ETV Bharat / state

ಸಿಇಟಿ ಎಲ್ಲ ವಿಭಾಗಗಳಲ್ಲೂ ಟಾಪರ್​​ಗಳಾಗಿ ಹೊರಹೊಮ್ಮಿದ ಬಾಲಕರು: ಸಾಧಕರ ಸಂತಸ, ಗುರಿಯಡೆಗೆ ಚಿತ್ತ - ಕರ್ನಾಟಕ ಸಿಇಟಿ ಫಲಿತಾಂಶ

ಶನಿವಾರ ಪ್ರಕಟವಾದ ಸಿಇಟಿ ಪರೀಕ್ಷೆಯ ಫಲಿತಾಂಶದಲ್ಲಿ ಎಲ್ಲ ವಿಭಾಗಗಳಲ್ಲಿ ಈ ಬಾರಿ ಬಾಲಕರೇ ಟಾಪರ್​​ಗಳಾಗಿ ಹೊರಹೊಮ್ಮಿ ಮೇಲುಗೈ ಸಾಧಿಸಿದ್ದಾರೆ. ಈ ಮೂಲಕ ಪ್ರತಿ ಸಲ ಪರೀಕ್ಷೆಯಲ್ಲಿ ಬಾಲಕಿಯರೇ ಮುಂದು ಎಂಬ ವಾಡಿಕೆಗೆ ಬ್ರೇಕ್​ ಹಾಕಿದ್ದಾರೆ.

boys-emerged-as-toppers-in-all-sections-of-cet
ಸಿಇಟಿ ಎಲ್ಲ ವಿಭಾಗಗಳಲ್ಲೂ ಟಾಪರ್​​ಗಳಾಗಿ ಹೊರಹೊಮ್ಮಿದ ಬಾಲಕರು: ರ‍್ಯಾಂಕ್ ಪಡೆದವರ ಸಂತಸ ಹೇಗಿದೆ?
author img

By

Published : Jul 30, 2022, 10:57 PM IST

ಬೆಂಗಳೂರು: 2022-23ನೇ ಶೈಕ್ಷಣಿಕ ಸಾಲಿನಲ್ಲಿ ನಾನಾ ವೃತ್ತಿಪರ ಕೋರ್ಸುಗಳ ಪ್ರವೇಶಾತಿಗೆ ನಡೆಸಿದ್ದ ಸಿಇಟಿ ಪರೀಕ್ಷೆಯ ಫಲಿತಾಂಶ ಶನಿವಾರ ಪ್ರಕಟಿಸಲಾಗಿದ್ದು, ಎಲ್ಲ ವಿಭಾಗಗಳ ಟಾಪರ್​​ಗಳು ಈ ಬಾರಿ ಬಾಲಕರೇ ಆಗಿರುವುದು ವಿಶೇಷ. ಈ ಹಿನ್ನೆಲೆಯಲ್ಲಿ ಹಲವು ಟಾಪರ್​​ಗಳು ತಮ್ಮ ಸಂತಸ ಹಂಚಿಕೊಂಡಿದ್ದಾರೆ.

ಜೆಇಇ ಫಲಿತಾಂಶಕ್ಕಾಗಿ ಕಾಯುತ್ತಿರುವೆ: ಎಂಜಿನಿಯರಿಂಗ್​ನಲ್ಲಿ 2ನೇ ರಾಂಕ್ ಪಡೆದ ಸಿದ್ಧಾರ್ಥ ಸಿಂಗ್ ಮಾತನಾಡಿ, ದೇಶದ ಪ್ರಮುಖ ಐಐಟಿಯಲ್ಲಿ ಕಂಪ್ಯೂಟರ್ ಸೈನ್ಸ್ ಕೋರ್ಸ್ ಮಾಡಬೇಕೆಂಬ ಗುರಿ ಇದೆ. ಜೆಇಇ ಫಲಿತಾಂಶ ಬಂದ ನಂತರ ಮುಂದೆ ಏನು ಮಾಡಬೇಕು ಎಂಬುದರ ಬಗ್ಗೆ ನಿರ್ಧರಿಸುತ್ತೇನೆ. ಸಿಇಟಿಯಲ್ಲಿ 2ನೇ ರ‍್ಯಾಂಕ್​​​ ಪಡೆದಿರುವುದು ಖುಷಿ ಇದೆ ಎಂದು ಹೇಳಿದರು.

ಇಂಟಿಗ್ರೇಡ್ ಕೋಚಿಂಗ್ ನೆರವು: ಕೃಷಿ ವಿಜ್ಞಾನ ವಿಭಾಗದಲ್ಲಿ 2ನೇ ರ‍್ಯಾಂಕ್​​​ನ ಸುಮಿತ್ ಎಸ್.ಪಾಟೀಲ್, ಸಿಇಟಿಯಲ್ಲಿ 2ನೇ ರ‍್ಯಾಂಕ್ ಬರುತ್ತದೆ ಎಂದುಕೊಂಡಿರಲಿಲ್ಲ. ಪಾಲಕರು ಮತ್ತು ಉಪನ್ಯಾಸಕರ ಪ್ರೋತ್ಸಾಹದಿಂದ 2ನೇ ರ‍್ಯಾಂಕ್​​​ ಪಡೆದುಕೊಂಡಿದ್ದೇನೆ. ನಮ್ಮ ಕಾಲೇಜಿನಲ್ಲಿ ಇಂಟಿಗ್ರೇಡ್ ಕೋಚಿಂಗ್ ಕೊಡುತ್ತಿದ್ದರು. ಜೊತೆಗೆ ಹಳೆಯ ಪಶ್ನೆ ಪತ್ರಿಕೆಗಳನ್ನು ಹೆಚ್ಚು ಅಭ್ಯಾಸ ನಡೆಸುತ್ತಿದ್ದೆ. ಹೀಗಾಗಿ ಹೆಚ್ಚಿನ ಅಂಕ ಗಳಿಸಲು ಸಾಧ್ಯವಾಯಿತು. ಅಪ್ಪ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಾರೆ, ಅಮ್ಮ ಗೃಹಿಣಿ. ಇಂಜಿನಿಯರ್ ಆಗಬೇಕು ಎನ್ನುವ ಆಸೆ ಇದೆ. ನೀಟ್ ಮತ್ತು ಜೆಇಇ ಅಡ್ವಾನ್ಸ್ ಫಲಿತಾಂಶಕ್ಕಾಗಿ ಕಾಯುತ್ತಿದ್ದೇನೆ ಎಂದು ತಿಳಿಸಿದರು.

ಮೊದಲನೇ ರ‍್ಯಾಂಕ್​​​ ನಿರೀಕ್ಷೆ ಇರಲಿಲ್ಲ: ನಾನು ಹೆಚ್ಚಾಗಿ ನೀಟ್‌ಗೆ ತಯಾರಿ ನಡೆಸಿದ್ದೆ. ಆದರೆ, ಕೆಸಿಟಿಗೆ ವಿಶೇಷವಾಗಿ ಹೆಚ್ಚು ತಯಾರಿ ನಡೆಸಿರಲಿಲ್ಲ. ಹೆಚ್ಚು ಎನ್‌ಸಿಆರ್‌ಟಿ ಪಠ್ಯ ಪುಸ್ತಕದ ಮೇಲೆ ಗಮನ ಹರಿಸಿ ಓದುತ್ತಿದ್ದೆ. ನನಗೆ ರಸಾಯನಶಾಸ ಸ್ವಲ್ಪ ಕಷ್ಟ ಅನಿಸಿತ್ತು. ಹೀಗಾಗಿ ಅದನ್ನು ಹೆಚ್ಚಾಗಿ ಅಭ್ಯಾಸ ನಡೆಸಿದ್ದೆ. ಅಪ್ಪ-ಅಮ್ಮ ಇಬ್ಬರು ಸಾಫ್ಟ್​ವೇರ್ ಇಂಜಿನಿಯರ್​ಗಳು. ಮೊದಲನೇ ರ‍್ಯಾಂಕ್​​​ ಬರುತ್ತದೆ ಎನ್ನುವ ನಿರೀಕ್ಷೆ ಇರಲಿಲ್ಲ. ನಾನು ವೈದ್ಯನಾಗಬೇಕು ಎಂದುಕೊಂಡಿದ್ದೇನೆ ಎದು ಎಂದು ಯೋಗ ಮತ್ತು ಪಶು ವೈದ್ಯಕೀಯ ವಿಜ್ಞಾನ ವಿಭಾಗದಲ್ಲಿ ಮೊದಲ ರ‍್ಯಾಂಕ್ ಪಡೆದ ಹೃಷಿಕೇಶ್ ನಾಗಭೂಷಣ್ ತಮ್ಮ ಸಂತಸ ಹಂಚಿಕೊಂಡರು.

ಐಐಟಿಯಲ್ಲಿ ಓದುವ ಆಸೆ: ಫಾರ್ಮಸಿ ವಿಭಾಗದಲ್ಲಿ ಮೊದಲ ರ‍್ಯಾಂಕ್ ಪಡೆದ ಆರ್.ಕೆ. ಶಿಶಿರ್ ಕೂಡ ತುಂಬಾ ಖುಷಿಯಲ್ಲಿದ್ದಾರೆ. ಟಾಪ್ 5ರಲ್ಲಿ ಯಾವುದಾದರೂ ಒಂದು ರ‍್ಯಾಂಕ್ ಬರಬಹುದು ಎಂದುಕೊಂಡಿದ್ದೆ. ಆದರೆ, ಮೊದಲ ರ‍್ಯಾಂಕ್ ಬಂದಿರುವುದಕ್ಕೆ ಹೆಚ್ಚು ಖುಷಿಯಾಗುತ್ತಿದೆ. ಅಮ್ಮ ಗೃಹಿಣಿ, ಅಪ್ಪ ಆಂಗ್ಲ ಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಾರೆ. ಹಳೆಯ ಪ್ರಶ್ನೆಗಳನ್ನು ಹೆಚ್ಚು ಅಭ್ಯಾಸ ಮಾಡುತ್ತಿದ್ದೆ. ಬಾಂಬೆ ಐಐಟಿಯಲ್ಲಿ ಕಂಪ್ಯೂಟರ್ ಸೈನ್ಸ್ ಓದಬೇಕು ಎಂದುಕೊಂಡಿದ್ದೇನೆ ಎಂದು ಹೇಳಿದರು.

ಇದನ್ನೂ ಓದಿ: ಸಿಇಟಿ ಫಲಿತಾಂಶ ಪ್ರಕಟ: ಬಾಲಕಿಯರ ಮೀರಿಸಿದ ಬಾಲಕರು, ಅಪೂರ್ವಗೆ ಫಸ್ಟ್​ ರ‍್ಯಾಂಕ್​​​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.