ETV Bharat / state

ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ ಬಾಲಿವುಡ್ ಖ್ಯಾತ ನಟಿ ಮುಖ್ಯ ಅತಿಥಿ - ಬಾಲಿವುಡ್​​ ನಟಿ ರೇಖಾ

23ರಿಂದ 30ರವರೆಗೆ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ- ಲೋಗೋ ಅನಾವರಣ ಮಾಡಿದ ಸಿಎಂ ಬೊಮ್ಮಾಯಿ‌- ಮುಖ್ಯ ಅತಿಥಿಯಾಗಿ ಬಾಲಿವುಡ್​​ನ ಎವರ್ ಗ್ರೀನ್ ನಟಿ ರೇಖಾ ಭಾಗಿ

Bengalore international  film festival
ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಲೋಗೋ ಅನಾವರಣ
author img

By

Published : Feb 8, 2023, 8:53 AM IST

ಬೆಂಗಳೂರು: 14ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿದೆ. ನಿನ್ನೆ(ಮಂಗಳವಾರ) ಬೆಂಗಳೂರಿನ ಪದ್ಮನಾಭನಗರದಲ್ಲಿ ನಡೆದ‌ ಪುನೀತ್ ರಾಜ್‍ಕುಮಾರ್ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ 14ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಲೋಗೋ ಅನಾವರಣ ಮಾಡಿದರು. 2023 ಮಾರ್ಚ್ 23ರಿಂದ 30ರವರೆಗೆ ಬೆಂಗಳೂರಿನ ಅಂತರಾಷ್ಟ್ರೀಯ ಚಿತ್ರೋತ್ಸವ ನಡೆಯಲಿದೆ.

ಮುಖ್ಯ ಅತಿಥಿಯಾಗಿ ಬಾಲಿವುಡ್​​ ನಟಿ: ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಬಾಲಿವುಡ್​​ನ ಎವರ್ ಗ್ರೀನ್ ನಟಿ ರೇಖಾ ಮುಖ್ಯ ಅತಿಥಿಯಾಗಿ ಬರಲಿದ್ದಾರೆ. ಒಂದು ವಾರಗಳ ಕಾಲ ನಡೆಯುವ ಈ ಚಿತ್ರೋತ್ಸವಕ್ಕೆ 4 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಎಲ್ಲಾ ಅಂದುಕೊಂಡಂತೆ ನಡೆದಿದ್ದರೆ ಫೆಬ್ರವರಿ ತಿಂಗಳಲ್ಲಿ ಈ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವ ನಡೆಯಬೇಕಿತ್ತು. ಆದರೆ ಕೆಲವು ಕಾರಣಗಳಿಂದ‌ ಮಾರ್ಚ್​ನಲ್ಲಿ ಚಿತ್ರೋತ್ಸವ ನಡೆಯಲಿದೆ.

ಇದನ್ನೂ ಓದಿ: ಕನ್ನಡಿಗರಿಗೆ ಸಂದ ಗೌರವ: ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಮುಖ್ಯ ಅತಿಥಿಯಾಗಿ 'ಕಿಚ್ಚ' ಸುದೀಪ್​ ಭಾಗಿ!

ಈ ಸಮಾರಂಭದಲ್ಲಿ ಚಿತ್ರೋತ್ಸವದ ಸಂಘಟನಾ ಸಮಿತಿ ಅಧ್ಯಕ್ಷರೂ ಆದ ಕಂದಾಯ ಸಚಿವ ಆರ್.ಅಶೋಕ್, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಅಶೋಕ್ ಕಶ್ಯಪ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಡಾ.ಪಿ.ಎಸ್.ಹರ್ಷ ಸೇರಿದಂತೆ ಸಂಸದರು, ಶಾಸಕರು, ಹಿರಿಯ ಅಧಿಕಾರಿಗಳು, ಚಲನಚಿತ್ರರಂಗದ ಗಣ್ಯರು, ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ: 13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ ಕಳೆದ ವರ್ಷ ಮಾರ್ಚ್ 3ರಂದು ಜಿಕೆವಿಕೆ ಆವರಣದಲ್ಲಿ ನಡೆದಿತ್ತು. ಸಿಎಂ ಬಸವರಾಜ ಬೊಮ್ಮಾಯಿ ಕಾರ್ಯಕ್ರಮ ಉದ್ಘಾಟನೆ ಮಾಡಿದ್ದರು. ಕೋವಿಡ್​​ ಹಿನ್ನೆಲೆ ಚಲನ ಚಿತ್ರೋತ್ಸವನ್ನು ಸರಳವಾಗಿ ನಡೆಸಲು ಕರ್ನಾಟಕ ಚಲನಚಿತ್ರ ಅಕಾಡೆಮಿ ನಿರ್ಧರಿಸಿತ್ತು. ಎರಡು ವರ್ಷಗಳ ಸಿನಿಮಾಗಳು ಪ್ರದರ್ಶನವಾಗಿದ್ದವು. ಜತೆಗೆ ಎರಡು ವರ್ಷದ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿತ್ತು. ವಿಶ್ವ ಮಾನ್ಯತೆ ಪಡೆದಿರುವ ಚಲನ ಚಿತ್ರೋತ್ಸವದಲ್ಲಿ 55 ರಾಷ್ಟಗಳ ಸುಮಾರು 200 ಸಿನಿಮಾಗಳು ಪ್ರದರ್ಶನಗೊಂಡಿದ್ದವು.

ಕಳೆದ ಬಾರಿಯ ಚಿತ್ರೋತ್ಸವದ ವಿಶೇಷತೆಗಳು: ಸಿನಿಮೋತ್ಸವದಲ್ಲಿ ಸ್ವಾತಂತ್ರ್ಯ ದೊರೆತು 75 ವರ್ಷ ಪೂರ್ಣವಾಗಿರುವ ಹಿನ್ನೆಲೆ ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದ ಚಿತ್ರಗಳು ಪ್ರದರ್ಶನವಾಗಿದ್ದವು. ಜತೆಗೆ 70ರ ದಶಕದಲ್ಲಿ ಬೆಳ್ಳಿತೆರೆಯನ್ನು ಬೆಳಗಿಸಿದ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಸಿನಿ ಜರ್ನಿಯ ಕುರಿತಂತೆ ಪುನರಾವಲೋಕನ ಆಗಿತ್ತು. ಇದಲ್ಲದೇ ತುಳು ಚಿತ್ರರಂಗಕ್ಕೂ 50 ವರ್ಷ ತುಂಬಿದ ಹಿನ್ನೆಲೆ ಆ ಭಾಷೆಯ ಚಿತ್ರಗಳ ಪ್ರದರ್ಶನ ಹಾಗೂ ವಿಚಾರ ಸಂಕೀರ್ಣಗಳ ಮೂಲಕ ತುಳು ಚಿತ್ರರಂಗದ ಅವಲೋಕನಕ್ಕೆ ವೇದಿಕೆ ಸಿದ್ಧಪಡಿಸಲಾಗಿತ್ತು.

ಅಗಲಿದ ತಾರೆಯರಿಗೆ ನಮನ: ಸಿನಿಮೋತ್ಸವದಲ್ಲಿ ಅಗಲಿದ ಚಿತ್ರರಂಗದ ನಟ - ನಟಿಯರಿಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಇದರ ಜೊತೆಗೆ ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಹಾಗೂ ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅವರ ಸಾಧನೆಯ ಸ್ಮರಣೆ ಕಾರ್ಯಕ್ರಮ ನಡೆದಿತ್ತು.

ಇದನ್ನೂ ಓದಿ: ಮಾ.3 ರಿಂದ 13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆರಂಭ - ಪುರಾಣಿಕ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.