ETV Bharat / state

ಬಿಎಂಟಿಸಿಯ ಮೊದಲ ಎಲೆಕ್ಟ್ರಿಕ್ ಬಸ್​ ನಾಳೆ ಅನಾವರಣ; ರಸ್ತೆಗಿಳಿಯೋದು ಯಾವಾಗ? - BMTC

ಸಿಲಿಕಾನ್​ ಸಿಟಿಯಲ್ಲಿ ಬಿಎಂಟಿಸಿಯ ಮೊದಲ ಎಲೆಕ್ಟ್ರಿಕ್ ಬಸ್ ಗುರುವಾರ ಅನಾವರಣಗೊಳ್ಳಲಿದೆ. ಬಿಎಂಟಿಸಿಯ ಘಟಕ 37ರ ಕೆಂಗೇರಿಯಲ್ಲಿ ಸಾರಿಗೆ ಸಚಿವರು ನೂತನ ಎಲೆಕ್ಟ್ರಿಕ್ ಬಸ್ಸಿಗೆ ಹಸಿರು ನಿಶಾನೆ ತೋರಿಸಲಿದ್ದಾರೆ.

BMTC to unveils its first electric bus tomorrow
ಎಲೆಕ್ಟ್ರಿಕ್ ಬಸ್ಸು
author img

By

Published : Sep 29, 2021, 10:09 PM IST

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಯಾವಾಗಪ್ಪ ಎಲೆಕ್ಟ್ರಿಕ್ ಬಸ್ಸು ಓಡಾಡುತ್ತೆ ಅಂತಾ ಎದುರು ನೋಡುತ್ತಿದ್ದ ಜನರಿಗೆ ಬಿಎಂಟಿಸಿ ಗುಡ್​​ನ್ಯೂಸ್​ ನೀಡಿದೆ. ಬಿಎಂಟಿಸಿಯ ಮೊದಲ ಎಲೆಕ್ಟ್ರಿಕ್ ಬಸ್​ಗೆ ಮುಹೂರ್ತ ಫಿಕ್ಸ್ ಆಗಿದ್ದು ನಾಳೆ ಅನಾವರಣಗೊಳ್ಳಲಿದೆ.

ಬಿಎಂಟಿಸಿಯ ಘಟಕ 37ರ ಕೆಂಗೇರಿಯಲ್ಲಿ ಸಂಸ್ಥೆಯ ಮೊದಲ ವಿದ್ಯುತ್ ಬಸ್ಸಿನ ಅನಾವರಣ ಸಚಿವ ಶ್ರೀರಾಮುಲು ನೇತೃತ್ವದಲ್ಲಿ ಆಗಲಿದೆ.ಕೋವಿಡ್ -19 ಸಾಂಕ್ರಾಮಿಕ ರೋಗದ ಎರಡನೇ ಅಲೆಯ ಮುನ್ನ, ನಿಗಮವು ಸ್ಮಾರ್ಟ್ ಸಿಟಿ ಯೋಜನೆಯಡಿ 90 ನಾನ್ ಎಸಿ ಇ-ಬಸ್‌ಗಳನ್ನು ರಸ್ತೆಗಿಳಿಸಲು ತೀರ್ಮಾನಿಸಿತ್ತು. ಆದರೆ ಕೋವಿಡ್​ನಿಂದಾಗಿ ಇ-ಬಸ್‌ಗಳ ಸೇವೆ ಪ್ರಾರಂಭಮಾಡಲು ಸಾಧ್ಯವಾಗಿರಲಿಲ್ಲ.

9 ಮೀಟರ್ ಉದ್ದದ 31 ಆಸನಗಳ ಇ-ಬಸ್ ಲಭ್ಯವಾಗುತ್ತಿದ್ದು, ಇ-ಬಸ್ ಸ್ವೀಕರಿಸಿದ ನಂತರ ಟೆಂಡರ್‌ನಲ್ಲಿನ ನಿರ್ದಿಷ್ಟತೆಗಳ ಪ್ರಕಾರ ವಾಹನವನ್ನು ಪೂರೈಸಲಾಗಿರುವುದನ್ನು ಖಚಿತಪಡಿಸಿಕೊಳ್ಳಲು ನಗರದ ರಸ್ತೆಗಳಲ್ಲಿ ಓಡಿಸಲಾಗುತ್ತದೆ. ಅನುಮೋದನೆ ನೀಡಿದ ನಂತರ ಉಳಿದ ಇ-ಬಸ್‌ಗಳನ್ನು ತರಿಸಿಕೊಂಡು ರೋಡಿಗಿಳಿಸಲಾಗುವುದು. ಸದ್ಯಕ್ಕೆ ಪ್ರಾಯೋಗಿಕವಾಗಿ ಒಂದು ಇ-ಬಸ್ಸು ರೋಡಿಗಿಳಿಯಲಿದೆ.

ಇನ್ನು ಬಿಎಂಟಿಸಿ ಇ-ಬಸ್‌ಗಳನ್ನು ಒಟ್ಟು ವೆಚ್ಚದ ಒಪ್ಪಂದ (ಜಿಸಿಸಿ) ಆಧಾರದ ಮೇಲೆ ನಿರ್ವಹಿಸುತ್ತದೆ. ನಿಗಮವು ವಿದ್ಯುತ್ ಬಳಕೆ ಸೇರಿದಂತೆ ಆಪರೇಟರ್‌ಗೆ ಪ್ರತಿ ಕಿಲೋಮೀಟರಿಗೆ 51 ರೂ ಪಾವತಿಸಲಿದೆ. ಟೆಂಡರ್ ಕಂಪೆನಿಯೇ ಡ್ರೈವರ್ ನೇಮಿಸಲಿದ್ದು, ಕಂಡಕ್ಟರ್ ಅನ್ನು ನಿಗಮ ನೇಮಿಸಲಿದೆ.

ಸ್ಮಾರ್ಟ್ ಸಿಟಿ ಪ್ರಾಜೆಕ್ಟ್:

ಸ್ಮಾರ್ಟ್ ಸಿಟಿ ಯೋಜನೆಯ ಜೊತೆಗೆ, ನಿಗಮವು ಇ- ಬಸ್​ಗಳನ್ನು ಫೇಮ್ II ಯೋಜನೆಯಡಿ (ಭಾರತದಲ್ಲಿ ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ವಾಹನಗಳನ್ನು ವೇಗವಾಗಿ ಅಳವಡಿಸಿಕೊಳ್ಳುವುದು ಮತ್ತು ತಯಾರಿಕೆ) ಯೋಜನೆಯನ್ನು ಜಾರಿಗೊಳಿಸಲಿದೆ. ಮೊದಲೇ ಟೆಂಡರ್ ನೀಡಲಾಗಿದ್ದರೂ, ಉಲ್ಲೇಖಿಸಿದ ಕಾರ್ಯಾಚರಣೆಯ ವೆಚ್ಚವು ಬಿಎಂಟಿಸಿಗೆ ಒಗ್ಗದ ಕಾರಣ ರದ್ದುಪಡಿಸಲಾಗಿತ್ತು. ನಿಗಮವು ಫೇಮ್ II ಅಡಿಯಲ್ಲಿ 300 ಎಸಿ ಇ-ಬಸ್​​ಗಳನ್ನು ನಿರ್ವಹಿಸಲು ಯೋಜಿಸಿದೆ. ಕೋವಿಡ್ -19 ಸಾಂಕ್ರಾಮಿಕ ರೋಗ ಹರಡಿದ ನಂತರ, ಬಹುಪಾಲು ಎಸಿ ಇ-ಬಸ್ಸುಗಳು ರಸ್ತೆಗಳಿಂದ ಹೊರಗುಳಿದವು. ಬಿಎಂಟಿಸಿ ಯೋಜನೆಯನ್ನು ಬದಲಿಸಲು ಮತ್ತು 300 ನಾನ್​ ಎಸಿ ಇ- ಬಸ್​ಗಳನ್ನು ನಿರ್ವಹಿಸಲು ಟೆಂಡರ್ ಪ್ರಕ್ರಿಯೆಗೆ ತೀರ್ಮಾನಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.