ETV Bharat / state

ಸುಪ್ರೀಂಕೋರ್ಟ್‌ ತೀರ್ಪು ಸ್ವಾಗತಾರ್ಹ,17 ಕ್ಷೇತ್ರಗಳನ್ನೂ ನಾವೇ ಗೆಲ್ಲುತ್ತೇವೆ: ಬಿಎಸ್‌ವೈ ವಿಶ್ವಾಸ

17 ಕ್ಕೆ ಹದಿನೇಳು ಕ್ಷೇತ್ರವನ್ನು ಗೆಲ್ಲಲು ಸಿದ್ಧತೆ ಪ್ರಾರಂಭವಾಗಿದೆ. ನಾಳೆಯಿಂದಲೇ ಎಲ್ಲಾ ಸಚಿವರು, ಮುಖಂಡರು ಜವಾಬ್ದಾರಿ ತೆಗೆದುಕೊಂಡು ಅಭ್ಯರ್ಥಿಗಳನ್ನು ಗೆಲ್ಲಿಸುವ ಕೆಲಸ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಬಿ.ಎಸ್.ಯಡಿಯೂರಪ್ಪ
author img

By

Published : Nov 13, 2019, 1:18 PM IST

Updated : Nov 13, 2019, 1:27 PM IST

ಬೆಂಗಳೂರು: ಅನರ್ಹ ಶಾಸಕರ ಕುರಿತು ಸುಪ್ರೀಂಕೋರ್ಟ್‌ ನೀಡಿರುವ ತೀರ್ಪನ್ನು ಸಿಎಂ ಬಿ.ಎಸ್.ಯಡಿಯೂರಪ್ಪ ಸ್ವಾಗತಿಸಿದ್ದಾರೆ. ಹಿಂದಿನ ಸ್ಪೀಕರ್ ರಮೇಶ್‌ ಕುಮಾರ್, ಸಿದ್ದರಾಮಯ್ಯ ಜೊತೆ ಸೇರಿಕೊಂಡು ಕುತಂತ್ರ, ಷಡ್ಯಂತ್ರ ಮಾಡಿದ್ದರು. ಇದಕ್ಕೆ ಸ್ಪಷ್ಟವಾದ ತೀರ್ಪನ್ನು ಸುಪ್ರೀಂಕೋರ್ಟ್​ ಕೊಟ್ಟಿದೆ ಎಂದು ಅವರು ಹೇಳಿದ್ದಾರೆ.

ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ

ಇಡೀ ದೇಶವೇ ಸುಪ್ರೀಂಕೋರ್ಟ್ ತೀರ್ಪಿಗೆ ಕಾತುರತೆಯಿಂದ ಕಾಯುತ್ತಿತ್ತು. ಅನರ್ಹಗೊಂಡ 17 ಜನ ಶಾಸಕರೂ ಸ್ಪರ್ಧೆ ಮಾಡಬಹುದು, ಯಾವುದೇ ಅಡ್ಡಿಯಾಗುವುದಿಲ್ಲ ಎಂಬ ತೀರ್ಪನ್ನು ನಾವು ಸ್ವಾಗತ ಮಾಡುತ್ತೇವೆ. 17 ಕ್ಕೆ ಹದಿನೇಳು ಕ್ಷೇತ್ರವನ್ನೂ ಗೆಲ್ಲಲು ಸಿದ್ಧತೆ ಪ್ರಾರಂಭವಾಗಿದೆ. ನಾಳೆಯಿಂದಲೇ ಎಲ್ಲಾ ಸಚಿವರು, ಮುಖಂಡರು ಜವಾಬ್ದಾರಿ ತೆಗೆದುಕೊಂಡು ಗೆಲ್ಲಿಸುವ ಕೆಲಸ ಮಾಡುತ್ತೇವೆ ಎಂದಿದ್ದಾರೆ.

ಇನ್ನು ಶರತ್ ಬಚ್ಚೇಗೌಡ ನಡೆಗೆ ಸಿಎಂ ಕಿಡಿಕಾರಿದ್ದು, ಯಾರು ನಮ್ಮ ಜೊತೆ ಇರುತ್ತಾರೋ ಅವರ ಬಗ್ಗೆ ನಾನು ಮಾತನಾಡುತ್ತೇನೆ. ಬೇರೆಯವರ ಬಗ್ಗೆ ನಾನು ಮಾತಾಡುವುದಿಲ್ಲ ಎಂದು ಗರಂ ಆದ್ರು. ನಾಳೆ ಹೊಸಕೋಟೆಯಿಂದ ನಾಮಪತ್ರ ಸಲ್ಲಿಕೆಗೆ ಶರತ್ ಬಚ್ಚೇಗೌಡ ಮುಂದಾಗಿದ್ದಾರೆ. ಈ ಮೂಲಕ ಪರೋಕ್ಷವಾಗಿ ಶರತ್ ಬಚ್ಚೇಗೌಡ ಹೇಗಾದರೂ ಮಾಡಿಕೊಳ್ಳಲಿ ಎಂದು ಸಿಎಂ ತಿಳಿಸಿದ್ದಾರೆ.

ಟಿಕೆಟ್ ಬಗ್ಗೆ ಯಾರಿಗೆ ಅಂತ ಚರ್ಚಿಸಿ ನಿರ್ಧಾರ ಮಾಡುತ್ತೇವೆ. ರಾಷ್ಟ್ರೀಯ ನಾಯಕರ ಜೊತೆಗೂ ಚರ್ಚಿಸುತ್ತೇವೆ. ಇಂದು ಕೋರ್ ಕಮಿಟಿ ಸಭೆ ಇದೆ. ಟಿಕೆಟ್ ಯಾರಿಗೆ ಕೊಡಬೇಕು ಅಂತ ಚರ್ಚೆ ಮಾಡುತ್ತೇವೆ. ಇಂದು ಸಂಜೆ ಅನರ್ಹ ಶಾಸಕರು ಬೆಂಗಳೂರಿಗೆ ವಾಪಸ್ ಬರುತ್ತಾರೆ. ಅವರ ಜೊತೆಗೂ ನಾವು ಸಮಾಲೋಚನೆ ಮಾಡುತ್ತೇವೆ ಎಂದಿದ್ದಾರೆ.

Intro:ನಾಳೆಯಿಂದಲೇ ‌ಅನರ್ಹರ ಕ್ಷೇತ್ರದಲ್ಲಿ ಸಚಿವರಿಂದ ಚುನಾವಣಾ ರಣತಂತ್ರ- ಎಲ್ಲಾ ಕ್ಷೇತ್ರ ನಾವೇ ಗೆಲ್ಲುತ್ತೇವೆ- ಯಡಿಯೂರಪ್ಪ

ಬೆಂಗಳೂರು- ಇಡೀ ದೇಶವೇ ಸುಪ್ರೀಂಕೋರ್ಟ್ ನ ತೀರ್ಪಿಗೆ ಕಾತುರತೆಯಿಂದ ಕಾಯ್ತಿತ್ತು. ಹಿಂದಿನ ಸ್ಪೀಕರ್ ರಮೇಶ್‌ ಕುಮಾರ್ ಸಿದ್ದರಾಮಯ್ಯ ಜೊತೆ ಸೇರಿಕೊಂಡು ಕುತಂತ್ರ, ಷಡ್ಯಂತ್ರ ಮಾಡಿದ್ರು, ಇದಕ್ಕೆ ಸ್ಪಷ್ಟವಾದ ತೀರ್ಪು ಸುಪ್ರೀಂ ಕೊಟ್ಟಿದೆ. ೧೭ ಜನ ಸ್ಪರ್ಧೆ ಮಾಡಬಹುದು, ಯಾವುದೇ ಅಡ್ಡಿಯಾಗುವುದಿಲ್ಲ ಎಂಬ ತೀರ್ಪನ್ನು ನಾವು ಸ್ವಾಗತ ಮಾಡುತ್ತೇವೆ ಎಂದರು.
ಅಲ್ಲದೆ 17 ಕ್ಕೆ ಹದಿನೇಳು ಕ್ಷೇತ್ರವನ್ನು ಗೆಲ್ಲಲು ಸಿದ್ಧತೆ ಪ್ರಾರಂಭವಾಗಿದೆ. ನಾಳೆಯಿಂದಲೇ ಎಲ್ಲಾ ಸಚಿವರು,ಮುಖಂಡರು ಜವಾಬ್ದಾರಿ ತಗೊಂಡು ಗೆಲ್ಲಿಸಿಕೊಳ್ಳೋಕೆ ಕೆಲಸ ಮಾಡ್ತೇವೆ ಎಂದರು.

ಇನ್ನು ಶರತ್ ಬಚ್ಚೇಗೌಡ ನಡೆಗೆ ಸಿಎಂ ಬಿಎಸ್ವೈ ಕಿಡಿಕಾರಿ,
ಯಾರು ನಮ್ಮ ಜೊತೆ ಇರ್ತಾರೋ ಅವರ ಬಗ್ಗೆ ನಾನು ಮಾತನಾಡ್ತೇನೆ. ಬೇರೆಯವರ ಬಗ್ಗೆ ನಾನು ಮಾತಾಡುವುದಿಲ್ಲ ಎಂದರು. ನಾಳೆ ಹೊಸಕೋಟೆಯಿಂದ ನಾಮಪತ್ರ ಸಲ್ಲಿಕೆಗೆ ಶರತ್ ಬಚ್ಚೇಗೌಡ ಮುಂದಾಗಿದ್ದಾರೆ.
ಈ ಪ್ರತಿಕ್ರಿಯೆ ಮೂಲಕ ಪರೋಕ್ಷವಾಗಿ ಶರತ್ ಬಚ್ಚೇಗೌಡ ಹೇಗಾದರೂ ಮಾಡಿಕೊಳ್ಳಲಿ ಎಂದು ಸಿಎಂ ತಿಳಿಸಿದರು.

ಟಿಕೆಟ್ ಬಗ್ಗೆ ಯಾರಿಗೆ ಅಂತ ಚರ್ಚಿಸಿ ನಿರ್ಧಾರ ಮಾಡುತ್ತೇವೆ. ಟಿಕೆಟ್ ಬಗ್ಗೆ ರಾಷ್ಟ್ರೀಯ ನಾಯಕರ ಜೊತೆಗೂ ಚರ್ಚಿಸಿ ತೀರ್ಮಾನ ಮಾಡುತ್ತೇವೆ.
ಇವತ್ತು ಕೋರ್ ಕಮಿಟಿ ಸಭೆ ಇದೆ
ಟಿಕೆಟ್ ಯಾರಿಗೆ ಕೊಡಬೇಕು ಅಂತ ಚರ್ಚೆ ಮಾಡ್ತೇವೆ
ಇಂದು ಸಂಜೆ ಅನರ್ಹ ಶಾಸಕರು ವಾಪಸ್ ಬೆಂಗಳೂರಿಗೆ ಬರ್ತಾರೆ. ಅವರ ಜೊತೆಗೂ ನಾವು ಸಮಾಲೋಚನೆ ಮಾಡ್ತೇವೆ ಎಂದರು.

ಸೌಮ್ಯಶ್ರೀ
Kn_bng_03_cm_byte_7202707Body:...Conclusion:...
Last Updated : Nov 13, 2019, 1:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.