ಬೆಂಗಳೂರು: ನಗರದಲ್ಲಿ ಕೊರೊನಾ ಆತಂಕ ದಿನೇ ದಿನೆ ಹೆಚ್ಚಾಗುತ್ತಲೇ ಇದೆ. ಮೂರು ದಿನಗಳಿಂದ ಕೊರೊನಾ ಪಾಸಿಟಿವ್ ವರದಿಯಾಗಿಲ್ಲ ಎಂದು ನಿಟ್ಟುಸಿರು ಬಿಡುತ್ತಿರುವಾಗಲೇ ಬ್ಯಾಕ್ ಟು ಬ್ಯಾಕ್ ದಾಖಲಾದ ಕೋವಿಡ್ ಪ್ರಕರಣಗಳು ಶಾಕ್ ಕೊಟ್ಟಿವೆ.
![Bommanahalli Zone risen from 5th place to first place](https://etvbharatimages.akamaized.net/etvbharat/prod-images/kn-bng-9-bangalore-corona-script-7201801_26042020223846_2604f_1587920926_857.jpg)
ನಗರದ ಬೊಮ್ಮನಹಳ್ಳಿಯಲ್ಲಿ ಕೊರೊನಾ ಕಾರ್ಮೋಡ ಆವರಿಸಿದೆ. 5ನೇ ಸ್ಥಾನದಲ್ಲಿದ್ದ ಬೊಮ್ಮನಹಳ್ಳಿ ಈಗ ಮೊದಲ ಸ್ಥಾನಕ್ಕೆ ಏರಿದೆ. ಬೊಮ್ಮನಹಳ್ಳಿಯಲ್ಲಿ 37 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಏಕಾಏಕಿ ಕೋವಿಡ್ ಕೇಸ್‌ಗಳಲ್ಲಿ ಹೆಚ್ಚಳವಾಗಿರುವುದು ನಿವಾಸಿಗಳ ನಿದ್ದೆಗೆಡಿಸಿದೆ.
ಕೊರೊನಾ ಹಾಟ್‌ಸ್ಪಾಟ್ ಆಗಿರುವ ಬೊಮ್ಮನಹಳ್ಳಿಯ ಹೊಂಗಸಂದ್ರ ಲಿಸ್ಟ್‌ನಲ್ಲಿ ಮೊದಲ ಸ್ಥಾನಕ್ಕೆ ಬಂದಿದೆ. ಇನ್ನು ವೆಸ್ಟ್ ಝೋನ್‌ನಲ್ಲಿ 35 ಪ್ರಕರಣ, ಸೌಥ್ ಝೋನ್‌ನಲ್ಲಿ 22 ಪ್ರಕರಣ ಪತ್ತೆಯಾಗಿವೆ. ಆರೋಗ್ಯ ಇಲಾಖೆ ಬೊಮ್ಮನಹಳ್ಳಿ ಝೋನ್‌ಅನ್ನು ಗಂಭೀರವಾಗಿ ಪರಿಗಣಿಸಿದೆ.