ಬೆಂಗಳೂರು: ಮೊದಲ ಪತಿಗೆ ವಿಚ್ಛೇದನ ನೀಡಿ, ಯಾರಿಗೂ ತಿಳಿಯದ ಹಾಗೆ ಎರಡನೇ ಮದುವೆಯಾಗಿದ್ದ ಮಹಿಳೆಯೋರ್ವಳು ಇದೀಗ ಪೇಚಿಗೆ ಸಿಲುಕಿರುವ ಪ್ರಕರಣ ನಗರದಲ್ಲಿ ಬೆಳಕಿಗೆ ಬಂದಿದೆ.
ಬನಶಂಕರಿ ನಿವಾಸಿಯಾಗಿರುವ ಸಂತ್ರಸ್ತೆ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡ್ತಿದ್ದರು. ಮದನ್ ಎಂಬಾತ ಮಹಿಳೆಗೆ ಪ್ರೀತಿಸುವಂತೆ ಹಿಂದೆ ಬಿದ್ದಾಗ ವಿಚ್ಛೇದನ ಪಡೆದಿದ್ದ ಮಹಿಳೆ ಮದನ್ಗೆ ಒಪ್ಪಿಗೆ ಸೂಚಿದ್ದರು. ಮೊದ-ಮೊದಲು ಆತನನ್ನ ನಿರ್ಲಕ್ಷ್ಯಿಸಿದ್ರು, ಕೊನೆಗೆ ಆತನ ಪ್ರೀತಿಗೆ ಮರುಳಾಗಿ ಲಿವಿಂಗ್ ಟುಗೆದರ್(ಸಹಜೀವನ) ರಿಲೇಷನ್ ಶಿಪ್ನಲ್ಲಿ ಮಹಿಳೆ ಹಾಗೂ ಆಕೆಯ ಮಗಳು ವಾಸವಿದ್ರು. ಬಳಿಕ ದೇವಸ್ಥಾನಕ್ಕೆ ತೆರಳಿ ಮದುವೆ ಮಾಡಿಕೊಂಡಿದ್ರು.
ಈ ವಿಚಾರ ಮದನ್ ಮನೆಯಲ್ಲಿ ತಿಳಿಯುತ್ತಿದ್ದಂತೆ ಆತನಿಗೆ ಬೇರೆ ಯುವತಿ ಜೊತೆ ಮದುವೆ ಮಾಡಲು ಪ್ಲಾನ್ ಮಾಡಿದ್ದಾರೆ. ಇತ್ತ ಮದನ್ ಕೂಡಾ ಮಾತು ಬದಲಾಯಿಸಿದ್ದ. ನಾನು ನಿನ್ನ ಜೊತೆ ಬಾಳಬೇಕಾದರೆ 20 ಲಕ್ಷ ರೂಪಾಯಿ ಕೊಡುವಂತೆ ಟಾರ್ಚರ್ ಕೊಡುತ್ತಿದ್ದ ಎನ್ನಲಾಗ್ತಿದೆ. ಅಷ್ಟೇ ಅಲ್ಲದೇ ಸಂತ್ರಸ್ತೆಯ ಖಾಸಗಿ ಫೋಟೋವನ್ನ ಸೆರೆಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡುವುದಾಗಿ ಬೆದರಿಸಿದ್ದಾನೆ ಎಂದು ನೊಂದ ಮಹಿಳೆ ಆರೋಪಿಸಿದ್ದಾರೆ. ಸದ್ಯ ಮಹಿಳೆ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.