ಬೆಂಗಳೂರು: ಮಹಿಳಾ ಪೇದೆ ಹಿಂದೆ ಪ್ರೀತ್ಸೆ ಪ್ರೀತ್ಸೆ ಎಂದು ಪಾಗಲ್ ಪ್ರೇಮಿ ಪೇದೆ ಬಿದ್ದಿರುವ ಘಟನೆ ಇದೀಗ ಬೆಳಕಿಗೆ ಬಂದಿದೆ.
ಇಲ್ಲಿನ ವಿವೇಕನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಪೇದೆ ಸಂತೋಷ್ಗೆ ಇದೇ ಠಾಣೆಯ ಮಹಿಳಾ ಪೇದೆ ಪರಿಚಯವಾಗಿ ಪ್ರೀತಿಸುವಂತೆ ದುಂಬಾಲು ಬಿದ್ದಿದ್ದ. ನಂತರ 25 ವರ್ಷದ ಮಹಿಳಾ ಪೇದೆಗೆ ಪ್ರೀತಿಸುವಂತೆ ಪ್ರೇಮ ನಿವೇದನೆ ಮಾಡಿದ್ದ. ಆ ನಂತರ ಇಬ್ಬರು ಪರಸ್ಪರ ಪ್ರೀತಿ ಮಾಡಿದ್ದರು.
ಆದರೆ, ಪೇದೆ ಸಂತೋಷ್ ಮನೆಯಲ್ಲಿ ಇವರಿಬ್ಬರ ಮದುವೆಗೆ ಒಪ್ಪದಿದ್ದಾಗ ಮಹಿಳಾ ಪೇದೆ ಜೊತೆ ಮಾತು ಬಿಟ್ಟಿದ್ದ. ಇದರಿಂದ ಮಹಿಳಾ ಪೇದೆ ಎಷ್ಟೇ ಕರೆ ಮಾಡಿದರೂ ಸಂತೋಷ್ ಮಾತನಾಡಿರಲಿಲ್ಲ. ಹೀಗಾಗಿ ಸಂತೋಷ್ ವಿರುದ್ಧ ನೊಂದ ಮಹಿಳಾ ಪೇದೆ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.