಲ್ಲಿದೆ ತನಿಖೆ ಬಳಿಕ ಎಲ್ಲವೂ ತಿಳಿಯಲಿದೆ
ಸಿದ್ದಾರ್ಥ ಸುರಕ್ಷಿತವಾಗಿ ವಾಪಾಸ್ಸು ಬರಲಿ ಎಂಬುದು ನಮ್ಮ ಹಾರೈಕೆ
[7/30, 8:27 AM] bhavya banglore: ಸದಾಶಿವನಗರದ ಎಸ್ಎಂಕೆ ನಿವಾಸಕ್ಕೆ ಸಿಎಂ ಬಿಎಸ್ ವೈ ಭೇಟಿ
ಸಿದ್ದಾರ್ಥ ಕುಟುಂಬದವರನ್ನು ಭೇಟಿ ಮಾಡಿ ಧೈರ್ಯ ತುಂಬುತ್ತಿರುವ ಬಿಎಸ್ ವೈ
ಸಿದ್ದಾರ್ಥ ನಾಪತ್ತೆಯಾದ ಕೂಡಲೇ ನೆನ್ನೆ ಮಾಹಿತಿ ಪಡೆದಿದ್ದ ಸಿಎಂ ಬಿಎಸ್ ವೈ
ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಕ್ಷಣ ಕ್ಷಣದ ಮಾಹಿತಿ ನೀಡುವಂತೆ ಸೂಚನೆ
ಸಿದ್ದಾರ್ಥ ಪತ್ತೆಮಾಡುವಂತೆ ಮಂಗಳೂರು ಕಮಿಷನರ್ ಹಾಗೂ ಜಿಲ್ಲಾಧಿಕಾರಿಗೆ ಸೂಚನೆ
ಬೆಳಗ್ಗೆಯಾದ್ರು ಸಿದ್ದಾರ್ಥ ಪತ್ತೆಯಾಗದ ಹಿನ್ನಲೆ ಖುದ್ದು ಎಸ್ ಎಂಕೆ ನಿವಾಸಕ್ಕೆ ಸಿಎಂ ಭೇಟಿ
ಈ ಹಿನ್ನಲೆ ಇಂದು ಬೆಳಗ್ಗೆ ಎಸ್ ಎಂಕೆ ನಿವಾಸಕ್ಕೆ ಭೇಟಿ ನೀಡಿ ಸಂಬಂಧಿಕರಿಗೆ ಧೈರ್ಯ ಹೇಳ್ತಿರುವ ಬಿಎಸ್ ವೈ
[7/30, 8:27 AM] bhavya banglore: ಸದಾಶಿವನಗರದ ಎಸ್ಎಂಕೆ ನಿವಾಸದ ಬಳಿ
ಶಾಸಕ ಅರಗ ಜ್ಙಾನೇಂದ್ರ ಹೇಳಿಕೆ
ನೆನ್ನೆ ಸಿದ್ದಾರ್ಥ ನಿಗೂಢವಾಗಿ ನಾಪತ್ತೆಯಾಗಿದ್ದಾರೆ
ಒಂದು ಕಿ.ಮೀ. ಉದ್ದದ ಮಂಗಳೂರಿನ ಉಳ್ಳಾಲ ಸಮೀಪದ ಬ್ರಿಡ್ಜ್ ಅದು
ಮೈಸೂರಿನ ಆಸ್ಪತ್ರೆಯಲ್ಲಿ ಸಿದ್ದಾರ್ಥ ಅವ್ರ ತಂದೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ
ಅವ್ರಿಗೆ ಚಿಕಿತ್ಸೆ ಮುಂದುವರಿದಿದೆ, ಆಗಾಗ ಸಿದ್ದಾರ್ಥ ಮೈಸೂರಿಗೆ ಭೇಟಿ ನೀಡಿ ತಂದೆ ಆರೋಗ್ಯ ವಿಚಾರಿಸ್ತಿದ್ರು
ನೆನ್ನೆ ಮಾಹಿತಿ ಪಡೆದ ಸಿಎಂ ಬಿಎಸ್ ವೈ ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ
ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಬಳಸಿ ಕೂಡಲೇ ಪತ್ತೆ ಹಚ್ಚುವಂತೆ ತಿಳಿಸಿದ್ದಾರೆ
ಡಿಜಿಪಿ ನೀಲಮಣಿ ಎನ್ ರಾಜು ಕೂಡ ಕ್ಷಣ ಕ್ಷಣದ ಮಾಹಿತಿ ಪಡೆಯುತ್ತಿದ್ದಾರೆ
ಸಿದ್ದಾರ್ಥ್ ನಿಗೂಢವಾಗಿ ನಾಪತ್ತೆಯಾಗಿರುವುದು ನಮ್ಮೆಲರಿಗೂ ಆತಂಕದ ವಿಚಾರ
ಇಂದು ಬೆಳಗ್ಗೆ ಸಿಎಂ ಬಿಎಸ್ ಯಡಿಯೂರಪ್ಪ ಎಸ್ ಎಂಕೆ ನಿವಾಸಕ್ಕೆ ಭೇಟಿ ನೀಡಿ ಧೈರ್ಯ ಹೇಳಿದ್ದಾರೆ
[7/30, 8:27 AM] bhavya banglore: ರಾಜ್ಯ ಗುಪ್ತಚರ ಇಲಾಖೆ ಐಜಿಪಿ ದಯಾನಂದ ಎಸ್ ಎಂಕೆ ನಿವಾಸಕ್ಕೆ ಭೇಟಿ
[7/30, 8:27 AM] bhavya banglore: ಎಸ್ ಎಂ ಕೆ ನಿವಾಸದಿಂದ ಹೊರಟ ಸಿಎಂ ಬಿಎಸ್ ವೈ
[7/30, 8:27 AM] bhavya banglore: ಅರಗ ಜ್ಙಾನೇಂದ್ರ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ
Conclusion: