ಬೆಂಗಳೂರು: ಹೆನ್ನಾಗರ ಗೇಟ್ ಬಳಿ 4 ದಿನದಿಂದ ನಿಲ್ಲಿಸಿದ್ದ ಕಾರಿನಲ್ಲಿ ಯುವಕನ ಮೃತದೇಹ ಪತ್ತೆಯಾಗಿದೆ. ಕಾರಿನಿಂದ ಕೆಟ್ಟ ವಾಸನೆ ಬರುತ್ತಿದ್ದರಿಂದ ಸ್ಥಳೀಯರು ಪರಿಶೀಲಿಸಿದ್ದಾರೆ. ಆಗ ಅನುಮಾನಾಸ್ಪದ ರೀತಿಯಲ್ಲಿ ಯುವಕ ಸಾವಿಗೀಡಾಗಿರುವುದು ಕಂಡುಬಂದಿದೆ.
ಕೆಎ 51 ಎಂಎಂ 9885 ಸಂಖ್ಯೆಯ ಕಾರಿನಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಮೃತನನ್ನು ಬೆಂಗಳೂರಿನ ವೀರಭದ್ರನಗರ ನಿವಾಸಿ ಚೇತನ್ ಕುಮಾರ್ (35) ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: ಹೆಬ್ಬಗೋಡಿಯ ಮನೆಯಲ್ಲಿ ಮಹಿಳೆ ಕೊಲೆ; ಗಂಡನಿಂದಲೇ ಕೃತ್ಯ ಶಂಕೆ
ತಿರುಪತಿಗೆ ಹೋಗಿ ಬರುತ್ತೇನೆ ಎಂದು ಮನೆಯಿಂದ ತೆರಳಿ, ಮಾರ್ಗ ಮಧ್ಯದಲ್ಲಿ ಕಾರಿನ ಡ್ರೈವರ್ ಸೀಟಿನಲ್ಲೇ ಕುಳಿತಲ್ಲೇ ಮೃತಪಟ್ಟಿದ್ದಾರೆ. ಇದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಹೆಬ್ಬಗೋಡಿ ಪೊಲೀಸರು ಕಾರಿಂದ ಮೃತದೇಹ ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.