ETV Bharat / state

ಬಿಎಸ್​ವೈ ಅವರಿಗೆ ಯಾವುದೇ ಪರ್ಯಾಯವಿಲ್ಲ.. ಅಧಿಕಾರ ಕಳೆದುಕೊಳ್ಳಲ್ಲ ಅಂತಾರೆ ಎಂಪಿರೇ..

author img

By

Published : Jun 3, 2020, 8:26 PM IST

ಯಾರನ್ನು ಬಿಜೆಪಿಗೆ ಕರೆತಂದು ಟಿಕೇಟ್ ನೀಡಿದ್ದರೋ ಇಂದು ಅವರೇ ಸಿಎಂ ಅವರ ವಿರುದ್ಧ ಬೆರಳು ಮಾಡಿದ್ದಾರೆ. ಕೇಂದ್ರದ ಮಾಜಿ ಸಚಿವ ಯತ್ನಾಳ್ ಬಗ್ಗೆ ನಮಗೆ ಗೌರವವಿದೆ. ಆದರೆ, ಅವರು ಬಿಎಸ್‌ವೈ ಅವರ ವಿರುದ್ಧ ಮಾತನಾಡಿದ್ರೆ ಅದನ್ನು ಸಹಿಸಲ್ಲ..

BSY has no alternative... :  M P Renukacharya
ಬಿಎಸ್​ವೈ ಅವರಿಗೆ ಯಾವುದೇ ಪರ್ಯಾಯವಿಲ್ಲ... ಅವರು ಅಧಿಕಾರ ಕಳೆದುಕೊಳ್ಳಲ್ಲ: ರೇಣುಕಾಚಾರ್ಯ

ಬೆಂಗಳೂರು: ಬಿಜೆಪಿ ಹೈಕಮಾಂಡ್ ನಾಯಕರು ಬಿ ಎಸ್ ಯಡಿಯೂರಪ್ಪರನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಿದ್ದಾರೆ. ಯಾರೋ ಒಂದಿಬ್ಬರು ನಾಯಕರು ಅವರು ನಮ್ಮ ನಾಯಕರಲ್ಲ ಎಂದ ಮಾತ್ರಕ್ಕೆ ಆನೆಯ ತೂಕ ಕಡಿಮೆಯಾಗುವುದಿಲ್ಲ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ ಅಭಿಪ್ರಾಯಪಟ್ಟಿದ್ದಾರೆ.

ಬಿಎಸ್​ವೈ ಅವರಿಗೆ ಯಾವುದೇ ಪರ್ಯಾಯವಿಲ್ಲ.. ಅವರು ಅಧಿಕಾರ ಕಳೆದುಕೊಳ್ಳಲ್ಲ..

ವಿಕಾಸಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಅಮಿತ್ ಶಾ ಅವರೇ ಯಡಿಯೂರಪ್ಪರನ್ನು ಮುಂದಿನ ಮುಖ್ಯಮಂತ್ರಿಯನ್ನಾಗಿ ಘೋಷಿಸಿದ್ದರು. ಯಡಿಯೂರಪ್ಪ ಅವರಿಗೆ ಪರ್ಯಾಯ ಅನ್ನುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಒಂದೊಮ್ಮೆ ಇವರನ್ನು ವಿರೋಧಿಸಿ ಯಾವುದೇ ನಾಯಕರು ದಿಲ್ಲಿಗೆ ತೆರಳಿದರೆ ಅವರ ವಿರುದ್ಧ ನಾವು ಕೂಡ ತೆರಳುವ ಶಕ್ತಿ ಹೊಂದಿದ್ದೇವೆ. ಯಾರನ್ನು ಯಡಿಯೂರಪ್ಪನವರು ಬಿಜೆಪಿಗೆ ಕರೆತಂದು ಟಿಕೇಟ್ ನೀಡಿದ್ದರೋ ಇಂದು ಅವರೇ ಸಿಎಂ ಅವರ ವಿರುದ್ಧ ಬೆರಳು ಮಾಡಿದ್ದಾರೆ. ಕೇಂದ್ರದ ಮಾಜಿ ಸಚಿವರಾಗಿರುವ ಬಸವನಗೌಡ ಪಾಟೀಲ್ ಯತ್ನಾಳ್ ಬಗ್ಗೆ ನಮಗೆ ಗೌರವವಿದೆ. ಆದರೆ, ಅವರು ಯಡಿಯೂರಪ್ಪ ಅವರ ವಿರುದ್ಧ ಮಾತನಾಡಿದರೆ ಅದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.

ರೇಣುಕಾಚಾರ್ಯ ಅವರು ಸಿಎಂ ಆಗುವ ಹಗಲುಗನಸು ಕಾಣುವುದು ಬೇಡ. ಬಿಜೆಪಿಯ ಸಣ್ಣಪುಟ್ಟ ಸಮಸ್ಯೆಗಳನ್ನು ನಾವೇ ಬಗೆಹರಿಸಿಕೊಳ್ಳುತ್ತೇವೆ. ನಮ್ಮ ಪಕ್ಷ ಸಶಕ್ತವಾಗಿದೆ. ಪಕ್ಷದಲ್ಲಿ ಒಗ್ಗಟ್ಟಿದೆ. ಭಿನ್ನಮತ ಮತ್ತು ಬಂಡಾಯ ನಮ್ಮಲ್ಲಿ ಇಲ್ಲ. ಭಾರತೀಯ ಜನತಾ ಪಕ್ಷದ ಯಾವುದೇ ಶಾಸಕರು ಕಾಂಗ್ರೆಸ್‌ಗೆ ತೆರಳುವ ಸಾಧ್ಯತೆ ಇಲ್ಲ. ನಮ್ಮದು ಒಂದು ಕುಟುಂಬ ಇಲ್ಲಿನ ಸಮಸ್ಯೆಯನ್ನು ಇಲ್ಲಿಯೇ ಬಗೆಹರಿಸಿಕೊಳ್ಳುತ್ತೇವೆ. ಕಾಂಗ್ರೆಸ್‌ನಲ್ಲಿ ಆ ಪರಿಸ್ಥಿತಿ ಇಲ್ಲ. ಅಲ್ಲಿ ಹಲವು ಬಣಗಳು ನಿರ್ಮಾಣವಾಗಿವೆ. ಒಬ್ಬೊಬ್ಬರು ಒಂದೊಂದು ಜಪ ಮಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕರನ್ನ ಯಾವುದೇ ಬಿಜೆಪಿ ಶಾಸಕರು ಸಂಪರ್ಕಿಸಿಲ್ಲ. ಅವರೇ ಅನಗತ್ಯವಾಗಿ ಈ ಸುದ್ದಿ ಹುಟ್ಟಿಸುತ್ತಿದ್ದಾರೆ ಎಂದರು.

ಬಿಜೆಪಿ ಪಕ್ಷದ ಸಂಘಟನೆ ರಾಜ್ಯ ಹಾಗೂ ಕೇಂದ್ರದಲ್ಲಿ ಅತ್ಯಂತ ಬಲಿಷ್ಠವಾಗಿದ್ದು ಇದನ್ನು ಗಮನಿಸಿ ಕಾಂಗ್ರೆಸ್‌ನಿಂದ ಹಲವು ಶಾಸಕರು ಇತ್ತ ಬರಲು ಸಜ್ಜಾಗಿದ್ದಾರೆ. ಈ ವಿಚಾರವನ್ನು ರಮೇಶ್ ಜಾರಕಿಹೊಳಿ ಕೂಡ ತಿಳಿಸಿದ್ದಾರೆ. ಕಾಂಗ್ರೆಸ್‌ನಿಂದ ಯಾವುದಾದರೂ ಶಾಸಕರು ಬರಬಹುದೆ ವಿನಃ ಬಿಜೆಪಿಯಿಂದ ಯಾರೂ ಕಾಂಗ್ರೆಸ್ ಕಡೆ ಹೋಗಲ್ಲ ಎಂದು ಸ್ಪಷ್ಟಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.