ETV Bharat / state

ಜ್ಞಾನಭಾರತಿ ವಿವಿಯಲ್ಲಿ ವಿದ್ಯಾರ್ಥಿನಿ ಮೇಲೆ ಹರಿದ ಬಿಎಂಟಿಸಿ ಬಸ್.. ವಿದ್ಯಾರ್ಥಿಗಳಿಂದ ಪ್ರತಿಭಟನೆ - ವಿದ್ಯಾರ್ಥಿಗಳಿಂದ ಪ್ರತಿಭಟನೆ

ವಿದ್ಯಾರ್ಥಿನಿ ಮೇಲೆ ಬಿಎಂಟಿಸಿ ಬಸ್ ಹರಿದ ಘಟನೆ ಬೆಂಗಳೂರಿನ ಜ್ಞಾನಭಾರತಿ ವಿಶ್ವವಿದ್ಯಾಲಯ ಕ್ಯಾಂಪಸ್​ನಲ್ಲಿ ನಡೆದಿದ್ದು, ಘಟನೆ ಖಂಡಿಸಿ ನೂರಾರು ವಿದ್ಯಾರ್ಥಿಗಳು ‌ಪ್ರತಿಭಟನೆ ನಡೆಸುತ್ತಿದ್ದಾರೆ.

ವಿದ್ಯಾರ್ಥಿಗಳಿಂದ ಪ್ರತಿಭಟನೆ
bmtc bus ran over student
author img

By

Published : Oct 10, 2022, 2:11 PM IST

Updated : Oct 10, 2022, 2:18 PM IST

ಬೆಂಗಳೂರು: ಬಸ್ ಹತ್ತುವಾಗ ಆಯತಪ್ಪಿ ಕೆಳಗೆ ಬಿದ್ದ ವಿದ್ಯಾರ್ಥಿನಿಯ ಮೇಲೆ ಬಿಎಂಟಿಸಿ ಬಸ್ ಹರಿದ ಪರಿಣಾಮ ಯುವತಿ ಗಂಭೀರವಾಗಿ ಗಾಯಗೊಂಡ ಘಟನೆ ಬೆಂಗಳೂರಿನ ಜ್ಞಾನಭಾರತಿ ವಿಶ್ವವಿದ್ಯಾಲಯ ಕ್ಯಾಂಪಸ್​ನಲ್ಲಿ ನಡೆದಿದೆ.

ಬಸ್ ಹತ್ತುವಾಗ ಕೆಳಗೆ ಬಿದ್ದ ಯುವತಿಯನ್ನು ಗಮನಿಸದೇ ಚಾಲಕ ಬಸ್ ಮುಂದಕ್ಕೆ ಚಲಾಯಿಸಿ ಅಜಾಗರೂಕತೆ ತೋರಿದ್ದಾನೆ. ಈ ಹಿನ್ನೆಲೆ ಯುವತಿ ಸೊಂಟದ ಮೇಲೆ ಬಸ್ ಹರಿದಿದ್ದು, ವಿದ್ಯಾರ್ಥಿನಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.

ಜ್ಞಾನಭಾರತಿ ವಿವಿಯಲ್ಲಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

ಇದನ್ನೂ ಓದಿ: ಹುಬ್ಬಳ್ಳಿ ಬಳಿ KSRTC ಬಸ್ ಪಲ್ಟಿ: ಬಸ್​ನಡಿ ಸಿಲುಕಿದ ಪ್ರಯಾಣಿಕರು... ರಕ್ಷಿಸುವಂತೆ ಗೋಗರೆದರೂ ನಿಸ್ಸಹಾಯಕರಾದ ಜನ

ಕೋಲಾರ ಮೂಲದ ಶಿಲ್ಪ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರು ಮೊದಲ ವರ್ಷದ ಪಿಜಿ ವ್ಯಾಸಂಗ ಮಾಡುತ್ತಿದ್ದಾರೆ. ಘಟನೆ ಖಂಡಿಸಿ ನೂರಾರು ವಿದ್ಯಾರ್ಥಿಗಳು ‌ಪ್ರತಿಭಟನೆ ನಡೆಸುತ್ತಿದ್ದಾರೆ.

Last Updated : Oct 10, 2022, 2:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.