ETV Bharat / state

ಅನರ್ಹ ಶಾಸಕರಿಗಾಗಿ ಪರಿಷತ್ ಹುದ್ದೆ ತ್ಯಾಗಕ್ಕೆ ಸಿದ್ಧರಾಗಲು ಹೇಳಿದ್ರಾ ಬಿಎಸ್‌ವೈ? - ಕರ್ನಾಟಕ ಉಪಚುನಾವಣೆ ಸುದ್ದಿ

ಜೆಡಿಎಸ್​, ಕಾಂಗ್ರೆಸ್​ ಪಕ್ಷಗಳಿಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿರುವ ಅನರ್ಹ ಶಾಸಕರಿಗೆ ವಿಧಾನ ಪರಿಷತ್ ಸ್ಥಾನ ನೀಡಿ, ಸಚಿವರನ್ನಾಗಿಸಲು ಬಿಎಸ್​ವೈ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ಸಿಎಂ ಬಿ.ಎಸ್.ಯಡಿಯೂರಪ್ಪ
author img

By

Published : Nov 17, 2019, 6:47 PM IST

ಬೆಂಗಳೂರು: ವಿಧಾನ ಪರಿಷತ್ ಸ್ಥಾನದ ತ್ಯಾಗಕ್ಕೆ ಸಿದ್ಧವಾಗಿ ಎಂದು ತಮ್ಮ ಆಪ್ತ ಎಂಎಲ್​ಸಿಗಳಿಗೆ‌ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆ ನೀಡಿದ್ದಾರೆ ಎಂಬ ಮಾಹಿತಿ ದೊರೆತಿದೆ. ಹಾಗಾಗಿ ಅನರ್ಹ ಶಾಸಕರಿಗಾಗಿ ವಿಧಾನ ಪರಿಷತ್ ಸ್ಥಾನವನ್ನು ತೊರೆಯುವ ಅನಿವಾರ್ಯತೆಗೆ ಬಿಜೆಪಿ ಪರಿಷತ್ ಸದಸ್ಯರಿಗೆ ಎದುರಾಗಿದೆ.

BSY prepares mlc seat for ineligible legislators..?
ಸಿಎಂ ಬಿ.ಎಸ್.ಯಡಿಯೂರಪ್ಪ

ಹಾಲಿ ವಿಧಾನ ಪರಿಷತ್ ಸದಸ್ಯರಿಂದ ರಾಜೀನಾಮೆ ಕೊಡಿಸಬೇಕಾದ ಅನಿವಾರ್ಯತೆಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಸಿಲುಕಿದ್ದಾರೆ. ಈಗಾಗಲೇ ‌ರಾಣೆಬೆನ್ನೂರಿನ‌ ಅನರ್ಹ ಶಾಸಕ ಆರ್.ಶಂಕರ್​ಗೆ ಬಿಜೆಪಿ ಟಿಕೆಟ್ ಬದಲು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿ, ಸಚಿವರನ್ನಾಗಿ ಮಾಡುವ ಭರವಸೆಯನ್ನು ಬಹಿರಂಗವಾಗಿಯೇ ಸಿಎಂ ಮಾಡಿದ್ದಾರೆ. ಇತ್ತ ಡಿಸಿಎಂ ಲಕ್ಷ್ಮಣ ಸವದಿ ಅವರಿಗೂ ಅಥಣಿ ಟಿಕೆಟ್ ನೀಡದೇ ಅವರನ್ನೂ ಎಂಎಲ್​ಸಿ ಮಾಡಲೇಬೇಕಾದ ಅನಿವಾರ್ಯತೆ ಇದೆ.

ಉಪ‌ಚುನಾವಣೆಯಲ್ಲಿ ಆಪರೇಷನ್ ಕಮಲದ ಪ್ರಮುಖರಾದ ರಮೇಶ್ ಜಾರಕಿಹೊಳಿ, ಎಂಟಿಬಿ ನಾಗರಾಜ್, ಹೆಚ್.ವಿಶ್ವನಾಥ್ ಸೋತರೆ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡುವ ವಾಗ್ದಾನ ನೀಡಿರುವ ಸಿಎಂ ಪ್ರಮುಖ ನಾಯಕರು ಸೋತರೂ ಅವರಿಗೆ ಸಚಿವ ಸ್ಥಾನ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.

ಬಿಜೆಪಿ ಆಪ್ತ ಮೂಲಗಳ ಪ್ರಕಾರ, ಸಿಎಂ ಆಪ್ತರೂ ಆಗಿರುವ, ವಿಧಾನಸಭೆಯಿಂದ ವಿಧಾನ ಪರಿಷತ್​ಗೆ ಚುನಾಯಿತರಾಗಿರುವ ರುದ್ರೇಗೌಡ, ರವಿಕುಮಾರ್, ಲೆಹರ್ ಸಿಂಗ್ ಮತ್ತು ತೇಜಸ್ವಿನಿ ರಮೇಶ್​ಗೆ ಸಿಎಂ ಕರೆ ಮಾಡಿ ಅಗತ್ಯ ಬಿದ್ದರೆ ಪರಿಷತ್ ಸ್ಥಾನದ‌ ತ್ಯಾಗಕ್ಕೆ ಸಿದ್ಧವಾಗಿರಿ ಎಂದು ಸೂಚನೆ ನೀಡಿದ್ದಾರೆ ಎನ್ನಲಾಗುತ್ತಿದೆ.

Intro:

ಬೆಂಗಳೂರು: ಪರಿಷತ್ ಸ್ಥಾನದ ತ್ಯಾಗಕ್ಕೆ ಸಿದ್ದವಾಗಿ ಎಂದು ತಮ್ಮ ಆಪ್ತ ಎಂಎಲ್ಸಿಗಳಿಗೆ‌ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆ ನೀಡಿದ್ದು,ಅನರ್ಹ ಶಾಸಕರಿಗಾಗಿ ವಿಧಾನ ಪರಿಷತ್ ಸ್ಥಾನವನ್ನು ತೊರೆಯುವ ಅನಿವಾರ್ಯತೆಗೆ ಬಿಜೆಪಿ ಪರಿಷತ್ ಸದಸ್ಯರು ಸಿಲುಕಿದ್ದಾರೆ.

ಹಾಲಿ ವಿಧಾನ ಪರಿಷತ್ ಸದಸ್ಯರಿಂದ ರಾಜೀನಾಮೆ ಕೊಡಿಸಬೇಕಾದ ಅನಿವಾರ್ಯತೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಿಲುಕಿದ್ದಾರೆ.ಈಗಾಗಲೇ ‌ರಾಣೆಬೆನ್ನೂರಿನ‌ ಅನರ್ಹ ಶಾಸಕ ಆರ್.ಶಂಕರ್ ಗೆ ಬಿಜೆಪಿ ಟಿಕೆಟ್ ಬದಲು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿ ಸಚಿವರನ್ನಾಗಿ ಮಾಡುವ ಭರವಸೆಯನ್ನು ಬಹಿರಂಗವಾಗಿಯೇ ಮಾಡಿರುವ ಸಿಎಂ ಇತ್ತ ಡಿಸಿಎಂ ಲಕ್ಷ್ಮಣ ಸವದಿಗೂ ಅಥಣಿ ಟಿಕೆಟ್ ನೀಡದೇ ಅವರನ್ನೂ ಎಂಎಲ್ಸಿ ಮಾಡಲೇಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ.

ಇನ್ನು ಉಪ‌ ಚುನಾವಣೆಯಲ್ಲಿ ಆಪರೇಷನ್ ಕಮಲದ ಪ್ರಮುಖ ರಮೇಶ್ ಜಾರಕಿಹೊಳಿ,ಎಂಟಿಬಿ ನಾಗರಾಜ್, ಹೆಚ್.ವಿಶ್ವನಾಥ್ ಸೋತರೆ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಲೇಬೇಕಾದ ಅನಿವಾರ್ಯತೆ ಇದೆ,ಸಚಿವ ಸ್ಥಾನದ ವಾಗ್ದಾನ ನೀಡಿರುವ ಸಿಎಂ ಪ್ರಮುಖ ನಾಯಕರು ಸೋತರೂ ಅವರಿಗೆ ಸಚಿವ ಸ್ಥಾನ ನೀಡಲು ಎಂಎಲ್ಸಿ ಮಾಡಲೇಬೇಕು ಬೇರೆ ಆಯ್ಕೆ ಇಲ್ಲ ಹೀಗಾಗಿ ತಮ್ಮ ಆಪ್ತ ಎಂಎಲ್ಸಿಗಳಿಗೆ ರಾಜೀನಾಮೆ ನೀಡಲು‌ ಮಾನಸಿಕವಾಗಿ ಸಿದ್ದರಾಗಿರಿ ಎನ್ನುವ ಸಂದೇಶವನ್ನು ಸಿಎಂ ಬಿಎಸ್ವೈ ರವಾನಿಸಿದ್ದಾರೆ.

ಬಿಜೆಪಿ ಆಪ್ತ ಮೂಲಗಳ ಪ್ರಕಾರ ಸಿಎಂ ಬಿಎಸ್ವೈ ಆಪ್ತರೂ ಆಗಿರುವ ವಿಧಾನಸಭೆಯಿಂದ ವಿಧಾನ ಪರಿಷತ್ ಗೆ ಚುನಾಯಿತರಾಗಿರುವ ರುದ್ರೇಗೌಡ,ರವಿಕುಮಾರ್, ಲೆಹರ್ ಸಿಂಗ್ ಮತ್ತು ತೇಜಸ್ವಿನಿ ರಮೇಶ್ ಗೆ ಸಿಎಂ ಬಿಎಸ್ವೈ ಕರೆ ಮಾಡಿ ಅಗತ್ಯ ಬಿದ್ದರೆ ಪರಿಷತ್ ಸ್ಥಾನದ‌ ತ್ಯಾಗಕ್ಕೆ ಸಿದ್ದವಾಗಿರಿ ಎಂದು ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.Body:.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.