ETV Bharat / state

ಹೊಸ ವರ್ಷಾಚರಣೆ ಸಂಭ್ರಮಕ್ಕೆ ಬ್ರೇಕ್ ; ಕೋವಿಡ್ 2ನೇ ಅಲೆ ಎದುರಿಸಲು ಪಾಲಿಕೆ ಸಜ್ಜು

ರೆಸ್ಟೋರೆಂಟ್, ಕ್ಲಬ್​ಗಳಲ್ಲಿ ಈಗ ಪ್ರಸ್ತುತ ಯಾವ ನಿಯಮಗಳಿವೆಯೋ ಅದರಂತೆ‌ ಮಾಸ್ಕ್, ಸಾಮಾಜಿಕ ಅಂತರ ಕಾಪಾಡಿಕೊಂಡು ಗ್ರಾಹಕರಿಗೆ ಹೋಗಲು ಅವಕಾಶ ಇರುತ್ತದೆ. ಆದರೆ, ಹೊಸ ವರ್ಷದ ಆಚರಣೆಗೆ ಯಾವುದೇ ಹೊಸ ಅನುಮತಿ ಕೊಡದೆ ಹೆಚ್ಚು ಜನ ಸೇರದಂತೆ ನೋಡಿಕೊಳ್ಳಬೇಕೆಂದು ಸರ್ಕಾರಕ್ಕೆ ಕೇಳಲಾಗಿದೆ..

BBMP
ಬಿಬಿಎಂಪಿ
author img

By

Published : Dec 2, 2020, 5:30 PM IST

Updated : Dec 2, 2020, 8:03 PM IST

ಬೆಂಗಳೂರು : ಹೊಸ ವರ್ಷಕ್ಕೆ ಯಾವುದೇ ಹೊಸ ಕಾರ್ಯಕ್ರಮಗಳು, ಪಬ್, ಕ್ಲಬ್, ರೆಸ್ಟೋರೆಂಟ್‌ಗಳಲ್ಲಿ ವಿಭಿನ್ನ ಆಚರಣೆಗಳು, ಸಾರ್ವಜನಿಕ ಸಂಭ್ರಮಗಳಿಗೆ ಬ್ರೇಕ್ ಬೀಳುವ ಸಾಧ್ಯತೆ ಇದೆ. ಈ ಬಗ್ಗೆ ಪಾಲಿಕೆ ಈಗಾಗಲೇ ಪ್ರಸ್ತಾವನೆ ನೀಡಿದ್ದು, ಇನ್ನೆರಡು ದಿನದಲ್ಲಿ ಇದಕ್ಕೆ ಪೂರಕವಾಗಿ ಸರ್ಕಾರ ಆದೇಶ ಹೊರಡಿಸುವ ಸಾಧ್ಯತೆ ಇದೆ.

ಈ ಕುರಿತು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಮಾತನಾಡಿ, ನಗರದ ಪ್ರಮುಖ ರಸ್ತೆಗಳಲ್ಲಿ, ಮೈದಾನಗಳಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಬಗ್ಗೆ ಸರ್ಕಾರದಿಂದ ಪಾಲಿಕೆಯ ಅಭಿಪ್ರಾಯ ಕೇಳಲಾಗಿತ್ತು.

ನಗರದಲ್ಲಿ ಆರುಸಾವಿರ ಇದ್ದ ಕೋವಿಡ್ ಪ್ರಕರಣ 600-700ಕ್ಕೆ ಇಳಿಕೆಯಾಗಿವೆ. ಈಗಾಗಲೇ ಹಬ್ಬಗಳಲ್ಲಿ ಹೆಚ್ಚು ಜನ ಸೇರಲು ಅವಕಾಶ ನೀಡದಿರುವುದರಿಂದ ಕೋವಿಡ್ ನಿಯಂತ್ರಣದಲ್ಲಿದೆ ಎಂದರು.

ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಮಾತನಾಡಿದರು

ಚಳಿಗಾಲ ಮತ್ತು ಕೋವಿಡ್ 2ನೇ ಅಲೆ ಇರುವ ಹಿನ್ನೆಲೆ ಸಾರ್ವಜನಿಕವಾಗಿ ಎಂಜಿ ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್, ಕಮರ್ಷಿಯಲ್​ ಸ್ಟ್ರೀಟ್‌ಗಳಲ್ಲಿ ಪ್ರತಿ ವರ್ಷದಂತೆ ಸಂಭ್ರಮಾಚರಣೆಗೆ ಅನುಮತಿ ನೀಡದೆ ನಿಷೇಧಿಸಬೇಕೆಂದು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಜೊತೆಗೆ ಪಬ್, ರೆಸ್ಟೋರೆಂಟ್ ಹೋಟೆಲ್​ಗಳಲ್ಲಿ ಹೊಸವರ್ಷದ ಆಚರಣೆಗೆ ಹೆಚ್ಚು ಜನರನ್ನು ಆಕರ್ಷಿಸುವ ಕಾರ್ಯಕ್ರಮಗಳನ್ನು, ಟಿಕೆಟ್ ನೀಡುವುದನ್ನು ನಿಷೇಧಿಸಬೇಕು. ಕ್ಲಬ್‌ಗಳಲ್ಲಿ ವಿಶೇಷ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ನಿಷೇಧಿಸಬೇಕೆಂದು ಸರ್ಕಾರಕ್ಕೆ ಕೇಳಿಕೊಳ್ಳಲಾಗಿದೆ ಎಂದರು.

ರೆಸ್ಟೋರೆಂಟ್, ಕ್ಲಬ್​ಗಳಲ್ಲಿ ಈಗ ಪ್ರಸ್ತುತ ಯಾವ ನಿಯಮಗಳಿವೆಯೋ ಅದರಂತೆ‌ ಮಾಸ್ಕ್, ಸಾಮಾಜಿಕ ಅಂತರ ಕಾಪಾಡಿಕೊಂಡು ಗ್ರಾಹಕರಿಗೆ ಹೋಗಲು ಅವಕಾಶ ಇರುತ್ತದೆ. ಆದರೆ, ಹೊಸ ವರ್ಷದ ಆಚರಣೆಗೆ ಯಾವುದೇ ಹೊಸ ಅನುಮತಿ ಕೊಡದೆ ಹೆಚ್ಚು ಜನ ಸೇರದಂತೆ ನೋಡಿಕೊಳ್ಳಬೇಕೆಂದು ಸರ್ಕಾರಕ್ಕೆ ಕೇಳಲಾಗಿದೆ.

ಈ ಬಗ್ಗೆ ಸರ್ಕಾರ ಕ್ರಮಕೈಗೊಳ್ಳಲಿದೆ. ಸರ್ಕಾರದ ಆದೇಶದಂತೆ ನಿಯಮ ಜಾರಿ ಮಾಡಲಾಗುವುದು ಎಂದರು. ರಾತ್ರಿ ಕರ್ಫ್ಯೂ ಜಾರಿ ಸಂಬಂಧ ಸರ್ಕಾರ ಯಾವ ರೀತಿ ಆದೇಶ ಹೊರಡಿಸಲಿದೆಯೋ ಅದನ್ನು ಪಾಲಿಸಲಾಗುವುದು ಎಂದು ತಿಳಿಸಿದರು.

Last Updated : Dec 2, 2020, 8:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.